ಮೂಲ್ಕಿ ತಾಲೂಕು ರಚನೆ ಬಗ್ಗೆ ಮುಖ್ಯಮಂತ್ರಿಗೆ ಕೃತಜ್ಞತೆ

ಮೂಲ್ಕಿ: ಚುನಾವಣಾ ಪ್ರಚಾರಾರ್ಥ ಅವಿಭಜಿತ ದಕ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಎಚ್.ಕುಮಾರಸ್ವಾಮಿಯವರಿಗೆ ಭಾನುವಾರ ರಾಹೆ 66 ರ ಬಪ್ಪನಾಡು ದೇಗುಲ ಮುಂಭಾಗ ಮೂಲ್ಕಿ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು,

ತರಾತುರಿಯಲ್ಲಿದ್ದ ಮುಖ್ಯಮಂತ್ರಿಗಳನ್ನು ಬಪ್ಪನಾಡು ಬಳಿ ಕಾರಿನಿಂದ ಕೆಳಗಿಳಿಸಿ ಹೂಹಾರ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.ಮುಖ್ಯಂಮತ್ರಿಗಳ ಜತೆಗೆ ಜೆಡಿಎಸ್ ಮುಖಂಡ ಹೈದರ್ ಪರ್ತಿಪಾಡಿ ಉಪಸ್ಥಿತರಿದ್ದರು.

ಮೂಲ್ಕಿಯ ಪ್ರಮುಖರಾದ ಜೀವನ್ ಕೆ.ಶೆಟ್ಟಿ, ಇಕ್ಬಾಲ್ ಅಹಮದ್, ಉದಯ ಶೆಟ್ಟಿ ಆದಿಧನ್, ಅಬ್ದುಲ್ ರಜಾಕ್, ರಂಜನ್ ಶೆಟ್ಟಿ,ಜಯ ಕುಮಾರ್ ಮಟ್ಟು, ನೂರುಲ್ಲಾ ಶೇಖ್ ಮತ್ತಿತರರು ಉಪಸ್ಥಿತರಿದ್ದರು.