ಮೂಲ್ಕಿ ವಿಜಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ

ಮೂಲ್ಕಿ: ಮೂಲ್ಕಿ ವಿಜಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಮಕೃಷ್ಣ ಪೂಂಜ ಐ.ಟಿ.ಐ. ತೋಕೂರು ಇದರ ಪ್ರಾಂಶುಪಾಲ ವೈ. ಎನ್. ಸಾಲ್ಯಾನ್ ಭಾಗವಹಿಸಿದ್ದರು.

ಇಂದಿನ ಯುವ ಜನತೆ ಪ್ರಧಾನ ಮಂತ್ರಿಯವರ ಸ್ಕಿಲ್ ಇಂಡಿಯ, ಸ್ವಚ್ಛ ಭಾರತದ ಅನುಷ್ಠಾನವನ್ನು ನಡೆಸಲು ರಾಷ್ಟ್ರೀಯ ಸೇವಾ ಯೋಜನೆ ಹೇಗೆ ಸಹಕರಿಸುತ್ತದೆ, ವಿದ್ಯಾರ್ಥಿ ಜೀವನದಲ್ಲಿ ಬೇರೆ ಬೇರೆ ರೀತಿಯ ಸ್ಕಿಲ್‍ಗಳನ್ನು ಕಲಿತು ಉದ್ಯೋಗ ಗಳಿಸುವಲ್ಲಿ ಯಶಸ್ವಿಯಾಗುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು. ಜಲಸಂರಕ್ಷಣೆ ಹಾಗೂ ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಸಲಹೆಗಳನ್ನು ನೀಡಿದರು. ನೀರನ್ನು ಇಂಗಿಸುವ ಮೂಲಕ ಪರಿಸರ ಸ್ವಚ್ಛತೆಯನ್ನು ಕಾಪಾಡಿ ನವಭಾರತದ ನಿರ್ಮಾಣಕ್ಕೆ ಯುವ ಜನತೆ ಸಹಕರಿಸಬೇಕೆಂದು ತಿಳಿಸಿದರು.

ಇನ್ನೊಬ್ಬ ಮುಖ್ಯ ಅತಿಥಿ ಗಣಪತಿ ಕಾಮತ್ ಸಣ್ಣ ಉದ್ಯಮಿಗಳ ಮಹತ್ವವನ್ನು ಮತ್ತು ಸಂಶೋಧನೆಗಳನ್ನು ನಡೆಸಲು ಇರುವ ಅವಕಾಶಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ನಾರಾಯಣ ಪೂಜಾರಿ ವಹಿಸಿದ್ದರು.

ವಿಜಯ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪೆÇ್ರ| ಸ್ಯಾಮ್ ಮಾಬೆನ್ ಉಪಸ್ಥಿತರಿದ್ದರು.

ರಚನಾ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ರೇಶ್ಮಾ ಡಿ’ಸೋಜ ಹಾಗೂ ವಿನೀತ ಡಿ. ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ವೆಂಕಟೇಶ್ ಭಟ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಈ ವರ್ಷದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಡೆಸಿದ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಿದರು. ಅನುಷ ದಿವಾನ ಕಾರ್ಯಕ್ರಮ ನಿರೂಪಿಸಿದರು. ಸ್ನೇಹ ಶೆಣೈ ವಂದಿಸಿದರು.