ಮೂಲ್ಕಿ: ಸಿನೋದ್ ಶಿಲುಬೆ ಹಸ್ತಾಂತರ

ಮೂಲ್ಕಿ: ಅಕ್ಟೋಬರ್ 24 ರಿಂದ 27 ರವರೆಗೆ ಬಳ್ಳಾರಿಯಲ್ಲಿ ನಡೆಯಲಿರುವ ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಯುವ ಸಮ್ಮೇಳನದ ಯಶಸ್ವಿಗಾಗಿ ಮಂಗಳೂರು ಧರ್ಮ ಪ್ರಾಂತ್ಯದ ಎಲ್ಲಾ ಚುರ್ಚುಗಳಲ್ಲಿ ಪ್ರಾರ್ಥಿಸಲು ಸಿನೋದ್ ಶಿಲುಬೆಯನ್ನು ಕಾಟಿಪಳ್ಳ ಇಗರ್ಜಿಯ ಧರ್ಮಗುರು ಫಾದರ್ ವೆಲೇರಿಯನ್ ಲೂವಿಸ್ ಮೆರವಣಿಗೆಯಲ್ಲಿ ಬಂದು ಮೂಲ್ಕಿ ಇಗರ್ಜಿಯ ಧರ್ಮಗುರು ಫಾದರ್ ಸಿಲ್ವೆಸ್ಟರ್ ಡಿಕೋಸ್ತಾರವರಿಗೆ ಹಸ್ತಾಂತರಿಸಿದರು.

ಶಿಲುಬೆಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೀನ್ ಮೋಲಿನ್ ಡಿಸೋಜಾ, ಕಾರ್ಯದರ್ಶಿ ಪ್ರಕಾಶ್ ಮೊಂತೇರೊ, ಮೂಲ್ಕಿ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ನಂದಿತಾ ಬಿ.ಎಸ್., ಐ.ಸಿ.ವೈ.ಎಮ್. ಮೂಲ್ಕಿ ಘಟಕದ ಅಧ್ಯಕ್ಷ ಸುಮಿತ್ ಕ್ರಾಸ್ತಾ, ಕಾರ್ಯದರ್ಶಿ ಮೊವಿನ್ ಡಿಸೋಜಾ, ಐ.ಸಿ.ವೈ.ಎಮ್. ಸಚೇತಕ ರಿಚರ್ಡ್ ಫುರ್ಟಾಡೋ, ಐ.ಸಿ.ವೈ.ಎಮ್. ಸುರತ್ಕಲ್ ವಲಯದ ಅಧ್ಯಕ್ಷ ಪ್ರದೀಪ್ ಫೆರಾವೊ, ಮೂಲ್ಕಿ ಐ.ಸಿ.ವೈ.ಎಮ್.ನ ಯುವ ಜನರು ಹಾಗೂ ಮೂಲ್ಕಿ ಇಗರ್ಜಿಯ ಭಕ್ತಾದಿಗಳು ಹಾಜರಿದ್ದರು.

ಈ ಶಿಲುಬೆಯು ಆಗಸ್ಟ್ 2 ವರೆಗೆ ಮೂಲ್ಕಿಯಲ್ಲಿ ಪೂಜಿಸಲ್ಪಟ್ಟು ಅ.2 ಸಂಜೆ 5.45ಕ್ಕೆ ಕಿನ್ನಿಗೋಳಿ ವಲಯದ ಪಕ್ಷಿಕೆರೆ ಇಗರ್ಜಿಗೆ ಹಸ್ತಾಂತರಿಸಲಾಗುವುದು.

ಫೋಟೋ: ಕರ್ನಾಟಕ ಪ್ರಾಂತೀಯ ಕಥೋಲಿಕ್ ಯುವ ಸಮ್ಮೇಳನದ ಸಿನೊದ್ ಶಿಲುಬೆ ಮೂಲ್ಕಿ ಚರ್ಚ್‍ಗೆ ಹಸ್ತಾಂತರಿಸಲಾಯಿತು.