ಮೂಲ್ಕಿ ಅಯ್ಯಪ್ಪ ಮಂದಿರದಲ್ಲಿ ಕಳವಾದ ಮೂರ್ತಿ ಕೆಲವೇ ಗಂಟೆಗಳಲ್ಲಿ ಪತ್ತೆ

ಮೂಲ್ಕಿ ಅಯ್ಯಪ್ಪ ಮಂದಿರದಲ್ಲಿ ಕಳವಾದ ಮೂರ್ತಿ ಕೆಲವೇ ಗಂಟೆಗಳಲ್ಲಿ ಪತ್ತೆ
ಸಮೀಪದ ಪುತ್ರನ್ ಮೂಲಸ್ಥಾನದಲ್ಲೂ ನಗದು ಕಳವು

ಮೂಲ್ಕಿ: ಇಲ್ಲಿನ ಬಸ್ಸು ನಿಲ್ದಾಣದ ಬಳಿಯಿರುವ ಅಯ್ಯಪ್ಪ ಮಂದಿರ ಮತ್ತು ಅದರ ಸಮೀಪವೇ ಇರುವ ಪುತ್ರನ್ ನಾಗ ಮೂಲಸ್ಥಾನದಲ್ಲಿ ಅಯ್ಯಪ್ಪ ಮೂರ್ತಿ ಸಹಿತ ಕಾಣಿಕೆ ಡಬ್ಬಿಯಿಂದ ಸುಮಾರು ರೂ.4 ಸಾವಿರ ನಗದನ್ನು ಕಳ್ಳರು ಕಳ್ಳತನ ಮಾಡಿದ್ದು ಅಯ್ಯಪ್ಪನ ಮೂರ್ತಿ ಸಹಿತ ಮೂರು ಪಂಚಲೋಹದ ಮೂರ್ತಿಗಳು,ಚಿನ್ನ ಬೆಳ್ಳಿಯುಕ್ತ ರುದ್ರಾಕ್ಷಿ ಮಾಲೆ ಕೂಗಳತೆ ಸನಿಹದ ಉದ್ಯಮಿಯೊಬ್ಬರ ಮನೆಯ ಬಳಿಯ ಪೊದೆಯಲ್ಲಿ ಪತ್ತೆಯಾಗಿದ್ದು ಮೂಲ್ಕಿ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಮೂಲ್ಕಿ ಬಸ್ಸು ನಿಲ್ದಾಣದ ಬಳಿಯಲ್ಲಿನ ಅಯ್ಯಪ್ಪ ಮಂದಿರದ ಗರ್ಭ ಗುಡಿಗೆ ಮಧ್ಯರಾತ್ರಿ ನುಗ್ಗಿದ ಕಳ್ಳರು ಎದುರಿನ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಬೆಲೆಬಾಳುವ ಸುಬ್ರಹ್ಮಣ್ಯ ದೇವರ ಪಂಚಲೋಹದ ವಿಗ್ರಹ,ಅಯ್ಯಪ್ಪ ದೇವರ ಪಂಚಲೋಹ ವಿಗ್ರಹ, ಗಣಪತಿಯ ಪಂಚಲೋಹದ ವಿಗ್ರಹ,ಚಿನ್ನ ಬೆಳ್ಳಿಯುಕ್ತ ರುದ್ರಾಕ್ಷಿ ಮಾಲೆ ಹಾಗೂ ಮತ್ತು ಗರ್ಭಗುಡಿಯ ಒಳಗಡೆ ಇದ್ದ ಗುರುಸ್ವಾಮಿ ಗಿರೀಶ್ ಫಲಿಮಾರು ಎಂಬವರ ಬ್ಯಾಗನ್ನು ಕಳವು ಮಾಡಲಾಗಿತ್ತು.

ಮಂದಿರದ ಕಾಣಿಕೆ ಡಬ್ಬಿಯನ್ನು ಪಿಕ್ಕಾಸಿನ ಮೂಲಕ ಒಡೆದು ಹಣ ಕಳವು ಮಾಡಿದ್ದು ಗುರುಸ್ವಾಮಿಯವರ ಬ್ಯಾಗ್ ಮತ್ತು ಕಾಣಿಕೆ ಡಬ್ಬಿ ಸಮೀಪದ ತೋಟದಲ್ಲಿ ಪತ್ತೆಯಾಗಿದೆ.

