ಮೂಲ್ಕಿ ಪರಿಸರದಲ್ಲಿ ವರಮಹಾಲಕ್ಷ್ಮಿ ವೃತ

ಫೋಟೋ: ಮೂಲ್ಕಿಯ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಶ್ರೀ ಅನ್ನಪೂರ್ಣೇಶ್ವರೀ ಸಭಾಗೃಹದಲ್ಲಿ ಶುಕ್ರವಾರ ಮೂಲ್ಕಿ ಒಂಭತ್ತು ಮಾಗಣೆಯ ಮಹಿಳೆಯರಿಂದ ಶ್ರೀ ವರಮಹಾಲಕ್ಷ್ಮೀ ವೃತ ಕಲ್ಪೋಕ್ತ ಪೂಜೆ ನಡೆಯಿತು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಸಹಸ್ರಾರು ಭಕ್ತಾದಿಗಳು ಭಾಗಿಯಾದರು.
ಮೂಲ್ಕಿ ಸಮೀಪದ ಕೊಲಕಾಡಿ ಒಂಬತ್ತು ಮಾಗಣೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ಶ್ರೀ ವರಮಹಾಲಕ್ಷ್ಮೀ ವೃತ ಕಲ್ಪೋಕ್ತ ಪೂಜೆ ನಡೆಯಿತು.
ಮೂಲ್ಕಿಯ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಾಮೂಹಿಕ ಚೂಡಿ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವೃತ ಕಲ್ಪೋಕ್ತ ಪೂಜೆ ನಡೆಯಿತು.