ಯುವಕರು ರಕ್ತದಾನಕ್ಕಾಗಿ ಮುಂದೆ ಬರಬೇಕು-ಡಾ.ಭವಾನಿಶಂಕರ್

ಪಡುಬಿದ್ರಿಯಲ್ಲಿ ರಕ್ತದಾನ ಶಿಬಿರ ಮತ್ತು ಕ್ರಿಕೆಟ್ ಪಂದ್ಯಾಟ ಆರಂಭ

ಪಡುಬಿದ್ರಿ: ದೇಶದಲ್ಲಿ ರಕ್ತದಾನಿಗಳ ಕೊರತೆಯಿದ್ದು ಯುವ ಪೀಳೀಗೆ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡು ಮುಂದೆ ಬರಬೇಕೆಂದು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಹಿರಿಯ ನೇತ್ರ ತಜ್ಞ ಡಾ.ಭವಾನಿಶಂಕರ್ ಹೇಳಿದರು.

ಅವರು ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ಆಪತ್ಬಾಂಧವ ಫ್ರೆಂಡ್ಸ್,ಕರ್ನಾಟಕ ಬ್ಲಡ್ ಹೆಲ್ತ್‍ಕೇರ್ ಮತ್ತು ದೇರಳಕಟ್ಟೆ ಯೇನಪೋಯ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಬೃಹತ್ ರಕ್ತದಾನ ಶಿಬಿರದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮಾರಂದ ಮುಖ್ಯ ಅತಿಥಿ ಕಾಪು ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ,ವಿವಿಧ ಬಗೆಯ ಕ್ರೀಡೆಗಳನ್ನು ಪಡುಬಿದ್ರಿಯಲ್ಲಿ ಆಯೋಜಿಸುವ ಮೂಲಕ ಪಡುಬಿದ್ರಿ ಜಿಲ್ಲೆಯ ಪ್ರಮುಖ ಕ್ರೀಡಾಕೇಂದ್ರವಾಗಿ ಹೊರಹೊಮ್ಮಿದೆ.ಜತೆಗೆ ಪರಸ್ಪರ ಸಾಮರಸ್ಯಕ್ಕೆ ಒತ್ತುಕೊಡುವ ಮೂಲಕ ಸಾಮಾಜಿಕ ಬೆಳವಣಿಗೆಗೂ ಕಾರಣವಾಗಿದೆ ಎಂದರು.

ಸ್ವಯಂ ರಕ್ತದಾನಗೈಯ್ಯುವ ಮೂಲಕ ಕಾರ್ಯಕ್ರಮಮಕ್ಕೆ ಚಾಲನೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್,ಸಾಮಾಜಿಕ ಸೇವೆಯ ಮೂಲಕ ಸಂಘಟಕ ಮೊಹಮ್ಮದ್ ಆಸಿಫ್‍ರವರು ಆಪತ್ಬಾಂಧವ ಅನ್ವರ್ಥನಾಮಕ್ಕೆ ಸಾರ್ಥಕತೆ ಪಡೆದುಕೊಂಡಿದ್ದಾರೆ ಎಂದರು.
ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ: ಇದೇ ಸಂದರ್ಭ ಆಪತ್ಬಾಂಧವ ಫ್ರೆಂಡ್ಸ್ ವತಿಯಿಂದ ಎರಡು ದಿನಗಳ ಕಾಲ(ಭಾನುವಾರ ಮತ್ತು ಮಂಗಳವಾರ)ನಡೆಯಲಿರುವ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟಕ್ಕೆ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮತ್ತು ಅನ್ಸಾರ್ ಅಹಮದ್ ಚಾಲನೆ ನೀಡಿದರು.

ಜೇಸಿಐ ಪಡುಬಿದ್ರಿಯ ಪೂರ್ವಾಧ್ಯಕ್ಷ ಹಾಗೂ ಪತ್ರಕರ್ತ ಹರೀಶ್ ಕುಮಾರ್ ಹೆಜ್ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ದೇಶದಲ್ಲಿಯೇ ಪ್ರಥಮ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಿದ ಕೀರ್ತಿ ಪಡುಬಿದ್ರಿಗೆ ಸಲ್ಲುತ್ತದೆ ಎಂದರು.

ಸನ್ಮಾನ: ಈ ಬಾರಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಆಪತ್ಬಾಂಧವ ಆಸಿಫ್‍ರನ್ನು ಕರ್ನಾಟಕ ಬ್ಲಡ್ ಹೆಲ್ತ್ ಕೇರ್ ವತಿಯಿಂದ ಸನ್ಮಾನಿಸಲಾಯಿತು.

ಕರ್ನಾಟಕ ಬ್ಲಡ್ ಹೆಲ್ತ್ ಕೇರ್ ವ್ಯವಸ್ಥಾಪಕ ಶಂಶುದ್ದೀನ್ ಬಳ್ಕುಂಜೆ,ಕ್ಯಾಂಪ್ ಇನ್‍ಚಾರ್ಜ್ ಅಲ್ಮಾಝ್ ಉಳ್ಳಾಲ,ಮಂಗಳೂರು ಸುಲ್ತಾನ್ ಗೋಲ್ಡ್ ಮತ್ತು ಡೈಮಂಡ್ಸ್‍ನ ಎಸ್‍ಪಿ ಫಯಾಝ್,ರಕ್ಷಣಾ ವೇದಿಕೆಯ ಕಾಪು ಘಟಕಾಧ್ಯಕ್ಷ ಎಮ್‍ಎಸ್ ನಿಜಾಮುದ್ದೀನ್,ಎಸ್‍ಡಿಪಿಐ ಮಾಜಿ ಸದಸ್ಯ ಸಿಪಿ ಫಿರೋಝ್ ಕಂಚಿನಡ್ಕ,ಸಮಾಜಸೇವಕ ಅಬ್ದುಲ್ ರಝಾಕ್,ಬ್ಜಡ್ ಬ್ಯಾಂಕ್‍ನ ಡಾ.ಮೊಹಮ್ಮದ್ ಶರೀಫ್,ಆಪತ್ಬಾಂಧವ ಫ್ರೆಂಡ್ಸ್ ಅಧ್ಯಕ್ಷ ಹಸನ್ ಬಾವ ಕಂಚಿನಡ್ಕ,ಸಂಘಟಕ ಮೊಹಮ್ಮದ್ ಆಸಿಫ್ ಮುಖ್ಯ ಅತಿಥಿಗಳಾಗಿದ್ದರು.
ರಜಾಕ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.