ಮೂಲ್ಕಿ: ಮರಿಯ ಮಾತೆಯ ಹಾಗೂ ರೋಸರಿ (ಜಪಮಾಲೆ) ಪ್ರದರ್ಶನ

ಮೂಲ್ಕಿ: ಮಾತೆ ಮರಿಯಮ್ಮನವರ ಜೀವನ ತತ್ವಗಳು ಆದರ್ಶ ಇಂದಿಗೂ ಪೂರಕವಾಗಿದ್ದು ಯುವ ಜನತೆ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಸಂಸ್ಕಾರ ಪೂರ್ಣ ಬದುಕು ಕಟ್ಟಿಕೊಳ್ಳಬೇಕು ಎಂದು ಮೂಲ್ಕಿ ಕೊಸೆಸಾಂ ಅಮ್ಮನವರ ಚರ್ಚು ಧರ್ಮಗುರುಗಳಾದ ಫಾದರ್ ಸಿಲ್ವೆಸ್ಟರ್ ಡಿಕೋಸ್ಟಾ ಹೇಳಿದರು.

ಕೆಥೋಲಿಕ್ ಕ್ರೈಸ್ತರ ಮಂಗಳೂರು ಧರ್ಮ ಪ್ರಾಂತ್ಯದ ರೋಸರಿ ವರ್ಷಾಚರಣೆಯ ಪ್ರಯುಕ್ತ ಭಾನುವಾರ ಮೂಲ್ಕಿಯ ಸೈಂಟ್ ಜೋಸೆಫ್ ಹಾಲ್‍ನಲ್ಲಿ ನಡೆದ ಮರಿಯ ಮಾತೆಯ ಹಾಗೂ ರೋಸರಿ (ಜಪಮಾಲೆ) ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಣ ರೋಸರಿಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮೂಲ್ಕಿ ಚರ್ಚ್‍ನ 13 ವಾರ್ಡುಗಳ ಸದಸ್ಯರಿಂದ ವಿವಿಧ ರೀತಿಯ ಮಾತೆ ಮರಿಯಮ್ಮನವರ ವಿಗ್ರಹಗಳು, ಅವರ ಬಗ್ಗೆ ವಿಷಯ ಸಂಗ್ರಹ ಅವರು ಮಾಡಿದ ಸೇವೆ ಹಾಗೂ ಪವಾಡಗಳ ಬಗ್ಗೆ ಮಾಹಿತಿ ಪ್ರದರ್ಶಿಸಿದರು.
ವಿವಿಧ ರೀತಿಯ ಮಣಿಗಳು, ಸ್ವರ್ಣ ಸಹಿತ ವಿವಿಧ ಲೋಹಗಳು,ನೀರುಳ್ಳಿ, ಬೆಳ್ಳುಳ್ಳಿ, ಒಣ ಹಣ್ಣುಗಳು, ಫಲವಸ್ತುಗಳು ಹಾಗೂ ವಿವಿಧ ರೀತಿಯ ಕಾಯಿಗಳಿಂದ ಮಾಡಲಾದ ರೋಸರಿ (ಜಪ ಮಾಲೆ) ಪ್ರದರ್ಶನದಲ್ಲಿಡಲಾಗಿತ್ತು.

ಮೂಲ್ಕಿ ಬೆಥನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮರಿಯ ಮಾತೆಯ ಪವಾಡಗಳ ಬಗ್ಗೆ ರೂಪಕ ಹಾಗೂ ಮೂಲ್ಕಿ ಚರ್ಚು ಸಭೆಯ ಸದಸ್ಯರಿಂದ ದುಶ್ಚಟಗಳು ಹಾಗೂ ದುಷ್ಟ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಪ್ರಾxರ್sÀನೆಯ ಮಹತ್ವ ಸಾರುವ ರೂಪಕಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮೂಲ್ಕಿ ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷೆ ಜೀನ್ ಮೊಲಿನ್ ಡಿಸೋಜಾ, ಕಾಯದರ್ಶಿ ಪ್ರಕಾಶ್ ಮೊಂತೇರೊ. ಮೆಡಲಿನ್ ಕಾನ್ವೆಂಟ್ ಸುಪೀರಿಯರ್ ನಂದಿತಾ ಬಿ.ಎಸ್., ಐಸಿವೈಎಂ ಸಂಚಾಲಕ ರಿಚಾರ್ಡ್ ಪುರ್ತಾದೊ, ಅಧ್ಯಕ್ಷ ಜೇಮ್ಸ್ ಪಿಂಟೊ, ಗ್ಲೋರಿಯಾ ಸ್ತ್ರೀ ಸಂಘಟನ್ ಅಧ್ಯಕ್ಷೆ ಪ್ರಮಿಳಾ ಸಾಲ್ಡಾನಾ, ಚರ್ಚು ವಾರ್ಡುಗಳ ಗುರಿಕಾರರು, ಹಾಗೂ ಧರ್ಮ ಸಭಾ ಸದಸ್ಯರು ಉಪಸ್ಥಿತರಿದ್ದರು.

ಫಾದರ್ ಸಿಲ್ವೆಸ್ಟರ್ ಡಿಕೋಸ್ಟಾ ಸ್ವಾಗತಿಸಿದರು. ಜೀನ್ ಮೊಲಿನ್ ಡಿಸೋಜಾ ವಂದಿಸಿದರು.