ಮೂಲ್ಕಿ ವಿಜ್ ಐಟಿ ಟೆಕ್‍ವೇವ್ಸ್-2019: ಕಟೀಲು ಎಸ್.ಡಿ.ಪಿ.ಟಿ ಪಿಯು ಕಾಲೀಜಿಗೆ ಪ್ರಶಸ್ತಿ

ಪ್ರಥಮ ಪ್ರಶಸ್ತಿ ಕಟೀಲು ಎಸ್.ಡಿ.ಪಿ.ಟಿ ಪಿಯು ಕಾಲೇಜು. ದ್ವಿತೀಯ ಪ್ರಶಸ್ತಿ ಪೂರ್ಣ ಪ್ರಜ್ಞಾ ಉಡುಪಿಗೆ

ಮೂಲ್ಕಿ: ಮೂಲ್ಕಿ ವಿಜಯ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ವತಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾಹಿತಿ ತಂತ್ರಜ್ಞಾನ ಸ್ಪರ್ಧೆ ವಿಜ್ ಐಟಿ ಟೆಕ್ ವೇವ್ಸ್-2019ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಪ್ರಶಸ್ತಿ ಗಳಿಸಿದೆ. ದ್ವಿತೀಯ ಪ್ರಶಸ್ತಿ ಪೂರ್ಣ ಪ್ರಜ್ಞಾ ಪಿಯು ಕಾಲೇಜು ಉಡುಪಿ ಪಡೆಯಿತು.

ಫಲಿತಾಂಶ:
ಲೀಡ್ ಆಫ್ ಸ್ಪರ್ಧೆ :ಎಸ್.ಡಿ.ಪಿಟಿ ಕಟೀಲು(ಪ್ರ)., ಪೂರ್ಣ ಪ್ರಜ್ಞಾ ಕಾಲೇಜು ಅದಮಾರು(ದ್ವಿತೀಯ)
ಟೋಗಲ್ ಟಾಕ್: ಸುಶಾನ್ ಕೋಟ್ಯಾನ್ ಎಸ್.ಡಿ.ಪಿ.ಟಿ ಕಟೀಲು (ಪ್ರ). ಆಶ್ಲಾನ್ ಸೆರಾಓ ಪೊಂಪೈ ಪಿಯು ಐಕಳ(ದ್ವಿ).
ಆಸ್ಪರೆಂಝ್ ಸ್ಪರ್ಧೆ: ವಿಘ್ನೇಶ್ ಕೆ.ರಾವ್ ಎಸ್.ಡಿ.ಪಿ.ಟಿ ಕಟೀಲು(ಪ್ರ), ನೀಲಾನ್ ಡಿಸೋಜಾ ಪೊಂಪೈ ಪಿಯು ಐಕಳ(ದ್ವಿ).
ಬ್ರೈನಿಯಾಕ್ ಸ್ಪರ್ಧೆ: ಶಶಾಂಕ್ ಮತ್ತು ನಿರ್ಮಿಶ್, ಪೂರ್ಣ ಪ್ರಜ್ಞಾ ಉಡುಪಿ(ಪ್ರ), ಕೃಷಿ ಕರ್ಕೇರ ಮತ್ತು ಬದ್ರುದ್ದೀನ್ ತನ್ಘೀಲ್, ಗೋವಿಂದದಾಸ ಪಿಯು ಸುರತ್ಕಲ್(ದ್ವಿ).
ಆಡ್‍ಮಾಡ್ ಸ್ಪರ್ಧೆ: ಕೀರ್ತಿಕಾ ಕೃಷ್ಣಮೂರ್ತಿ, ಬಿ.ವಿ ನಿಕ್ಷಿಪ್, ಮೊಹಮ್ಮದ್ ಒವೈಸಿ, ವಲೆಸ್ಸಾ ಡಿಸಿಲ್ವಾ, ಪೂರ್ಣಪ್ರಜ್ಞಾ ಪಿಯು ಉಡುಪಿ(ಪ್ರ), ಸಪ್ನಾ, ತೇಜಸ್, ಪ್ರೀತೇಶ್, ಶ್ರೀನಿಕೇತ್, ಪೂರ್ಣಪ್ರಜ್ಞಾ ಅದಮಾರು(ದ್ವಿ).
ಬೇಟಲ್ ಗ್ರೌಂಡ್ ಸ್ಪರ್ಧೆ: ಮನ್ವಿತ್ ಮತ್ತು ತೇಜಸ್, ಶ್ರೀ ನಾರಾಯಣಗುರು ಕಾಲೇಜು ಮೂಲ್ಕಿ(ಪ್ರ), ಅಫನಾನ್ ಅಹಮ್ಮದ್ ಮತ್ತು ಸರ್ವೇಶ್, ದಂಡತೀರ್ಥ ಪಿಯು ಕಾಪು(ದ್ವಿ).
ಹಾಕ್‍ಥಾನ್ ಸ್ಪರ್ಧೆ: ಆಲ್ಜಿತೇಶ್ ಮತ್ತು ಹರ್ಷಿತ್ ಪೂರ್ಣ ಪ್ರಜ್ಞಾ ಉಡುಪಿ(ಪ್ರ), ಹೆಗ್ಡೆ ಸುಮಂತ್ ಶ್ಯಾಮ್ ಮತ್ತು ರಜನೀಶ್, ಡಾ.ಎನ್‍ಎಸ್‍ಎಎಂ ಪಿಯು ನಿಟ್ಟೆ (ದ್ವಿ).
ವೇವ್ ಹಂಟರ್ ಸ್ಪರ್ಧೆ: ಆದಿತ್ಯ ಪೂಜಾರಿ ಶ್ರೀ ನಾರಾಯಣ ಗುರು ಕಾಲೇಜು ಮೂಲ್ಕಿ(ಪ್ರ)
ಕ್ಯಾಪ್ಚರ್ ದ ವೇವ್ ಸ್ಪರ್ಧೆ: ಭಾರ್ಗವ್ ಮತ್ತು ಗಗನ್ ಪೂರ್ಣ ಪ್ರಜ್ಞಾ ಉಡುಪಿ(ಪ್ರ), ಅದ್ವಿತ್ ಮತ್ತು ವಿಘ್ನೇಶ್, ಪೂರ್ಣ ಪ್ರಜ್ಞಾ ಅದಮಾರು(ದ್ವಿ)

