ಮಕ್ಕಳ ದಿನಾಚರಣೆ: ಪಡುಬಿದ್ರಿ ಬೀಚ್ ಹೌಸ್‍ನಲ್ಲಿ ಮಂಗಳೂರಿನ ಅಂಧ ಮಕ್ಕಳ ಮೋಜು ಮಸ್ತಿ

ಪಡುಬಿದ್ರಿ: ಮಕ್ಕಳ ದಿನವನ್ನು ಹೊಸತನದೊಂದಿಗೆ ಕಳೆಯುವ ವಿಶೀಷ ಸಂದರ್ಭ. ಮಂಗಳೂರಿನ ಚಿಲಿಂಬಿಯ ರೋಮನ್ ಮತ್ತು ಕ್ಯಾಥರೀನ್ ಲೋಬೋ ಅಂಧ ಮಕ್ಕಳ ವಿಶೇಷ ವಸತಿ ಶಾಲೆಯ ಮಕ್ಕಳು ಪಡುಬಿದ್ರಿಯ ಇರಾ ಬೀಚ್ ಹೌಸ್‍ಗೆ ಬಂದಿದ್ದರು. ಮಕ್ಕಳ ದಿನಾಚರಣೆಯ ಇಡಿಯ ದಿನವನ್ನು ಆನಂದಮಯವಾಗಿ ಕಳೆದು, ಸಂಜೆಯ ವೇಳೆಗೆ ಮಂಗಳೂರಿಗೆ ಮರಳಿದ್ದಾರೆ.

ಪಡುಬಿದ್ರಿಯ ಬೀಚ್ ಹೌಸಲ್ಲಿ ಮಕ್ಕಳು ಬೋಟಿಂಗ್ ಸವಿಯ ಸವಿದ್ದಾರೆ. ಹತ್ತಿರದ ಮನೆಯ ರಮೇಶಣ್ಣ ಅವರ ಚಿಕನ್ ಅನ್ನ, ಸಾರು ಸವಿಯನ್ನುಂಡಿದ್ದಾರೆ. ತಾವೇ ಮಾಡಿ ತಂದಿರುವ ಗಾಳಿಪಟಗಳನ್ನು ಹಾರಿಸಿ ಸಂತೋಷ ಪಟ್ಟಿದ್ದಾರೆ. ಬಂದಿದ್ದ 29ಮಕ್ಕಳಲ್ಲಿ 10ಮಂದಿ ಪೂರ್ಣ ಅಂಧತ್ವವನ್ನು ಹೊಂದಿದ್ದರೆ, ಮಿಕ್ಕವರು ಭಾಗಶ: ಅಂಧರು. ಶಾಲಾ ಪ್ರಾಂಶುಪಾಲ ಕಾಲೆಸ್ಟಸ್ ಡೇಸಾ ಹುಟ್ಟು ಅಂಧರು. ಜತೆಗೆ ಬಂದಿದ್ದ ಐವರು ಶಿಕ್ಷಕರಲ್ಲಿ ಓರ್ವರು ಅಂಧರಿದ್ದರು.

ಇರಾ ಗೆಸ್ಟ್ ಹೌಸ್ ಮಾಲಕ ನರೇಂದ್ರನ್ ಕೊಡುವಟ್ಟಾಟ್ ಇನ್ಫೋಸಿಸ್ ಉದ್ಯೋಗಿಯಾಗಿ ನಿವೃತ್ತರಾದರು. ಚಿಲಿಂಬಿಯ ಈ ಅಂಧ ಮಕ್ಕಳ ಶಾಲೆಯ ಪೆÇೀಷಕರೂ ಹೌದು. ಹಾಗಾಗಿ ಮಕ್ಕಳ ದಿನದಂದು ತಮ್ಮಲ್ಲಿಗೆ ಆಗಮಿಸಿದ್ದ ವಿಶೇಷ ಅತಿಥಿಗಳ ಆತಿಥ್ಯವನ್ನು ಆವರೇ ನೋಡಿಕೊಂಡಿದ್ದರು. ರಾಜ್ಯ ರೆಡ್‍ಕ್ರಾಸ್ ಸೊಸೈಟಿಯ ನಿರ್ದೇಶಕ ಯತೀಶ್ ಬೈಕಂಪಾಡಿ ಅವರು ಈ ಮಕ್ಕಳೊಂದಿಗೆ ಮಕ್ಕಳಾಗಿದ್ದು ಪೆÇ್ರೀತ್ಸಾಹಿಸಿದ್ದರು.

