ಮೂಲ್ಕಿ ಡಾ|.ಹರಿಶ್ಚಂದ್ರ ಪಿ.ಸಾಲಿಯಾನ್‍ರವರಿಗೆ ಗೋಲ್ಡನ್ ಎಕ್ಸಲೆನ್ಸಿ ಆವಾರ್ಡ್

ಮೂಲ್ಕಿ: ಮಂಗಳೂರು ಕಥಾಬಿಂದುವಿನ ಪ್ರಕಾಶಕರಾದ ಪಿ.ವಿ.ಪ್ರದೀಪ್‍ರವರು ಬೇರೆ ಬೇರೆ ಜಿಲ್ಲೆಗಳಿಂದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನವನ್ನು ಮಾಡಿರುವುದುಎಲ್ಲರಿಗೂಆದರ್ಶವಾಗಿದೆಎಂದು ಮೂಲ್ಕಿ ಡಾ. ಹರಿಶ್ಚಂದ್ರ ಪಿ.ಸಾಲಿಯಾನ್‍ರವರು ಹೇಳಿದರು.

ಇವರು ಮಂಗಳೂರು ಕಥಾಬಿಂದು ಪ್ರಕಾಶನದ ವತಿಯಿಂದ ನೇಪಾಳದ ಪೋಕರಾದಕುಟ್ಟಿ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಡಾ.ಹರಿಶ್ಚಂದ್ರ ಪಿ.ಸಾಲಿಯಾನ್‍ರವರಿಗೆ ಇಂಟರ್‍ನ್ಯಾಶನಲ್ ಲಿಟರೇಚರ್ ಮತ್ತು ಕಲ್ಚರಲ್ ಪ್ರೋಗ್ರಾಮ್‍ನಲ್ಲಿ “ಗೋಲ್ಡನ್ ಎಕ್ಸಲೆನ್ಸಿ ಆವಾರ್ಡ್” ಪ್ರಶಸ್ತಿ ನೀಡಿ ಗವರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸುರೇಶ್ ನಗರಗೋಳಿಯವರು ವಹಿಸಿದ್ದರು. ಸಮಾರಂಭದಲ್ಲಿ ಬೆಂಗಳೂರಿನ ಡಾ.ನಿರಜ, ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಜಯಾನಂದ ಪೆರಾಜೆ, ಕಟ್ಟಿತ್ತಿಲ ಗೋಪಾಲಕೃಷ್ಣ ಭಟ್, ಡಾ.ರಾಜೇಂದ್ರಕುಮಾರ್, ಅನ್ನಪೂರ್ಣ ಹೊನ್ನಾವರ ಉಪಸ್ಥಿತರಿದ್ದರು..
ಪ್ರೀಯಾ ಹರೀಶ್‍ರವರು ನಿರೂಪಿಸಿದರು. ಪಿ.ವಿ.ಪ್ರದೀಪ್‍ರವರು ಸ್ವಾಗತಿಸಿ ವಂದಿಸಿದರು.