ಪ್ರಶಸ್ತಿ ವಿತರಣೆ: ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಂ.ಆರ್.ಪಿ.ಎಲ್. ಕಾರ್ಪೋರೇಟ್ ಮತ್ತು ಕಮ್ಯುನಿಕೇಶನ್ ಟ್ರೈನಿಂಗ್ ವಿಭಾಗದ ಜನರಲ್ ಮ್ಯಾನೇಜರ್ ಬಿ.ಪ್ರಶಾಂತ್ ಬಾಳಿಗ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಿ ಶುಭ ಹಾರೈಸಿದರು.

ವಿಜಯಾ ಪದವಿ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಜ್ಯೋತಿ ಶಂಕರ್ ಸಾಲ್ಯಾನ್, ಕಂಪ್ಯೂಟರ್ ಫೋರಂ ಕಾರ್ಯದರ್ಶಿ ಅನೂಪ್ ಕಾಮತ್ ಉಪಸ್ಥಿತರಿದ್ದರು.

ಕಂಪ್ಯೂಟರ್ ಫೋರಂ ಅಧ್ಯಾಪಕ ಸಲಹೆದಾರರಾದ ಹÀರ್ಷಿತಾ ರಾವ್ ಸ್ವಾಗತಿಸಿದರು. ಸುಹಾನ್ ನಿರೂಪಿಸಿದರು. ನಾಗರಾಜ ರಾವ್ ವಂದಿಸಿದರು.

ಫೋಟೋ: ಮೂಲ್ಕಿ ವಿಜಯ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ವತಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾಹಿತಿ ತಂತ್ರಜ್ಞಾನ ಸ್ಪರ್ಧೆ ವಿಜ್ ಐಟಿ ಟೆಕ್ ವೇವ್ಸ್ 2019 ಪ್ರಥಮ ಪ್ರಶಸ್ತಿಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಪಡೆದುಕೊಂಡಿತು.