ಮೂಲ್ಕಿ ಜನ ವಿಕಾಸ ಸಮಿತಿಯ ಅಧ್ಯಕ್ಷರಾಗಿ ಜೀವನ್ ಶೆಟ್ಟಿ ಅಂಗರಗುಡ್ಡೆ

ಮೂಲ್ಕಿ: ಪುನರೂರು ಪ್ರತಿಷ್ಠಾನದ ಉಪ ಸಮಿತಿ ಮೂಲ್ಕಿ ಜನ ವಿಕಾಸ ಸಮಿತಿಯ ನೂತನ ಅಧ್ಯಕ್ಷರಾಗಿ ಜೀವನ್ ಶೆಟ್ಟಿ ಅಂಗರಗುಡ್ಡೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಅಧ್ಯಕ್ಷತೆಯಲ್ಲಿ ಮೂಲ್ಕಿ ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಪದಾಧಿಕಾರಿಗಳು: ಉಪಾಧ್ಯಕ್ಷ-ಪ್ರಾಣೇಶ್ ಭಟ್ ದೇಂದಡ್ಕ, ಪ್ರಧಾನ ಕಾರ್ಯದರ್ಶಿ-ಶೋಭಾ ರಾವ್, ಕಾರ್ಯದರ್ಶಿಗಳು-ದಾಮೋದರ ಶೆಟ್ಟಿ ಮತ್ತು ಶಶಿಕರ ಕೆರೆಕಾಡು, ಕಾರ್ಯಕಾರಿ ಸಮಿತಿ-ಪಿ.ಎಸ್.ಸುರೇಶ್ ರಾವ್, ಗೀತಾ ಶೆಟ್ಟಿ, ಭಾಗ್ಯಾ ರಾಜೇಶ್, ಆನಂದ ಮೇಲಂಟ.