ಮಿಲಾದುನ್ನಬಿ ಮೆರವಣಿಗೆ

ಪಡುಬಿದ್ರಿ ಮುಹ್‍ಯುದ್ದೀನ್ ಜುಮಾ ಮಸ್ಜಿದ್ ವತಿಯಿಂದ ಈದ್ ಮಿಲಾದ್ ಹಬ್ಬದ ಅಂಗವಾಗಿ ಮಂಗಳವಾರ ಕಂಚಿನಡ್ಕದಿಂದ ಪಡುಬಿದ್ರಿ ಮಸ್ಜಿದ್‍ವರೆಗೆ ಮಿಲಾದುನ್ನಬಿ ಮೆರವಣಿಗೆ ನಡೆಯಿತು.

 


ಮೂಲ್ಕಿ ಕೇಂದ್ರ ಶಾಫಿ ಜುಮಾ ಮಸ್ಜಿದ್ ವತಿಯಿಂದ ಮಂಗಳವಾರ ಈದ್ ಮಿಲಾದ್ ಅಂಗವಾಗಿ ಝಿಂದಾ ಮದರ್‍ಶಾ ದರ್ಗಾದಿಂದ ಕೇಂದ್ರ ಮಸೀದಿವರೆಗೆ ಮಿಲಾದುನ್ನಬಿ ಮೆರವಣಿಗೆಯು ಎಸ್‍ಬಿ ದಾರಿಮಿ ಮತ್ತು ಇಸ್ಮಾಯಿಲ್ ದಾರಿಮಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ನೆರವಿನೊಂದಿಗೆ ನಡೆಯಿತು.

 


ಮೂಲ್ಕಿಯ ಕೆಎಸ್ ರಾವ್ ನಗರದ ಜುಮಾ ಮಸ್ಜಿದ್ ವತಿಯಿಂದ ಮಂಗಳವಾರ ಈದ್ ಮಿಲಾದ್ ಅಂಗವಾಗಿ ಮಿಲಾದುನ್ನಬೀ ಮೆರವಣಿಗೆಯು ನಡೆಯಿತು.