ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘ – ಶೇ18 ಡಿವಿಡೆಂಟ್

ಮೂಲ್ಕಿ: ಗ್ರಾಮೀಣ ಕೃಷಿಕರ ಉನ್ನತಿಗಾಗಿ ಮೂಲ್ಕಿ ಸುಂದರರಾಮ ಶೆಟ್ಟಿಯವರ ನಿದೇಶನದಲ್ಲಿ ಸ್ಥಾಪಿತಗೊಂಡ ಸಹಕಾರಿ ಸಂಘವು ಈ ಬಾರಿ “ಎ” ಗ್ರೇಡ್ ಸಹಿತ ರೂ.39 ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಹೊಂದಿದ್ದು ಸದಸ್ಯರಿಗೆ ಶೇ.18ರಂತೆ ಲಾಭಾಂಶ ವಿತರಿಸಲಾಗುವುದು ಎಂದು ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ನಡೆದ ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ 43ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೃಷಿಕರು ಹಾಗೂ ಹೈನುಗಾರರ ಅಭಿವೃದ್ಧಿಗಾಗಿ ಸಂಘವು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ ಎಂದರು.

ಸನ್ಮಾನ: ಈ ಸಂದರ್ಭ ಪ್ರಗತಿ ಪರ ಕೃಷಿಕರಾದ ಚಿತ್ತರಂಜನ್ ಶೆಟ್ಟಿ ಉಳೆಪಾಡಿ, ಐತಪ್ಪ ಸಾಲ್ಯಾನ್ ಕೊಲ್ಲೂರು, ವಿನ್ಸೆಂಟ್ ಡಿಸೋಜ ಅತಿಕಾರಿಬೆಟ್ಟು, ಚಿಂತರಾಯ ಹೂಗಾರ್ ಕೆ.ಎಸ್.ರಾವ್ ನಗರ, ಸುಶೀಲಾ ಶೆಟ್ಟಿ ಶಿಮಂತೂರುರವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ: ಪಿಯುಸಿ ಸಾಧಕ ವಿದ್ಯಾರ್ಥಿಗಳಾದ ಡೆಲ್ಮಾ ರಿಯೋನಾ ಡಿಸೋಜ ಬಳ್ಕುಂಜೆ, ಸ್ವಿಡಲ್ ಡಿಸೋಜ ಬಳ್ಕುಂಜೆ, ಡೇಸನ್ ಡಿಮೆಲ್ಲೋ ಕೊಲ್ಲೂರು, ಜಾಕ್ಸನ್ ರೆಬೆಲ್ಲೊ ಬಳ್ಕುಂಜೆ, ರಕ್ಷಾ.ವಿ.ಶೆಟ್ಟಿ ಶಿಮಂತೂರು, ಸಂಪತ್ ಅತಿಕಾರಿಬೆಟ್ಟು, ಎಸ್‍ಎಸ್‍ಎಲ್‍ಸಿ ಸಾಧಕ ವಿದ್ಯಾರ್ಥಿಗಳಾದ ಕ್ಲೆರೆಸ್ಸಾ ಮರಿಯಾ ಕಾರ್ಡೋಜಾ ಬಳ್ಕುಂಜೆ, ಸೂರಜ್ ಅತಿಕಾರಿಬೆಟ್ಟು, ಇಶಾ ಕಿಲ್ಪಾಡಿ, ಸ್ವಾತಿ ಕೊಲ್ಲೂರು, ವಿನ್ಯಾಸ್.ವಿ.ಅಮೀನ್ ಅತಿಕಾರಿಬೆಟ್ಟು, ಸಾತ್ವಿಕ್ ಶಿಮಂತೂರು, ತನ್ವಿತಾ ಉಳೆಪಾಡಿ, ಕಾರ್ತಿಕ್ ಆರ್. ಕೋಟ್ಯಾನ್ ಕಾರ್ನಾಡು, ಬ್ರಿಟ್ನ್ ಡಿಸೋಜ ಬಳ್ಕುಂಜೆ, ವರುಣ್ ಎಸ್. ಅಮೀನ್ ಅತಿಕಾರಿಬೆಟ್ಟು, ಕಾಶೀಬಾಯಿ ಕೆ.ಎಸ್.ರಾವ್ ನಗರ, ಪ್ರಜ್ವಲ್ ವಿ.ಹಾವರೆಡ್ಡಿ ಕೆಎಸ್‍ರಾವ್ ನಗರ ವಿದ್ಯಾರ್ಥಿವೇತನದೊಂದಿಗೆ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ವಹಿಸಿದ್ದರು.

ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಆಡಳಿತ ನಿರ್ದೇಶಕ ಜೇಸನ್ ಕ್ರಿಸ್ಟೋಫರ್ ಪುರ್ಟಾಡೊ, ನಿರ್ದೇಶಕರಾದ ಗಂಗಾಧರ ಶೆಟ್ಟಿ, ಅಶೋಕ್ ಕುಮಾರ್ ಚಿತ್ರಾಪು, ತಿಮ್ಮಪ್ಪ ಶೆಟ್ಟಿ, ನರಸಿಂಹ ಪೂಜಾರಿ, ದೇವಪ್ರಸಾದ್, ವಿಠಲ, ಪುಷ್ಪಾ ಎಂ, ಪದ್ಮಿನಿ ಶೆಟ್ಟಿ ವಿಜಯಾ ಬ್ಯಾಂಕ್ ಮೂಲ್ಕಿ ಶಾಖಾ ಪ್ರಭಂದಕ ಸುಬ್ರಮಣ್ಯ ಪ್ರಸಾದ್ ಅತಿಥಿಗಳಾಗಿದ್ದರು.
ರಾಮಮೂರ್ತಿ ಪ್ರಾರ್ಥಿಸಿದರು. ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಜೇಸನ್ ಕ್ರಿಸ್ಟೋಫರ್ ಪುರ್ಟಾಡೊ ಪ್ರಸ್ತಾವಿಸಿದರು. ಚಂದ್ರಕಾಂತ ಶೆಟ್ಟಿ ವರದಿ ಮಂಡಿಸಿದರು. ಮನೋಹರ ಕೋಟ್ಯಾನ್ ನಿರೂಪಿಸಿದರು. ಅಶೋಕ್ ಕುಮಾರ್ ವಂದಿಸಿದರು.

ಕ್ಯಾ: ಪ್ರಗತಿ ಪರ ಕೃಷಿಕರಾದ ಚಿತ್ತರಂಜನ್ ಶೆಟ್ಟಿ ಉಳೆಪಾಡಿ, ಐತಪ್ಪ ಸಾಲ್ಯಾನ್ ಕೊಲ್ಲೂರು, ವಿನ್ಸೆಂಟ್ ಡಿಸೋಜ ಅತಿಕಾರಿಬೆಟ್ಟು, ಚಿಂತರಾಯ ಹೂಗಾರ್ ಕೆ.ಎಸ್.ರಾವ್ ನಗರ, ಸುಶೀಲಾ ಶೆಟ್ಟಿ ಶಿಮಂತೂರುರವರನ್ನು ಸನ್ಮಾನಿಸಲಾಯಿತು.