ಮಾನವ ಸಂಪನ್ಮೂಲವೇ ದೇಶದ ಬಹುದೊಡ್ಡ ಆಸ್ತಿ-ಸುರೇಶ್ ಶೆಟ್ಟಿ ಗುರ್ಮೆ

ಪಡುಬಿದ್ರಿ: ಮಾನವ ಸಂಪನ್ಮೂಲವೇ ನಮ್ಮ ದೇಶದ ಬಹುದೊಡ್ಡ ಆಸ್ತಿ.ಮನುಷ್ಯ ಸಂಬಂಧಗಳನ್ನು ಒಗ್ಗೂಡಿಸುವ ಸೇತುವೆಯಾಗಿ ಜೇಸಿಐ ಸಂಸ್ಥೆ ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವುದು ಉಲ್ಲೇಖನೀಯ ಎಂದು ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.

ಪಡುಬಿದ್ರಿ ಬಂಟರ ಭವನದ ಹೊರಾಂಗಣದ ಸಭಾಂಗಣದಲ್ಲಿ ನಡೆದ ಜೇಸಿಐ ಪಡುಬಿದ್ರಿಯ 2019ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸೋಲುವ ಕಥೆಗಳನ್ನು ಹೇಳುತ್ತಾ ಯುವಕರಿಗೆ ಹೇಳುತ್ತಾ ಬದುಕನ್ನು ಕಟ್ಟಲು ಪ್ರೇರೇಪಿಸಬೇಕು.ಹಿರಿಯರ ಶ್ರಮದ,ಬಡತನದ ಕಥೆಗಳು ಅವರಿಗೆ ಪ್ರೇರಣೆಯಾಗಬೇಕು ಎಂದವರು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಭಾರತೀಯ ಜೇಸಿಐನ ರಾಷ್ಟ್ರೀಯ ತರಬೇತುದಾರ ಕೆ.ರಾಮದಾಸ ಆರ್ಯ ಮಾತನಾಡಿ,ಯುವ ಜನಾಂಗವನ್ನು ತರಬೇತುಗೊಳಿಸುವ ಜತೆಗೆ ಪ್ರತಿಭಾನ್ವೇಷಣೆಗೆ ಮುಂದಡಿಯಿಡಬೇಕು.ಜೇಸಿಐಗೆ ಸೇರಿದ ಕ್ಷಣದಿಂದಲೇ ಮಾನವೀಯ ಸಂಬಂಧಗಳ ಬಗ್ಗೆ ತರಬೇತಿಗಳನ್ನು ನೀಡಬೇಕು ಎಂದವರು ಹೇಳಿದರು.
ಪದ ಪ್ರದಾನ: ಜೇಸಿಐ ಪಡುಬಿದ್ರಿಯ ನೂತನ ಅಧ್ಯಕ್ಷ ಅನಿಲ್ ಕುಮಾರ್ ಶೆಟ್ಟಿಯವರಿಗೆ ಜೇಸಿಐ ವಲಯ ಉಪಾಧ್ಯಕ್ಷ ಹಾಗೂ ಜೇಸಿಐ ಪಡುಬಿದ್ರಿಯ ನಿರ್ಗಮನ ಅಧ್ಯಕ್ಷ ಮಕರಂದ್ ಸಾಲ್ಯಾನ್ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.

2019ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಅನಿಲ್‍ಕುಮಾರ್ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.ನಿರ್ಗಮನ ಕಾರ್ಯದರ್ಶಿ ಬಸವರಾಜ್‍ರವರು ನೂತನ ಕಾರ್ಯದರ್ಶಿ ಪ್ರದೀಪ್ ಆಚಾರ್ಯರಿಗೆ ಅಧಿಕಾರ ಹಸ್ತಾಂತರಿಸಿದರು.ಜೇಸೀರೆಟ್ ನಿರ್ಗಮನ ಅಧ್ಯಕ್ಷೆ ಹರ್ಷಿತಾ ಮಕರಂದ್ ನೂತನ ಅಧ್ಯಕ್ಷೆ ಸುಪ್ರಿಯಾ ಅನಿಲ್ ಶೆಟ್ಟಿಯವರಿಗೆ ಅಧಿಕಾರ ಹಸ್ತಾಂತರಿಸಿದರು.ಜ್ಯೂನಿಯರ್ ಜೇಸೀ ಅಧ್ಯಕ್ಷೆ ಬ್ರಾಹ್ಮೀ ಹರೀಶ್‍ರವರು ಅನಿಲ್‍ಕುಮಾರ್ ಶೆಟ್ಟಿಯವರಿಂದ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ಮಾತನಾಡಿದ ಅನಿಲ್ ಶೆಟ್ಟಿ,ಜೇಸೀ ಧ್ಯೇಯ ಧೋರಣೆಗಳಿಗನುಗುಣವಾಗಿ ಕಾರ್ಯನಿರ್ವಹಿಸುವುದಾಗಿ ಹಾಗೂ ಯುವ ಜನತೆಗೆ ತರಬೇತಿ ನೀಡುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುವುದಾಗಿ ಘೋಷಿಸಿದರು.

Larren Pinto felicitated
Larren Pinto felicitated by JCI Padubidri

ಸನ್ಮಾನ: ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೆಳ್ಮಣ್ಣು ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್‍ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಲಾರೆನ್ ಪಿಂಟೋರವರನ್ನು ಅವರ ತಾಯಿ ಜ್ಯೋತಿ ಪಿಂಟೋ ಸಮ್ಮುಖ ಜೇಸಿಐ ಪಡುಬಿದ್ರಿ ವತಿಯಿಂದ ಸನ್ಮಾನಿಸಲಾಯಿತು.

ಜೇಸೀ ವಲಯ 15ರ ವಲಯಾಧ್ಯಕ್ಷ ಅಶೋಕ್ ಚೂಂತಾರು ಮುಖ್ಯ ಅತಿಥಿಯಾಗಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನಿಕಟ ಪೂರ್ವಾಧ್ಯಕ್ಷ ಪ್ರಸನ್ನ ಕುಮಾರ್‍ರವರನ್ನು ಪೂರ್ವಾಧ್ಯಕ್ಷರುಗಳ ಸಾಲಿಗೆ ಸೇರಿಸಿಕೊಳ್ಳಲಾಯಿತು.ಇದೇ ಸಂದರ್ಭ 11 ಮಂದಿ ನೂತನ ಸದಸ್ಯರನ್ನು ಜೇಸಿಐ ಪಡುಬಿದ್ರಿಗೆ ಸೇರ್ಪಡೆಗೊಳಿಸಲಾಯಿತು.

ಜಯ ಶೆಟ್ಟಿ ಪದ್ರ ಕಾರ್ಯಕ್ರಮ ನಿರ್ವಹಿಸಿದರು.ಮುರಳೀನಾಥ ಶೆಟ್ಟಿ,ಡಾ.ಮನೋಜ್‍ಕುಮಾರ್ ಶೆಟ್ಟಿ,ಪ್ರೀತಿ ಸುವರ್ಣ,ಸಂತೃಪ್ತಿ ಶೆಟ್ಟಿ,ಪ್ರದೀಪ್ ಪರಿಚಯಿಸಿದರು.

ಮಕರಂದ್ ಸಾಲ್ಯಾನ್ ಸ್ವಾಗತಿಸಿದರು.ಪ್ರದೀಪ್ ಆಚಾರ್ಯ ವಂದಿಸಿದರು.