ಮಲ್ಪೆ ರಿಯಲ್ ಫೈಟರ್ಸ್‍ಗೆ ಪಡುಬಿದ್ರಿ ಆಪತ್ಬಾಂಧವ ಟ್ರೋಫಿ-2018

ಪಡುಬಿದ್ರಿ:  ಇಲ್ಲಿನ ಬೋರ್ಡ್ ಶಾಲಾ ಮೈದಾನದಲ್ಲಿ ಕಂಚಿನಡ್ಕ ಆಪತ್ಬಾಂಧವ ಫೆಂಡ್ಸ್ ವತಿಯಿಂದ ನಡೆದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾದಲ್ಲಿ ಬಲಿಷ್ಠ ಮಲ್ಪೆ ರಿಯಲ್ ಫೈಟರ್ಸ್ ತಂಡವು ಆಪತ್ಬಾಂಧವ ಟ್ರೋಫಿ-2018 ಸಹಿತ ನಗದು ರೂ.50 ಸಾವಿರ ಪಡೆಯಿತು

ಮಂಗಳವಾರ ನಡೆದ ಫೈನಲ್‍ನಲ್ಲಿ ಮೂಲ್ಕಿ ಸ್ಪಾನ್ ಮರೈನ್ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆಯಿತು.ಸ್ಪಾನ್ ಮರೈನ್ ತಂಡವು ದ್ವಿತೀಯ ಟ್ರೋಫಿ ಸಹಿತ ನಗದು ರೂ.30 ಸಾವಿರ ಪಡೆಯಿತು.

ಸೆಮಿಫೈನಲ್‍ಗಳಲ್ಲಿ ರಿಯಲ್ ಫೈಟರ್ಸ್ ತಂಡವು ಬೇಂಗ್ರೆ ಚಾಂದನಿ ಡೌನ್‍ಟೌನ್ ತಂಡವನ್ನೂ,ಸ್ಪಾನ್ ಮರೈನ್ ತಂಡವು ಕಂಚಿನಡ್ಕ ಜೈಭಾರತ್ ತಂಡವನ್ನೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ವೈಯಕ್ತಿಕ ಪ್ರಶಸ್ತಿ: ಎಲ್ಲಾ ಪಂದ್ಯಗಳಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ರಿಯಲ್ ಫೈಟರ್ಸ್‍ನ ವೆಂಕಿ ಯಾನೆ ವೆಂಕಟೇಶ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಹಾಗೂ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರೆ,ಸ್ಪಾನ್ ಮರೈನ್ ತಂಡದ ನಾಗರಾಜ್ ಅತ್ಯುತ್ತಮ ಬ್ಯಾಟ್ಸ್‍ಮೆನ್ ಪ್ರಶಸ್ತಿ ಪಡೆದರು.ಚಾಂದನಿ ತಂಡದ ಆಸಿಫ್ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದರು.ಸರಣಿಯುದ್ದಕ್ಕೂ ಅತ್ಯುತ್ತಮ ಆಟ ಪ್ರದರ್ಶಿಸಿದ ರಿಯಲ್ ಫೈಟರ್ಸ್ ತಂಡದ ಹಿರಿಯ ಆಟಗಾರ ಮೊಹಮ್ಮದ್ ಆರಿಫ್ ಮುಕ್ಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ರಕ್ತದಾನ ಶಿಬಿರ ನಡೆಸುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿ

ಸಮಾರೋಪ ಸಮಾರಂಭದಲ್ಲಿ ತುಮಕೂರು ಶ್ರೀ ವಿಷ್ಣು ವಿಶೇಷ ಚೇತನ ಕಲಾ ತಂಡದಿಂದ ಗಾನ ಮೇಳ ನಡೆಸುವ ಮೂಲಕ ಆಪತ್ಬಾಂಧವ ಮೊಹಮ್ಮದ್ ಆಸಿಫ್ ಸರ್ವರಿಂದ ಪ್ರಶಂಸೆಗೆ ಒಳಗಾದರು.ಈ ಸಂದರ್ಭ ಶ್ರೀ ವಿಷ್ಣು ಕಲಾ ಟಂಡಕ್ಕೆ ಆಪತ್ಬಾಂಧವ ಫ್ರೆಂಡ್ಸ್ ವತಿಯಿಂದ ರೂ.10 ಸಾವಿರ ಸಹಾಯಧನ ವಿತರಿಸಲಾಯಿತು.

ಅಂಬುಲೆನ್ಸ್ ಉದ್ಘಾಟನೆ: ಇದೇ ವೇಳೆ ಅತ್ಯಾಧುನಿಕ ಆಪತ್ಬಾಂಧವ ಕಲ್ಪತರು ಅಂಬುಲೆನ್ಸ್‍ನ್ನು ಮುಂಬೈ ಉದ್ಯಮಿ ಕರ್ನಿರೆ ಉದ್ಘಾಟಿಸಿ ಶುಭ ಹಾರೈಸಿದರು.

ಬಹುಮಾನ ವಿತರಣೆ: ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು,ಪಡುಬಿದ್ರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ,ಉಡುಪಿ ಜಿಲ್ಲಾ ಟೆನ್ನಿಸ್‍ಬಾಲ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ,ಜಿಲ್ಲಾ ಕರವೇ ಅಧ್ಯಕ್ಷ ಅನ್ಸಾರ್ ಅಹ್‍ಮದ್,ಪಡುಬಿದ್ರಿ ಗ್ರಾಪಂ ಅಧ್ಯಕ್ಷ ಹಸನ್ ಬಾವಾ,ದಸಂಸ ಪಡುಬಿದ್ರಿ ಶಾಖೆಯ ಸಂಚಾಲಕ ಲೋಕೇಶ್ ಕಂಚಿನಡ್ಕ,ಯೂತ್ ಫೌಂಡೇಶನ್ ಅಧ್ಯಕ್ಷ ಹಮೀದ್ ಪಡುಬಿದ್ರಿ,ಮಲ್ಪೆ ಉದ್ಯಮಿ ಝಕಾರಿಯಾ,ಕತಾರ್ ಉದ್ಯಮಿ ಜಯರಾಜ್ ಶೆಟ್ಟಿ,ಪತ್ರಕರ್ತ ಸುರೇಶ್ ಎರ್ಮಾಳು,ಕರವೇ ಕಾಪು ಘಟಕಾಧ್ಯಕ್ಷ ಎಮ್‍ಎಸ್ ನಿಝಾಮುದ್ದೀನ್,ತುಮಕೂರು ಶ್ರೀ ವಿಷ್ಣು ಕಲಾ ತಂಡದ ಮುಖ್ಯಸ್ಥ ಸುದರ್ಶನ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಆಪತ್ಬಾಂಧವ ಮೊಹಮ್ಮದ್ ಆಸಿಫ್ ಪ್ರಸ್ತಾವಿಸಿದರು.ರಝಾಕ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.