ಯುವವಾಹಿನಿ ಹೆಜಮಾಡಿಯಿಂದ ತುಳುವೆರೆ ತುಡರ ಪರ್ಬ

ಪಡುಬಿದ್ರಿ: ಜೀವನದಲ್ಲಿ ಅನೇಕ ಏಳುಬೀಳುಗಳ ನಡುವೆ ವಿಶೇಷವಾದ ಸಾಧನೆಗೈಯಲು ದೇವರ ದಯೆ ಅತ್ಯಗತ್ಯವಾಗಿದೆ ಎಂದು ದಕ್ಷಿಣ ಭಾರತದ ಬಹುಭಾಷಾ ನಟ, ಮೂಲತಃ ಹೆಜಮಾಡಿಯವರಾದ ಸುಮನ್ ತಲ್ವಾರ್ ಹೇಳಿದರು.
ಹೆಜಮಾಡಿ ಯುವವಾಹಿನಿ ಘಟಕದ ವತಿಯಿಂದ ನಡೆದ 8ನೇ ವರ್ಷದ ತುಳುವೆರೆ ತುಡರ ಪರ್ಬದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹೆಜಮಾಡಿ ಯುವವಾಹಿನಿ ಘಟಕದ ಅಧ್ಯಕ್ಷೆ ಚಂದ್ರಾವತಿ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್‍ಕುಮಾರ್ ಸಸಿಹಿತ್ಲು, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಹೆಜಮಾಡಿ ಶ್ರೀ ಬ್ರಹ್ಮಲಿಂಗೇಶ್ವರ ಆಲಡೆಯ ಪ್ರಧಾನ ಅಧ್ಯಕ್ಷ ಶ್ರೀನಿವಾಸ ಭಟ್, ನಾರಾಯಣ ಗುರು ಅರ್ಬನ್ ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷ ಹರಿಶ್ಚಂದ್ರ ಅಮೀನ್ ಕಟಪಾಡಿ, ನ್ಯಾಯವಾದಿ ಮೆಲ್ವಿನ್ ಡಿಸೋಜಾ ಶಿರ್ವ, ಉದ್ಯಮಿ ಶೇಖಬ್ಬ ಉಚ್ಚಿಲ, ಯುವವಾಹಿನಿಯ ಕಾರ್ಯದರ್ಶಿ ರಾಕೇಶ್, ಕಾರ್ಯಕ್ರಮ ನಿರ್ದೇಶಕ ಮಹೇಂದ್ರ ಸಾಲ್ಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಚರಣೆಯ ಪೂಜಾವಿಧಿಗಳನ್ನು ಹೆಜಮಾಡಿ ಗುರು ಮಂದಿರದ ಅರ್ಚಕ ಹರೀಶ್ ಶಾಂತಿ ನಡೆಸಿಕೊಟ್ಟರು.
ಯುವವಾಹಿನಿ ಹೆಜಮಾಡಿ ಘಟಕದ ಪೂರ್ವಾಧ್ಯಕ್ಷ ಪ್ರಬೋದ್‍ಚಂದ್ರ ಹೆಜ್ಮಾಡಿ ಪ್ರಸ್ತಾವಿಸಿದರು. ಚಂದ್ರಾವತಿ ಹರೀಶ್ ಸ್ವಾಗತಿಸಿದರು. ಮನೋಹರ ಹೆಜ್ಮಾಡಿ ಮತ್ತು ಧೀರಜ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು. ರಾಕೇಶ್ ವಂದಿಸಿದರು.