ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಉದ್ಯೋಗ ನೇಮಕಾತಿ ಸಂದರ್ಶನ

ಮೂಲ್ಕಿ: ಇಲ್ಲಿನ ವಿಜಯಾ ಕಾಲೇಜಿನಲ್ಲಿ ಜನವರಿ 10ರಂದು ಐಸಿಐಸಿಐ ಬ್ಯಾಂಕ್‍ನಲ್ಲಿ ನೇಮಕಾತಿಗಾಗಿ ನೇರ ಸಂದರ್ಶನ ಆಯೋಜಿಸಲಾಗಿದೆ.ಐಸಿಐಸಿಐ ಬ್ಯಾಂಕ್ ಮತ್ತು ಮಂಗಳೂರು ಎನ್‍ಐಐಟಿ ಸಹಯೋದೊಂದಿಗೆ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂದರ್ಶನ ಆರಂಭಗೊಳ್ಳಲಿದೆ.

ಎಸ್.ಎಸ್.ಎಲ್.ಸಿ., ಪಿಯುಸಿ ಹಾಗೂ ಪದವಿಯಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿ ಕನಿಷ್ಠ ಶೇ.50 ಅಂಕ ಗಳಿಸಿದ 2016/2017/2018ರಲ್ಲಿ ಪದವಿ ಪಡೆದವರು ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳು 24 ವರ್ಷದೊಳಗಿನವರಾಗಿದ್ದು 01.09.1994 ನಂತರ ಜನಿಸಿದವರಾಗಿರಬೇಕು.ಆಸಕ್ತರು ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಪದವಿ ಅಂಕಪತ್ರ ಹಾಗೂ ಇತ್ತೀಚಿನ 3 ಭಾವಚಿತ್ರದೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ. ಇಂಗ್ಲೀಷ್‍ನಲ್ಲಿ ಸಂವಹನ ಹಾಗೂ ನೇರ ಸಂದರ್ಶನದಿಂದ ಆಯ್ಕೆ ಪ್ರಕ್ರಿಯೆ ಜರಗಲಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಡಾ.ನಾರಾಯಣ ಪೂಜಾರಿ ತಿಳಿಸಿದ್ದಾರೆ.