ಮೂಲ್ಕಿ ಬಸ್ಸು ನಿಲ್ದಾಣದಲ್ಲಿದ್ದ ನಿರ್ಗತಿಕ ವಿಶೇಷಚೇತನಿಗೆ ಮಾನವೀಯತೆ ಮೆರೆದ ಹೆಜಮಾಡಿ ಗ್ರಾಮ ಪಂಚಾಯಿತಿ ಸದಸ್ಯ

ಮೂಲ್ಕಿ: ಮೂಲ್ಕಿ ಬಸ್ಸು ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ ಇದ್ದ ವಿಶೇಷಚೇತನ ಯುವಕನನ್ನು ನಿಲ್ದಾಣದಲ್ಲಿ ಸಿಯಾಳ ವ್ಯಾಪಾರ ಮಾಡುತ್ತಿರುವ ಹೆಜಮಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಾಣೇಶ್ ಹೆಜಮಾಡಿಯವರು ಸಾಮಾಜಿಕ ಕಾರ್ಯಕರ್ತರಾದ ವಿಶು ಕುಮಾರ್ ಶೆಟ್ಟಿ ಮತ್ತು ತಾರಾನಾಥ ಮೇಸ್ತ ಮತ್ತಿತರರ ಸಹಾಯದೊಂದಿಗೆ ಕಾರ್ಕಳ ವಿಜೇತ ವಿಶೇಷ ಮಕ್ಕಳ ಶಾಲೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಕಳೆದೊಂದು ವಾರದಿಂದ ಮೂಲ್ಕಿ ಬಸ್ಸು ನಿಲ್ದಾಣದಲ್ಲಿ ಬಿದ್ದುಕೊಂಡಿದ್ದ ಆತನನ್ನು ಯಾರೂ ಮಾತಡಿಸಿರಲಿಲ್ಲ.ದುವಸನೆಯಿಮದ ಯಾರಬ್ಬರೂ ಅತನ ಬಲಿಗೆ ಸುಲಿದಿರಲಿಲ್ಲ.ಬಸ್ಸು ನಿಲ್ದನದಲ್ಲಿ ಕುಲಿತುಕೊಲ್ಲಲು ಬರುತ್ತಿದ್ದವರು ದುರ್ವಾಸನೆ ಕಂಡು ವಾಪಾಸು ಹೋಗುತ್ತಿದ್ದರು.ಆತ ಸರಿಯಾಗಿ ಸ್ನಾನವನ್ನೂ ಮಾಡದೆ ದುರ್ವಾಸನೆ ಬೀರುತ್ತಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಅಲ್ಲೇ ಪಕ್ಕದಲ್ಲಿ ಸಿಯಾಳ ವ್ಯಾಪಾರ ಮಾಡುವ ಪ್ರಾಣೇಶ್ ಹೆಜ್ಮಾಡಿಯವರು ಬುಧವಾರ ರಾತ್ರಿ ಮನೆಗೆ ತೆರಳುವ ಸಂದರ್ಭ ಆತನನ್ನು ವಿಚಾರಿಸಿದ್ದಾರೆ.ಪ್ರೀತಿಯಿಂದ ಮಾತನಾಡಿ ಆತನಿಗೆ ತಿನ್ನಲು ತಿಂಡಿ ಕೊಟ್ಟ ಬಳಿಕ ಪ್ರಾಣೇಶ್ ಜತೆ ತೆರಳಲು ಸಿದ್ಧನಾಗಿದ್ದ.

ಸ್ಥಳೀಯರಾದ ಸುಧೀರ್ ಕೊಳಚಿಕಂಬ್ಳ ಮತ್ತು ನಳಿನ್ ಬಪ್ಪನಾಡು ಎಂಬವರ ನೆರವಿನಿಂದ ತಮ್ಮ ಮನೆಯಾದ ಹೆಜಮಾಡಿಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ ಬಳಿಕ ಶೇವಿಂಗ್ ಮಾಡಿಸಿ ತಿಂಡಿ ಕೊಟ್ಟಿದ್ದಾರೆ.
ಸ್ಥಳೀಯ ಪೋಲೀಸರ ಮತ್ತು ಪತ್ರಕರ್ತರ ನೆರವಿನಂದ ಆತನಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದ್ದರು.

ಬುಧವಾರ ರಾತ್ರಿ ತಮ್ಮ ಮನೆಯಲ್ಲಿ ವಾಸ್ಯವ್ಯ ಮಾಡಿಸಿ ಬಳಿಕ ಆತನನ್ನು ಶುಕ್ರವಾರ ಬೆಳಗ್ಗೆ ಕಾರ್ಕಳದ ವಿಶೇಷಚೇತನ ಮಕ್ಕಳ ಶಾಲೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಪ್ರಾಣೇಶ್ ಹೆಜಮಾಡಿ ಮತ್ತಿತರರು ಮಾಡಿದ ಮಾನವೀಯತೆಯ ಕೆಲಸಗಳು ವ್ಯಾಟ್ಸಪ್ ಮತ್ತಿತರ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಶ್ಲಾಘನೆಯ ಮಹಾಪೂರಗಳು ಹರಿದುಬರುತ್ತಿದೆ.

ಕೃಷಿಕರಾದ ಪ್ರಾಣೇಶ್‍ರವರು ಈ ಹಿಂದೆಯೂ ಇಂತಹ ಹಲವಾರು ಮಾನವೀಯ ಕಾರ್ಯಗಳನ್ನು ನಡೆಸುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.