ಮಹಿಳೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಕೊಳ್ಳಬೇಕು-ಡಾ ವಂದನಾ ಕೆ.ಎಮ್.

ಮೂಲ್ಕಿ: ಮಹಿಳೆ ಅಬಲೆಯಲ್ಲ.ಅವಳಿಗೆ ಅನುಕಂಪದ ಅವಶ್ಯಕತೆಯ ಅಗತ್ಯವಿಲ್ಲ.ಮಹಿಳೆ ಗೌರವವನ್ನು ಅಪೇಕ್ಷಿಸುತ್ತಾಳೆ.ಮಹಿಳೆ ಸಿಕ್ಕಿದ ಅವಕಾಶಗಳನ್ನು ದುರುಪಯೋಗಪಡಿಕೊಳ್ಳಬಾರದು.ಇದರಿಂದ ಅಪಾಯ ಖಚಿತ ಎಂದು ಮೂಲ್ಕಿ ನಾರಾಯಣ ಗುರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಂದನಾ ಕೆ.ಎಮ್.ಹೇಳಿದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶನಿವಾರ ಸಂಜೆ ಯುವವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ವಿವಿಧ ಮಹಿಳಾ ಸಂಘಗಳ ಸಹಕಾರದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮ ಭೂಮಿಕಾ-2019(ಶಿಕ್ಷಣ-ಸಮಾಜ-ಕುಟುಂಬ) ಕಾರ್ಯಕ್ರಮದಲ್ಲಿ ಸಂಘಟಕರ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೇಸಿಐ ವಲಯ 15ರ ಪೂರ್ವಾಧ್ಯಕ್ಷೆ ಗುಣವತೀ ರಮೇಶ್ ಮಾತನಾಡಿ,ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ ಸಾಧ್ಯವಾಗಿದೆ.ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಮಹಿಳೆ ಉನ್ನತರಾಗಲು ಸಾಧ್ಯವಿದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಪಾರ್ವತಿ ಎಸ್.ಅಮೀನ್ ಮಾತನಾಡಿ,ಮಹಿಳೆಯರು ಸುಶಿಕ್ಷಿತರಾಗಿ ಸಂಘ ಜೀವಿಯಾಗಿ ಸ್ವಾಭಿಮಾನದಿಂದ ನಾಯಕತ್ವದ ಗುಣಗಳನ್ನು ಪಡೆದು ಬೆಳೆದರೆ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಸನ್ಮಾನ: ಇದೇ ಸಂದರ್ಭ ಡಾ.ವಂದನಾ ಕೆ.ಎಮ್ ಮತ್ತು ಸಮಾಜಸೇವಕಿ ಹಳೆಯಂಗಡಿ ನಂದಾ ಪಾಯಸ್‍ರವರನ್ನು ಸಂಘಟಕರ ವತಿಯಿಂದ ಸನ್ಮಾನಿಸಲಾಯಿತು.
ಕಿರುಚಿತ್ರ ಲೋಕಾರ್ಪಣೆ: ಮೂಲ್ಕಿ ಬಿಲ್ಲವ ಮಹಿಲಾ ಸಂಘದ ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣ ಮತ್ತು ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಶಾಂಭವಿ ಶೆಟ್ಟಿ ನಿಡ್ಡೋಡಿಯವರ ಕಿರುಚಿತ್ರವನ್ನು ಲೋಕಾರ್ಪಣೆಗೊಳಿಸಲಾಯಿತು.
ನೆರವು: ಇದೇ ಸಂದರ್ಭ ಅರ್ಹ ಫಲಾನುಭವಿಗಳಿಗೆ ಧನಸಹಾಯ ವಿತರಿಸಲಾಯಿತು.
ಕಾರ್ಯಕ್ರಮದ ನಡುವೆ ವಿವಿಧ ಮಹಿಳಾ ಸಂಘಟನೆಗಳಿಂದ ನೃತ್ಯ,ಸಂಗೀತ ಸಹಿತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಕುಶಲ ಎಸ್.ಕುಕ್ಯಾನ್ ವಹಿಸಿ ಸ್ವಾಗತಿಸಿದರು.
ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್,ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ,ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ಅಂಬಾವತಿ,ಯುವವಾಹಿನಿ ಮೂಲ್ಕಿ ಘಟಕದ ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್,ನಿರ್ದೇಶಕರಾದ ಸುನೀತಾ ದಾಮೋದರ್,ಜ್ಯೋತಿ ಕೋಟ್ಯಾನ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕಿ ಅಶ್ವಿನಿ ಉಪಸ್ಥಿತರಿದ್ದರು.

ಯುವವಾಹಿನಿ ಮೂಲ್ಕಿ ಘಟಕದ ನಿಕಟಪೂರ್ವಾಧ್ಯಕ್ಷೆ ರಕ್ಷಿತಾ ಯೋಗೀಶ್ ಕೋಟ್ಯಾನ್,ಜ್ಞಾನವಿ ಮೋಹನ್,ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರ್ವಹಿಸಿದರು.ಚರಿಷ್ಮಾ ಶ್ರೀನಿವಾಸ್ ವಂದಿಸಿದರು.