ಅಯ್ಯಪ್ಪ ಮಂದಿರದ ಅಡುಗೆ ಕೋಣೆಗೆಯ ಬೀಗ ಒಡೆದ ಕಳ್ಳರು ಜಾಲಾಡಿದ್ದಾರೆ. ಬಳಿಕ ವಿಶ್ರಾಂತಿ ಕೋಣೆಯ ಬೀಗ ಒಡೆದು ಅಲ್ಲಿಯೂ ಜಾಲಾಡಿದ್ದಾರೆ.ವಿಶ್ರಾಂತಿ ಕೋಣೆಯಲ್ಲಿ ಬೀಡಿ ಎಳೆದ ಕುರುಹುಗಳು ಪತ್ತೆಯಾಗಿದೆ.ಅಯ್ಯಪ್ಪ ಮಂದಿರದ ಆವರಣಗೋಡೆಯಲ್ಲಿರುವ ಕಾಣಿಕೆ ಡಬ್ಬಿಯ ಬೀಗ ಒಡೆಯಲು ಯತ್ನಿಸಿ ವಿಫಲಗೊಂಡಿದ್ದಾರೆ.

ಬಳಿಕ ಅಲ್ಲಿಂದ ಸಮೀಪದಲ್ಲಿರುವ ಪುತ್ರನ್ ನಾಗ ಮೂಲಸ್ಥಾನದ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದಾರೆ.ಪುತ್ರನ್ ಮೂಲಸ್ಥಾನದ ಸ್ಟೋರ್‍ರೂಮಿನ ಬೀಗ ಒಡೆದ ಕಳ್ಳರು ಸುಮಾರು 5 ಗಂಟೆಗಳನ್ನು ಕಳ್ಳತನ ನಡೆಸಲಾಗಿದೆ.ಬಳಿಕ ಇನ್ನೊಂದು ಕೋಣೆಯ ಎರಡು ಶೆಟರಿನ ಬೀಗ ಒಡೆದು ಕೋಣೆಯ ಒಳಗಿದ್ದ ಕಪಾಟಿನ ಬೀಗ ಒಡೆದು ಚಲ್ಲಾಪಿಲ್ಲಿ ಮಾಡಿದ್ದಾರೆ.ಬಳಿಕ ಮೂಲಸ್ಥಾನದ ಒಳಬಾಗಿಲಿನಿಂದ ಹೊರಹೋಗಿದ್ದಾರೆ.

ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆ ಸ್ಥಳೀಯ ಭಕ್ತರೊಬ್ಬರು ಅಯ್ಯಪ್ಪನ ಗುಡಿಗೆ ಬಂದು ಪ್ರಾರ್ಥನೆ ಸಲ್ಲಿಸುವಾಗ ಗರ್ಭಗುಡಿಯ ಬಾಗಿಲು ತೆರೆದಿದ್ದುದನ್ನು ಕಂಡು ಸಂಶಯದಿಂದ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದ್ದು ಕೂಡಲೇ ಮೂಲ್ಕಿ ಪೊಲೀಸರಿಗೆ ದೂರು ನೀಡಲಾಗಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಶ್ವಾನದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಕಳ್ಳರು ಅಡಗಿಸಿಟ್ಟ ಅಯ್ಯಪ್ಪನ ಪಂಚಲೋಹದ ಮೂರ್ತಿ ಸಹಿತ ಮೂರು ಮೂರ್ತಿಗಳು ಅಯ್ಯಪ್ಪ ದೇವಸ್ಥಾನದ ಕೂಗಳತೆಯ ದೂರದ ಪೊದೆಯ ಮದ್ಯದಲ್ಲಿರುವ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ.

ಶ್ವಾನದಳವು ಅಯ್ಯಪ್ಪ ದೇವಳದ ಒಳಭಾಗದಲ್ಲಿ ಪರಿಶೀಲಿಸಿದ ಬಳಿಕ ಕೊಳಚಿಕಂಬ್ಳ ಹೊಳೆ ತೀರದ ಕಡೆಗೆ ಹೋಗಿ ಕೊನೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಾಗರಾಜ ಎಂಬವರ ಮನೆಯ ಬಳಿ ಬಂದು ನಿಂತಿದೆ.ರಾತ್ರಿ ಸುಮಾರು 1.15 ರ ಅವಧಿಯಲ್ಲಿ ಕಳ್ಳರು ಗೋಣಿ ಚೀಲದಲ್ಲಿ ಅಯ್ಯಪ್ಪ ದೇವಳದ ಕಡೆಯಿಂದ ಸೊತ್ತುಗಳನ್ನು ಹೊತ್ತುಕೊಂಡು ಬಂದು ಉದ್ಯಮಿಯ ಮನೆಯ ಎದುರುಗಡೆಯಿಂದ ಹಾದು ಹೋಗಿ ಪುನ: ಹಿಂದೆ ಬಂದು ಅದೇ ಮನೆಯ ಎದುರುಗಡೆ ಹೆದ್ದಾರಿ ಬದಿಯಲ್ಲಿನ ಪೆÇದೆಗೆ ಎಸೆದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡು ಬಂದಿದೆ.

