ಮಹಿಳಾ ಸಂಘಟನೆಯಿಂದ ಸಂಸ್ಥೆ ಬಲಯುತ-ಸರ್ವೋತ್ತಮ ಅಂಚನ್

ಮೂಲ್ಕಿ ಹಿಂದೂ ಯುವ ಸೇನಯ ಮಹಿಳಾ ಘಟಕ ಉದ್ಘಾಟನೆ
ಮೂಲ್ಕಿ: ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಂಸ್ಥೆಗಳು ಬಲಯುತಗೊಳ್ಳುತ್ತದೆ.ಮೂಲ್ಕಿ ಹಿಂದೂ ಯುವ ಸೇನೆಯ ಮಹಿಳಾ ಘಟಕ ಆರಂಭದೊAದಿಗೆ ಮುಂದೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳು ಸಾಕಾರಗೊಳ್ಳುವಂತಾಗಲಿ ಎಂದು ಹಿರಿಯ ಪತ್ರಕರ್ತ ಹಾಗೂ ಮೂಲ್ಕಿ ಹೋಬಳಿ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಸರ್ವೋತ್ತಮ ಅಂಚನ್ ಹೇಳಿದರು.

ಶುಕ್ರವಾರ ಮೂಲ್ಕಿಯ ಶಿವಾಜಿ ಮಂಟಪದಲ್ಲಿ ಮೂಲ್ಕಿ ಹಿಂದೂ ಯುವ ಸೇನೆಯ ಮಹಿಳಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ಮಹಿಳಾ ಘಟಕದ ಅಧ್ಯಕ್ಷೆ ನೀರಜಾಕ್ಷಿ ಅಗರ್‌ವಾಲ್ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡು ನೂತನ ಸದಸ್ಯೆಯರಿಗೆ ಶಾಲು ನೀಡುವ ಮೂಲಕ ಸಂಘಟನೆಗೆ ಚಾಲನೆ ನೀಡಿದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಹಿಂದೂ ಯುವ ಸೇನೆಯ ಅಧ್ಯಕ್ಷ ಅಶ್ವತ್ಥ್ ಕೊಲಕಾಡಿ, ಕಾರ್ಯದರ್ಶಿ ನಿತಿನ್ ದೇವಾಡಿಗ, ಮಹಿಳಾ ಘಟಕದ ಉಪಾಧ್ಯಕ್ಷೆ ಲತಾ ಶೇಖರ್, ಕಾರ್ಯದರ್ಶಿ ಸುಲತಾ ಕೃಷ್ಣ ಮುಖ್ಯ ಅತಿಥಿಗಳಾಗಿದ್ದರು.
ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.