ಮೂಲ್ಕಿ ಉಚಿತ ವೈಫ್ಯೆ ಉದ್ಘಾಟನೆ

ಮೂಲ್ಕಿ: ಆಧುನಿಕತೆಯ ಇಂದಿನ ದಿನಗಳಲ್ಲಿ ಪ್ರತಿಯೋರ್ವರಿಗೂ ಇಂಟರ್‍ನೆಟ್ ನ ಅಗತ್ಯವಿದ್ದು ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮೂಡುಬಿದಿರೆ, ಬಜಪೆ ಮತ್ತು ಮೂಲ್ಕಿ ಸೇರಿದಂತೆ ಮೂರು ಕಡೆ ಸಾರ್ವಜನಿಕರ ಉಪಯೋಗಕ್ಕಾಗಿ ಸುಮಾರು 10 ಲಕ್ಷ ವೆಚ್ಚದಲ್ಲಿ ಬಿಎಸ್‍ಎನ್‍ಎಲ್ ಮೂಲಕ ಉಚಿತ ವೈಫ್ಯೆ ಸೇವೆಯನ್ನು ಆರಂಭಿಸಲಾಗಿದೆಯಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.

ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗ್ರಹದಲ್ಲಿ ಮೂಲ್ಕಿ ಪ್ರದೇಶದ ಉಚಿತ ವೈಫ್ಯೆ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮೂಲ್ಕಿಯಲ್ಲಿ ಬಸ್ಸು ನಿಲ್ದಾಣ,ವಿಜಯ ಸನ್ನಿಧಿ, ಹೋಟೆಲ್ ಆದಿಧನ್, ಪುನರೂರು ಟೂರಿಸ್ಟ್ ಹೋಂ ಮತ್ತು ಬಪ್ಪನಾಡು ದೇವಳದ ಬಳಿ ಉಚಿತ ವೈಫ್ಯೆ ಸೇವೆಯನ್ನು ಅಳವಡಿಸಿದ್ದು ಪ್ರತಿಯೊಂದು ಪ್ರದೇಶದಿಂದ ಸುಮಾರು 150 ಮೀಟರ್ ವರೆಗೆ ಇಂಟರ್‍ನೆಟ್ ಲಭ್ಯವಿದ್ದು ದಿನದಲ್ಲಿ ಒಂದು ಗಂಟೆಗಳ ಅವಧಿಯಲ್ಲಿ ಮಾತ್ರ ವೈಫ್ಯೆ ಸಂಪರ್ಕ ಸಿಗಲಿದೆಯೆಂದು ಬಿಎಸ್‍ಎನ್‍ಎಲ್‍ನ ಇಂಜಿನಿಯರ್ ತೇಜಸ್ ಸಭೆಯಲ್ಲಿ ಮಾಹಿತಿ ನೀಡಿ ತಿಳಿಸಿದರು.

ದ.ಕ.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿಯ ಮೂಡುಬಿದಿರೆ ಮಂಡಲಾಧ್ಯಕ್ಷ ಈಶ್ವರ್ ಕಟೀಲು, ಬಿಜೆಪಿ ನಗರಾಧ್ಯಕ್ಷ ಸತ್ಯೇಂದ್ರ ಶೆಣೈ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ, ನಪಂ ನೂತನ ಸದಸ್ಯರುಗಳಾದ ಸತೀಶ್ ಅಂಚನ್, ರಾಧಿಕಾ ಯಾದವ ಕೋಟ್ಯಾನ್, ವಂದನಾ ಕಾಮತ್, ಶಾಂತಾ ಕಿರೋಡಿಯನ್, ದಯಾವತಿ ಅಂಚನ್, ಶೈಲೇಶ್ ಕುಮಾರ್, ಸುಭಾಶ್ ಶೆಟ್ಟಿ, ದೇವಪ್ರಸಾದ್ ಪುನರೂರು, ವಿನೋದ್ ಸಾಲ್ಯಾನ್, ಮೀನಾಕ್ಷಿ ಬಂಗೇರ, ರಂಗನಾಥ ಶೆಟ್ಟಿ, ಉದಯ ಅಮೀನ್, ಹರಿಶ್ಚಂದ್ರ, ನರಸಿಂಹ, ನಾಗರಾಜ್ ಕಿಲ್ಪಾಡಿ, ಸುಭಾಸ್, ರವೀಂದ್ರ ಶೆಟ್ಟಿ, ಅಶೋಕ್ ಚಿತ್ರಾಪು, ವಿಠಲ ಎನ್‍ಎಮ್, ರವೀಶ್ ಕಾಮತ್, ದೇವಪ್ರಸಾದ್ ಕೆಂಪುಗುಡ್ಡೆ, ಪ್ರಶಾಂತ್, ರಾಜೇಶ್ ಅಮೀನ್, ಜೀವನ್ ಶೆಟ್ಟಿ, ಬಿಎಸ್‍ಎನ್‍ಎಲ್ ಜೆಇ ಅಕ್ಷಯ್ ಉಪಸ್ಥಿತರಿದ್ದರು.

ಉಚಿತ ವೈಫೈ ಸೇವೆ ಪ್ರವೇಶಿಸುವ ಕ್ರಮಗಳು: ಮೊದಲು ವೈಫೈ ಸ್ವಿಚ್ ಆನ್ ಮಾಡಬೇಕು. ಎರಡನೇ ಹಂತವಾಗಿ ಕ್ಯೂಎಫ್‍ಐ-ಬಿಎಸ್‍ಎನ್‍ಎಲ್-ಉಮಾನಾಥ್ ಕೋಟ್ಯಾನ್-ಫ್ರೀ ವೈಫೈ ನ ಎಸ್‍ಎಸ್‍ಐಡಿ ಗೆ ಸಂರ್ಕಿಸಬೇಕು.ಮೂರನೇ ಹಂತವಾಗಿ ಇಂಟರ್‍ನೆಟ್ ಬ್ರೌಸರ್ ತೆರೆಯಬೇಕು. ನಾಲ್ಕನೇ ಹಂತವಾಗಿ ಬಳಕೆದಾರರ ರುಜುವಾತುಗಳನ್ನು(ಮೊಬೈಲ್ ಸಂಖ್ಯೆ) ನಮೂದಿಸಿ ಕ್ಲಿಕ್ ಮಾಡಿ ಸೆಂಡ್ ಪಿನ್ ನಮೂದಿಸಬೇಕು. ಕೊನೆಯ ಹಂತವಾಗಿ ಲಾಗಿನ್ ಪುಟದಲ್ಲಿ ಪಿನ್ ನಮೂದಿಸಿ ಬ್ರೌಸಿಂಗ್ ಪ್ರಾರಂಭಿಸಬೇಕು