ಮೂಲ್ಕಿ ಪೆÇಲೀಸರು ಹೆಚ್ಚಿನ ತನಿಖೆಗಾಗಿ ಸಿ ಸಿ ಕ್ಯಾಮೆರಾದ ಪೂಟೇಜನ್ನು ವಶ ಪಡಿಸಿಕೊಂಡಿದ್ದಾರೆ.ಕಳವಾದ 10 ಗಂಟೆಯ ಒಳಗೆ ಮೂಲ್ಕಿ ಪೆÇಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಕಳವಾದ ಮೂರು ಮೂರ್ತಿಗಳು ಪತ್ತೆಯಾಗಿದೆ.ಕಳ್ಳತನದ ಬಗ್ಗೆ ಅಯ್ಯಪ್ಪ ದೇವಸ್ಥಾನದ ಸಮಿತಿಯ ಅಧ್ಯಕ್ಷ ಗೋಪಿನಾಥ ಪಡಂಗ ಮೂಲ್ಕಿ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಸಂಸದ ನಳಿನ್‍ಕುಮಾರ್ ಕಟೀಲು,ಬಿಜೆಪಿ ನಾಯಕ ಜಗದೀಶ್ ಅಧಿಕಾರಿ,ಮುಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ,ಪೊಲೀಸ್ ಅಧಿಕಾರಿಗಳು,ಶ್ವಾನದಳ,ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶಿಲಿಸಿದ್ದಾರೆ. ಅಯ್ಯಪ್ಪ ಭಕ್ತರು ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅಯ್ಯಪ್ಪ ಮೂರ್ತಿ ಸಹಿತ ಇತರೆ ಎರಡು ಮೂರ್ತಿಗಳು ಪತ್ತೆಯಾಗಿದೆ.

ಅಯ್ಯಪ್ಪ ದೇವಸ್ಥಾನದ ಪರಿಸರದಲ್ಲಿ ಸಿಸಿ ಕ್ಯಾಮರಾ ಇಲ್ಲ:ಅಯ್ಯಪ್ಪ ಭಕ್ತ ಮಂದಿರ ಮೂಲ್ಕಿ ಬಸ್ಸು ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ ಪೆಟ್ರೋಲು ಬಂಕಿನ ಸಮೀಪ ಇದ್ದು ಪರಿಸರದಲ್ಲಿ ಎಲ್ಲಿಯೂ ಸಿಸಿ ಕ್ಯಾಮರಾ ಇಲ್ಲದಿರುವುದು ಕಳ್ಳರಿಗೆ ವರದಾನವಾಗಿದೆ.ಮೂಲ್ಕಿ ಪರಿಸರದಲ್ಲಿ ನಡೆದ ಕಳ್ಳತನ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.ಕಳೆದ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಳ್ಳುವಾಗ ಹೆದ್ದಾರಿ ಬದಿಯಲ್ಲಿದ್ದ ಅಯ್ಯಪ್ಪ ಸ್ವಾಮಿ ಮಂದಿರವನ್ನು ಪುನರೂರು ಪೆಟ್ರೋಲು ಬಂಕಿನ ಹಿಂಬಾಗದಲ್ಲಿರುವ ನೂತನ ಮಂದಿರ ನಿರ್ಮಾಣ ಮಾಡಿ ಪ್ರತಿಷ್ಠಾಪಿಸಲಾಗಿತ್ತು. ಅಯ್ಯಪ್ಪ ದೇವರ ಪವಾಡವೇ ಕಳ್ಳರು ಮೂರ್ತಿಯನ್ನು ಬಿಟ್ಟುಹೋಗಲು ಕಾರಣವಾಗಿರಬಹುದು ಎಂದು ಅಯ್ಯಪ್ಪ ಭಕ್ತರು ಹೇಳಿದ್ದು ಪೊದೆಯಲ್ಲಿ ಅಡಗಿಸಿಟ್ಟಿದ್ದ ಅಯ್ಯಪ್ಪ ಮೂರ್ತಿ ಸಿಕ್ಕಿದ ಕೂಡಲೇ ಖುಷಿಯಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಭಕ್ತ ಉದ್ಗೋಷ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *