ಮೂಲ್ಕಿಯ ಹಿಂದೂ ಯುವ ಸೇನೆಯ ವತಿಯಿಂದ ರಾಜ್ಯೋತ್ಸವ

ಮೂಲ್ಕಿಯ ಹಿಂದೂ ಯುವ ಸೇನೆಯ ವತಿಯಿಂದ ಮೂಲ್ಕಿ ಶಿವಾಜಿ ಮಂಟಪದಲ್ಲಿ ಶುಕ್ರವಾರ ವಿವಿಧ ಶಾಲಾ ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಕರ್ನಾಟಕ ರಾಜ್ಯೋತ್ಸವವನ್ನು ರಾಷ್ಟç ಧ್ವಜ ಮತ್ತು ಕನ್ನಡ ಧ್ವಜಾರೋಹಣದೊಂದಿಗೆ ನಡೆಸಲಾಯಿತು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ರಾಷ್ಟç ಧ್ವಜಾರೋಣಗೈದರು. ಹಿಂದೂ ಯುವ ಸೇನೆಯ ಅಧ್ಯಕ್ಷ ಅಶ್ವತ್ಥ್ ಕೊಲಕಾಡಿ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ನೀರಜಾಕ್ಷಿ ಅಗರ್‌ವಾಲ್ ಕನ್ನಡ ಧ್ವಜಾರೋಹಣಗೈದರು.