ಮೂಲ್ಕಿ ನಿವೃತ್ತ ಸೈನಿಕರಿಗೆ ಸನ್ಮಾನ

ಮೂಲ್ಕಿ: ಯುವ ಸಮಾಜ ವೃತ್ತಿ ಕೌಶಲ ಸಂಪನ್ನರಾಗಿ ಸಮಾಜಮುಖಿಯಾಗಿ, ದೇಶದ ಪ್ರಾಮಾಣಿಕ ಪ್ರಜೆಯಾಗಿ ಬಾಳಿ ಬದುಕುವುದು ನಮ್ಮ ಹಿರಿಯರು ಅತೀ ಕಷ್ಟದಿಂದ ಗಳಿಸಿ ನೀಡಿದ ಸ್ವಾತಂತ್ರ್ಯಕ್ಕೆ ನಾವು ಕೊಡುವ ಬಹುದೊಡ್ಡ ಕಾಣಿಕೆ ಎಂದು ಲಯನ್ಸ್ ಪ್ರಾಂತ್ಯಾಧ್ಯಕ್ಷ ವೆಂಕಟೇಶ ಎನ್.ಬಾಳಿಗ ಹೇಳಿದರು.

ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಮೂಲ್ಕಿ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಿವೃತ್ತ ಯೋಧರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಿವೃತ್ತ ಯೋಧ ಲೀಲಾಧರ ಕಡಂಬೋಡಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಯುವ ಜನರಿಗೆ ವಿಫುಲ ಅವಕಾಶಗಳಿವೆ ಆದರೆ ಯುವ ಸಮಾಜ ಆರೋಗ್ಯವಂತರಾಗಿ ದೈಹಿಕ ಕ್ಷಮತೆ ಆಯ್ಕೆಯ ಮುಖ್ಯ ಮಾನದಂಡವಾಗಿದೆ. ಶಾಲೆಯ ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದಲ್ಲಿ ಸೇನೆಯನ್ನು ಸೇರಲು ಸಾಧ್ಯವಿದೆ ಎಂದರು.
ಸನ್ಮಾನ: ಈ ಸಂದರ್ಭ ನಿವೃತ್ತ ಸೈನಿಕರಾದ ವಸಂತ.ಸಿ.ಎಸ್, ಲೀಲಾಧರ ಕಡಂಬೋಡಿ, ಶ್ರೀಕಾಂತ್ ದ್ವಿವೇದಿಯವರನ್ನು ಸನ್ಮಾನಿಸಲಾಯಿತು.

ಮೂಲ್ಕಿ ಪರಿಸರದ ಶಾಲಾ ಕಾಲೇಜುಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಲಯನ್ಸ್ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ವಹಿಸಿದ್ದರು. ಅತಿಥಿಗಳಾಗಿ ಲಯನ್ಸ್ ಶೈಕ್ಷಣಿಕ ಸಮಿತಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಜಯಾ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ, ವಲಯಾಧ್ಯಕ್ಷ ವಾಸು ನಾಯ್ಕ್ ಹಳೆಯಂಗಡಿ, ಜಿಎಸ್‍ಆರ್ ಸದಾಶಿವ ಹೊಸದುರ್ಗಾ, ಲಿಯೋ ಅಧ್ಯಕ್ಷೆ ಸಾಧನಾ ಹೆಬ್ಬಾರ್, ಲಯನ್ಸ್ ಕಾರ್ಯದರ್ಶಿ ವಿನೋದ್ ಎಸ್.ಸಾಲ್ಯಾನ್, ಕೋಶಾಧಿಕಾರಿ ಪ್ರಭೋಧ್ ಕುಡ್ವಾ ಅತಿಥಿಗಳಾಗಿದ್ದರು.

ವೆಂಕಟೇಶ ಹೆಬ್ಬಾರ್ ಸ್ವಾಗತಿಸಿದರು. ರೇಷ್ಮಾ ಮಂಜುನಾಥ್ ಮತ್ತು ಕವನ್ ಕುಬೆವೂರು ಧ್ವಜ ವಂದನೆ ನಡೆಸಿದರು. ಪಿ. ಮಂಜುನಾಥ್ ಸಾಧಕ ನಿವೃತ್ತ ಸೈನಿಕರನ್ನು ಪರಿಚಯಿಸಿದರು. ವಿಜಯ ಕುಮಾರ್ ಕುಬೆವೂರು ಮತ್ತು ಭಾಸ್ಕರ ಹೆಗ್ಡೆ ನಿರೂಪಿಸಿದರು. ವಿನೋದ್ ಎಸ್. ಸಾಲ್ಯಾನ್ ವಂದಿಸಿದರು.