ಮೂಲ್ಕಿ ಮೂರ್ತೆದಾರರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಸುವರ್ಣ

ಮೂಲ್ಕಿ: ಬುಧವಾರ ನಡೆದ ಮೂಲ್ಕಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮೂಲ್ಕಿ ಚಂದ್ರಶೇಖರ ಸುವರ್ಣರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂಲ್ಕಿ ಸುವರ್ಣ ಆಟ್ರ್ಸ್‍ನ ಮಾಲಕರಾಗಿದ್ದು, ಕರ್ನಾಟಕ ರಾಜ್ಯೋತ್ಸವ ಪುರಸ್ಕøತರಾಗಿ, ಸರಕಾರದ ಜಾನಪದ ಪರಿಷತ್ ಮೂಲ್ಕಿ ತಾಲೂಕಿನ ಅಧ್ಯಕ್ಷರಾಗಿ, ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ, ಪಾದಾಧಿಕಾರಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇತರ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ರಮೇಶ್ ಜಿ. ಸುವರ್ಣ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಕೆ. ರಾಘು ಸುವರ್ಣ, ಯದೀಶ್ ಎಸ್. ಅಮೀನ್, ಹರೀಂದ್ರ ಸುವರ್ಣ, ಸದಾನಂದ ಪೂಜಾರಿ, ಸುಧಾಕರ ಜೆ. ಸುವರ್ಣ, ಗಣೇಶ್ ಕುಕ್ಯಾನ್, ಸುನೀತಾ ಡಿ. ಮೂಲ್ಕಿ ಹಾಗೂ ಚರಿಷ್ಮಾ ಶ್ರೀನಿವಾಸ್ ನಿರ್ದೇಶಕರುಗಳಾಗಿ ಆಯ್ಕೆಯಾಗಿರುತ್ತಾರೆ.
ಚುನಾವಣಾಧಿಕಾರಿಯಾಗಿ ಮಂಗಳೂರು ಸ್ಥಳೀಯ ಪರಿಶೋಧನಾ ವರ್ತುಲದ ಲೆಕ್ಕಪರಿಶೋಧಕರಾದ ನವಾನಂದ ಕಾರ್ಯನಿರ್ವಹಿಸಿದ್ದರು.