ಮೂಲ್ಕಿ ಸಿಎಸ್‍ಐ ಬಾಲಿಕಾಶ್ರಮದಲ್ಲಿ ಮಳೆ ನೀರು ಕೊಯ್ಲು

ಮೂಲ್ಕಿ: ಇಲ್ಲಿನ ಸಿಎಸ್‍ಐ ಚರ್ಚ್ ಆಡಳಿತದ ಬಾಲಿಕಾಶ್ರಮದ ಪುರಾತನ ಬಾವಿಗೆ ಮಳೆ ನೀರು ಕೊಯ್ಲು ಅಳವಡಿಸುವ ಕಾರ್ಯಕ್ರಮ ನಡೆಯಿತು.

ರಾಯಗಡದ ಅಲಿಭಾಗ ಜಿಲ್ಲಾ ದೇವರೆಂಡಾ ತಾಲೂಕಿನ ಡಾ. ಶ್ರೀ ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಪ್ರೇರಣೆಯಲ್ಲಿ “ಜಲ ಪುನರ್ ಭರಣ” ಸ್ಥಳೀಯ ಉಡುಪಿ ಜಿಲ್ಲಾ ತಂಡವು ಬಾಲಿಕಾಶ್ರಮದಲ್ಲಿ ಮಳೆ ನೀರು ಕೊಯ್ಲು ಯಶಸ್ವಿಯಾಗಿ ನಿರ್ವಹಿಸಿದೆ.
ಸುಮಾರು 100 ವರ್ಷಗಳ ಪುರಾತನ ಬಾವಿಗೆ ಹೊಂದಿಕೊಂಡು ಬಾಡ್ರಸ್, ಜಲ್ಲಿ ಮತ್ತು ಮರಳು ಬಳಸಿ ಬಾವಿ ಪಕ್ಕದಲ್ಲೇ ಶುದ್ಧೀಕರಿಸಿ ಬಾವಿಗೆ ಮಳೆ ನೀರನ್ನು ಹರಿಸುವ ಕಾರ್ಯಕ್ರಮಕ್ಕೆ ಸಿಎಸ್‍ಐ ಚರ್ಚ್ ಸಭಾಪಾಲಕ ರೆ.ಎಡ್ವರ್ಡ್ ಕರ್ಕಡ ಚಾಲನೆ ನೀಡಿದರು.


ಬಾಲಿಕಾಶ್ರಮದ ಮೇಲ್ಛಾವಣಿಗೆ ಬಿದ್ದ ಎಲ್ಲಾ ಮಳೆ ನೀರುಗಳನ್ನು ಪೈಪ್ ಅಳವಡಿಸಿ ಶುದ್ಧೀಕರಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಂತಹ ಹಲವಾರು ಯಶಸ್ವೀ ಮಳೆ ನೀರು ಕೊಯ್ಲುಗಳನ್ನು ಜಿಲ್ಲೆಯಾದ್ಯಂತ ನಡೆಸಿಕೊಟ್ಟಿರುವುದಾಗಿ ಸಂಘಟಕರು ತಿಳಿಸಿದ್ದಾರೆ.
ಚರ್ಚ್ ಕಾರ್ಡಿನೇಟರ್ ರೆಜಿನಾಲ್ಡ್ ಸೋನ್ಸ್, ಮಂಗಳೂರು ವಲಯ ಖಜಾಂಚಿ ರಂಜನ್ ಜತ್ತನ್ನ, ಮೂಲ್ಕಿಯ ಉದ್ಯಮಿ ಶಶಿ ಅಮೀನ್ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು.

ಬಾಲಿಕಾಶ್ರಮದ ವಾರ್ಡನ್ ಶಾಂತಿ ಸ್ವಾಗತಿಸಿದರು. ರೆ.ಶಶಿಕಲಾ ಅಂಚನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.