ಮೂಲ್ಕಿ ತಾಲೂಕು ರಚನೆಯಿಂದ ಎಲ್ಲಾ ಸವಲತ್ತುಗಳು ಮರಳಿ ಬರಲು ಸದವಕಾಶ-ಹರಿಕೃಷ್ಣ ಪುನರೂರು

ಮೂಲ್ಕಿ ನ್ಯಾಯಾಲಯ,ಕಸ್ಟಮ್ಸ್ ಹೌಸ್,ತಾಲೂಕು ಕೇಂದ್ರ,ಟ್ರಾಫಿಕ್ ಪೋಲೀಸ್ ಠಾಣೆ ಸಹಿತ ಈ ಹಿಂದೆ ಇದ್ದ ಎಲ್ಲಾ ಸವಲತ್ತುಗಳು ಮರಳಿ ಬರಲು ತಾಲೂಕು ರಚನೆಯಿಂದ ಸಾಧ್ಯವಾಗಲಿದೆ ಎಂದು ರಾಜ್ಯ ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿ ಸ್ವಾಗತ್ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೂಲ್ಕಿ ತಾಲೂಕು ರಚನೆಗೆ ಹಲವಾರು ವರ್ಷಗಳಿಂದ ಹೋರಾಟ ನಡೆದಿದೆ.ಇದೀಗ ಸತತ ಪ್ರಯತ್ನಕ್ಕೆ ಜಯ ಸಿಕ್ಕಂತಾಗಿದೆ ಎಂದವರು ಹೇಳಿದರು.

ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ,ಇಂದು ಮೂಲ್ಕಿ ನಾಗರಿಕರಿಗೆ ಸಂಭ್ರಮದ ದಿನ.ಕಳೆದ 44 ವರ್ಷಗಳಿಂದ ಸತತವಾಗಿ ನಡೆಸಿದ ಹೋರಾಟಕ್ಕೆ ಅಭೂತಪೂರ್ವ ಜಯ ಸಿಕ್ಕಂತಾಗಿದೆ.ಇದಕ್ಕೆ ಒಬ್ಬಿಬ್ಬರು ಕಾರಣರಲ್ಲ.ಮೂಲ್ಕಿ ಹೋಬಳಿಯ ಸಮಸ್ತ ಜನತೆ ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.ಅದಕ್ಕಾಗಿ ಸಹಕರಿಸಿದ ಮುಖ್ಯಮಂತ್ರಿ,ಸಚಿವರು,ಜನಪ್ರತಿನಿಧಿಗಳು ಮತ್ತು ಎಲ್ಲಾ ಹೋರಾಟಗಾರರಿಗೆ ಕೃತಜ್ಞತೆಗಳು.ಮುಂದೆ ಮೂಲ್ಕಿಯ ಸಮಗ್ರ ಅಭಿವೃದ್ಧಿಗೆ ಕಾರ್ಯಸೂಚಿ ಹಮ್ಮಿಕೊಳ್ಳಬೇಕಿದೆ ಎಂದರು.

ಸನ್ಮಾನ: ಮೂಲ್ಕಿಯ ಸಮಾಜಸೇವಕ,ನಪಂ ಮಾಜಿ ಸದಸ್ಯ ಅಬ್ದುಲ್ ರಜಾಕ್‍ರನ್ನು ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಉತ್ತರಿಸಿದ ಅಬ್ದುಲ್ ರಜಾಕ್,ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದಂತಾಗಿದೆ ಎಂದರು.

ಹೊಸ ಅಂಗಣದ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವಿಸಿದರು.
ಜಯಪಾಲ್ ಶೆಟ್ಟಿ ಐಕಳಬಾವ, ಸುರೇಶ್ ಬಂಗೇರ, ರವೀಂದ್ರ ಶೆಟ್ಟಿ, ಆನಂದ ದೇವಾಡಿಗ, ಸೋಮಸುಂದರ್ ನಡಿಕುದ್ರು,ರಮೇಶ್ ಕೊಕ್ಕರಕಲ್, ಜಯರಾಮ್, ಪುರಂದರ ಸಾಲ್ಯಾನ್, ಪ್ರಾಣೇಶ್ ಹೆಜ್ಮಾಡಿ, ಉಮೇಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯಕುಮಾರ್ ಕುಬೆವೂರು ಕಾರ್ಯಕ್ರಮ ನಿರ್ವಹಿಸಿದರು.ವಾಮನ ಕೋಟ್ಯಾನ್ ನಡಿಕುದ್ರು ವಂದಿಸಿದರು.