ಮೂಲ್ಕಿ ಆಪತ್ಬಾಂಧವ ಕೇಂದ್ರದಲ್ಲಿ ವೈದ್ಯಕೀಯ ಶಿಬಿರ

ಮೂಲ್ಕಿ: ಮೂಲ್ಕಿಯ ಕಾರ್ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ಮೈಮುನಾ ಫೌಂಡೇಶನ್‍ನ ಆಪತ್ಬಾಂಧವ ಸೈಕೋ ರಿಹೆಬಿಲಿಟೇಶನ್ ಸೆಂಟರ್‍ನಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಮಿರಾ ಬಯಂದರ್ ಬಂಟರ ಸಂಘದ ರೀಜನಲ್ ಸಮಿತಿಯ ಅಧ್ಯಕ್ಷ ಗಿರೀಶ್ ಶೆಟ್ಟಿ ತೆಲ್ಲಾರ್ ಉದ್ಘಾಟಿಸಿದರು.

ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡ ವೈದ್ಯಕೀಯ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎಪಿಆರ್‍ಸಿ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಆಸಿಫ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಟ್ರಸ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಏಳಿಂಜೆ, ಎಪಿಆರ್‍ಸಿ ಸಂಸ್ಥೆಯ ಉಪಾಧ್ಯಕ್ಷೆ ಉಷಾ ಬಿ.ಶೆಟ್ಟಿ, ಟ್ರಸ್ಟಿ ದಾವೂದ್ ಇಬ್ರಾಹಿಮ್, ಸಮುದಾಯ ರೋಗ್ಯ ಕೇಂದ್ರದ ಕೌನ್ಸಿಲರ್ ಪದ್ಮಿನಿ ಮತ್ತು ರೇಖಾ ಉಪಸ್ಥಿತರಿದ್ದರು.

ಎಪಿಆರ್‍ಸಿ ಸಂಸ್ಥೆಯ ಕೌನ್ಸಿಲರ್ ಸುಷ್ಮಿತಾ ಸ್ವಾಗತಿಸಿದರು. ಎಮ್‍ಎಸ್‍ಡಬ್ಲ್ಯೂ ಸಮಾಜಸೇವಕಿ ಅಕ್ಷಯಾ ಪೈ ವಂದಿಸಿದರು.