ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜ ಸೇವೆ ಮಾಡುವುದು ಆದ್ಯ ಕರ್ತವ್ಯ-ಹರಿಕೃಷ್ಣ ಪುನರೂರು

ಮೂಲ್ಕಿ: ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜ ಸೇವೆ ಮಾಡುವುದು ಮನುಷ್ಯನ ಆದ್ಯ ಕರ್ತವ್ಯವಾಗಿದೆ.ಸಮಾಜ ಸೇವೆ ಮಾಡುವವರು ಮಾತ್ರ ಲಯನ್ಸ್ ಸಂಸ್ಥೆಗೆ ಸೇರಬೇಕು ಎಂದು ರಾಜ್ಯ ಕಸಾಪ ಪೂರ್ವಾಧ್ಯಕ್ಷ ಹಾಗೂ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿ-ಕಾರ್ನಾಡಿನ ಬಂಟರ ಸಂಘದ ಸಭಾಭವನದಲ್ಲಿ ಶನಿವಾರ ರಾತ್ರಿ ನಡೆದ ಲಯನ್ಸ್ ಜಿಲ್ಲಾ ಗವರ್ನರ್ ಕೆ.ದೇವದಾಸ ಭಂಡಾರಿಯವರ ಅಧಿಕೃತ ಭೇಟಿ ಕಾರ್ಯಕ್ರಮ ಮತ್ತು ಚಾರ್ಟರ್‍ನೈಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಸಂದರ್ಭ ಸಮಾಜಕ್ಕೆ ನೀಡಿದ ಗಣನೀಯ ಸೇವೆಯನ್ನು ಗುರುತಿಸಿ ಹರಿಕೃಷ್ಣ ಪುನರೂರು-ಉಷಾರಾಣಿ ಪುನರೂರು ದಂಪತಿಯನ್ನು “ಲಯನ್ ಸಾಧನಾ ಶ್ರೀ” ಬಿರುದಿನೊಂದಿಗೆ ಸನ್ಮಾನಿಸಲಾಯಿತು.
ಚಾರ್ಟರ್‍ನೈಟ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್ ಜಿಲ್ಲಾ ಗವರ್ನರ್ ಕೆ.ದೇವದಾಸ ಭಂಡಾರಿ-ಸುಖಲತಾ ಭಂಡಾರಿ ದಂಪತಿಯನ್ನು ಅಭಿನಂದನಾ ಠರಾವಿನೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿ ವೇತನ ವಿತರಣೆ:ಜಿಎಮ್ ಶೆಟ್ಟಿ ಸ್ಮರಣಾರ್ಥ ಅವರ ಪುತ್ರ ಜಿಎಮ್ ಹರ್ಷರಾಜ್ ಶೆಟ್ಟಿ ಕೊಡಮಾಡಿದ ವಿದ್ಯಾರ್ಥಿವೇತನವನ್ನು 5 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಶಿಕ್ಷಕರ ವೇತನ: ಪ್ರಬೋದ್ ಕುಡ್ವ ಕೊಡಮಾಡಿದ ಶಿಕ್ಷಕರ ವೇತನವನ್ನು ಮಾನಂಪಾಡಿ ಶಾಲಾ ಶಿಕ್ಷಕರಿಗೆ ವಿತರಿಸಲಾಯಿತು.
ಯುವ ಸಾಧಕರಿಗೆ ಸನ್ಮಾನ:ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ ಎನ್‍ಸಿಸಿ ವಿದ್ಯಾರ್ಥಿ ಶ್ರೀಜಿತ್ ಎಮ್‍ಎಸ್ ಭಟ್,ಬಾಲ ನಟಿ ಮತ್ತು ನೃತ್ಯ ಪ್ರತಿಭೆ ನೀಕ್ಷಾ ಆರ್.ಶೆಟ್ಟಿ ಮತ್ತು ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಪ್ರತಿಭೆ ಸಾಧನಾ ವಿ.ಹೆಬ್ಬಾರ್‍ರವರನ್ನು ಸನ್ಮಾನಿಸಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಚಂದ್ರಶೇಖರ ನಾನಿಲ್‍ರವರನ್ನು ಮೂಲ್ಕಿ ಲಯನ್ಸ್ ವತಿಯಿಂದ ಸನ್ಮಾನಿಸಲಾಯಿತು.ಮೂಲ್ಕಿ ಲಯನ್ಸ್‍ನ ಶೀತಲೀಕರಣ ಶವಾಗಾರದ ಉಸ್ತುವಾರಿ ನೋಡಿಕೊಂಡಿರುವ ಮೊಹಮ್ಮದ್ ಆಸಿಫ್-ದಾವುದ್ ಇಬ್ರಾಹಿಮ್ ಸಹೋದರರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಲಯನ್ಸ್ ಅಧ್ಯಕ್ಷ ಸದಾಶಿವ ಹೊಸದುರ್ಗ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಲಯನೆಸ್ ಅಧ್ಯಕ್ಷೆ ಶಾಂತಾ ಹೊಸದುರ್ಗ,ಲಿಯೋ ಅಧ್ಯಕ್ಷೆ ಶಿಖಾ ಸುಶೀಲ್,ನಿಕಟಪೂರ್ವಾದ್ಯಕ್ಷೆ ಶಿಲ್ಪಾ ಕುಡ್ವ,ವಲಯಾಧ್ಯಕ್ಷರುಗಳಾದ ಉದಯ ಅಮೀನ್,ಗಣೇಶ್ ಶೆಟ್ಟಿ,ಅಬೂಬಕ್ಕರ್ ಕುಕ್ಕಾಡಿ,ಗೀತ್ ಪ್ರಕಾಶ್,ಸೌಮ್ಯಾ ಶೆಟ್ಟಿ,ಹರೀಶ್ ಪುತ್ರನ್,ಸುಜಿತ್ ಸಾಲ್ಯಾನ್,ಚಂದ್ರಹಾಸ ಶೆಟ್ಟಿ,ಪಲ್ಲವಿ ರೈ,ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.

ಕಾರ್ಯದರ್ಶಿ ರವೀಂದ್ರ ಶೆಟ್ಟಿ ವರದಿ ಮಂಡಿಸಿದರು.ವಿಜಯಕುಮಾರ್ ಕುಬೆವೂರು ಕಾರ್ಯಕ್ರಮ ನಿರ್ವಹಿಸಿದರು.ಕೋಶಾಧಿಕಾರಿ ವಿನೋದ್ ಸಾಲ್ಯಾನ್ ವಂದಿಸಿದರು.