ಮೂಲ್ಕಿ ಅಂತರ್ ಕಾಲೇಜು ಸಾಂಸ್ಕøತಿಕ ಸ್ಪರ್ಧೆ: ಉಡುಪಿ ಎಂಜಿಎಂಗೆ ಪ್ರಶಸ್ತಿ ಅಧಿಕಾರದ ಜವಾಬ್ದಾರಿಗೆ ಎನ್‍ಎಸ್‍ಎಸ್ ಮಾರ್ಗದರ್ಶಕ : ಸುಧಾರಾಣಿ

ಮೂಲ್ಕಿ: ಇಲ್ಲಿನ ವಿಜಯಾ ಕಾಲೇಜು ಎನ್‍ಎಸ್‍ಎಸ್ ವತಿಯಿಂದ ಎನ್‍ಎಸ್‍ಎಸ್ ಸುವರ್ಣ ಸಂಭ್ರಮ-2019ರ ಅಂಗವಾಗಿ ಬುಧವಾರ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಏಕತೆಯನ್ನು ಸಾರುವ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಉಡುಪಿಯ ಎಮ್.ಜಿ.ಎಮ್ ಕಾಲೇಜು ಪ್ರಶಸ್ತಿ ಪಡೆಯಿತು.

ಕಟೀಲು ಎಸ್‍ಡಿಪಿಐ ದ್ವಿತೀಯ ಮತ್ತು ಕಾರ್ಕಳ ಮಂಜುನಾಥ ಪೈ ಸ್ಮಾರಕ ಕಾಲೇಜು ತೃತೀಯ ಸ್ಥಾನ ಪಡೆಯಿತು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಮಾರೋಪ ಭಾಷಣಗೈದ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಕಿನ್ನಿಗೋಳಿ, ಸಾರ್ವಜನಿಕವಾಗಿ ಅಧಿಕಾರ ಪಡೆಯುವ ಜವಾಬ್ದಾರಿಯನ್ನು ಎನ್‍ಎಸ್‍ಎಸ್ ಮಾರ್ಗದರ್ಶಕದ ರೂಪವಾಗಿ ಬೆಳೆದಿದೆ. ಸಮಾಜದ ಜನರೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶವನ್ನು ತಿಳಿ ಹೇಳುತ್ತದೆ ಎಂದು ಹೇಳಿದರು.

ಮೂಲ್ಕಿ ಮಯೂರಿ ಫೌಂಡೇಶನ್ ಅಧ್ಯಕ್ಷ ಕೆ.ಜಯ ಶೆಟ್ಟಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಕಚೇರಿ ನಿರ್ವಹಣೆಯ ರಮೇಶ್ ಗುಂಡಾಲು ಅವರನ್ನು ಸನ್ಮಾನಿಸಲಾಯಿತು.
ಸ್ಪರ್ಧೆಯಲ್ಲಿ ಉತ್ತಮ ನಿರೂಪಕಿ ಪ್ರಶಸ್ತಿ ಪಡೆದ ಉಡುಪಿಯ ಎಂಜಿಎಂ ಕಾಲೇಜಿನ ಸ್ಮಿತಾ ಅನಿಸಿ ವ್ಯಕ್ತಪಡಿಸಿದರು.

ತೀರ್ಪುಗಾರರಾದ ಪರಮಾನಂದ ಸಾಲ್ಯಾನ್, ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ, ಕೆ.ಬಿ.ಸುರೇಶ್ ಕಿನ್ನಿಗೋಳಿ, ಮೂಲ್ಕಿ ಶಾಂಭವಿ ಜೆಸಿಐ ಅಧ್ಯಕ್ಷ ನವೀನ್ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪಮಿದಾ ಬೇಗಂ, ವಿಪ್ರ ಸಂಪದದ ಜನಕರಾಜ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವಿಜಯಾಕುಮಾರಿ, ಸುವರ್ಣ ವೈಭವ ಸಮಿತಿಯ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಾರ್ಯದರ್ಶಿ ಜಿತೇಂದ್ರ ವಿ.ರಾವ್, ಪ್ರಜ್ಞೇಶ್ ಭಟ್, ಪ್ರಾಣೇಶ್ ಭಟ್ ಮತ್ತಿತರರು ಇದ್ದರು.

ಕ್ಯಾ: ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಎನ್‍ಎಸ್‍ಎಸ್ ಸುವರ್ಣ ಸಂಭ್ರಮದ ಸಮಾರೋಪದಲ್ಲಿ ಬುಧವಾರ ಅಂತರ್ ಕಾಲೇಜು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಉಡುಪಿಯ ಎಂಜಿಎಂ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.