ಸ್ವತಹಾ ಶಾಲಾ ಪ್ರಾಂಶುಪಾಲ ಕಾಲೆಸ್ಟಸ್ ಡೇಸಾ ಮಾತನಾಡಿ, ತಮಗಿದು ವಿಶೇಷ ಸಂತಸದ ದಿನ. ಮಕ್ಕಳ ದಿನದಂದು ತಮ್ಮ ಶಾಲಾ ಮಕ್ಕಳನ್ನು ಹುರಿದುಂಬಿಸಲು ನರೇಂದ್ರನ್ ಮತ್ತು ಯತೀಶ್ ಈ ಅವಕಾಶವನ್ನು ನೀಡಿದ್ದಾರೆ. ಅಂಧ ಅಥವಾ ಭಾಗಶಃ ಅಂಧ ಮಕ್ಕಳ ಭವಿಷ್ಯದ ಬಗೆಗೆ ಪೆÇೀಷಕರು ಅರಿತುಕೊಳ್ಳಬೇಕಿದೆ. ಕೆಲವರು ಅವರೇನು ಕಲಿಯುತ್ತಾರೆ ಎಂಬ ರೀತಿಯಲ್ಲಿ ತಾವೇ ಬೆಳೆಸುತ್ತಾರೆ. ಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ಮಕ್ಕಳಿಗೆ ಶಿಕ್ಷಣವು ಅವರ ಹಕ್ಕು. ಅದನ್ನು ಕಸಿದುಕೊಳ್ಳಬಾರದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದೊಂದಿಗೆ ಮಂಗಳೂರು ಉರ್ವದ ಚಿಲಿಂಬಿಯಲ್ಲಿನ ನಮ್ಮ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿಯ ಶಿಕ್ಷಣವನ್ನು ಮಕ್ಕಳಿಗೆ ಬ್ರೈಲ್ ಲಿಪಿಯಲ್ಲೇ ಕಲಿಸಿಕೊಡಲಾಗುತ್ತದೆ. ಹಾಗಾಗಿ ಪೆÇೀಷಕರೂ ಜಾಗೃತರಾಗಬೇಕಿದೆ. ಅಂಧ ಮಕ್ಕಳ ಶಿಕ್ಷಣವೂ ಉಳಿದವರಂತೆಯೇ ಅತೀ ಮುಖ್ಯವಾಗಿದೆ. ಶಿಕ್ಷಣವಿತ್ತು ಅವರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ನಮ್ಮ ಶಾಲೆ ಮಾಡುತ್ತಿದೆ ಎಂದರು.

ಕಾಮಿನಿ ಹೊಳೆಯಲ್ಲಿ ಈ ವಿದ್ಯಾರ್ಥಿಗಳು ಸರತಿಯ ಸಾಲಲ್ಲಿ ಲೈಫ್‍ಜಾಕೆಟ್ ಹಾಕಿಕೊಂಡು ಸ್ವತಹ ನರೇಂದ್ರನ್ ಮತ್ತು ರಮೇಶಣ್ಣ ಹುಟ್ಟು ಹಾಕುತ್ತಿದ್ದ ಸಣ್ಣ ಮತ್ತು ದೊಡ್ಡ ದೋಣಿಗಳಲ್ಲಿ ನೀರಲ್ಲಿನ ತಮ್ಮ ಹೊಸ ಅನುಭವವನ್ನು ಮೆಲುಕು ಹಾಕಿಕೊಂಡರು. ಬೋಟಲ್ಲಿಯೇ ತೆರಳಿ ಹೆಜಮಾಡಿ ಮುಟ್ಟಳಿವೆಯ ಮರಳ ರಾಶಿಯಲ್ಲೂ ದೋಣಿಯಿಂದ ಇಳಿದು ಅತ್ತಿತ್ತಾ ಓಡಾಡಿ ಸಂತಸಪಟ್ಟರು. ಸಂಜೆಯ ಹೊತ್ತು ಅರಬೀ ಸಮುದ್ರದ ರ್ಭೋಗೊರೆತವನ್ನು ಕೇಳಿ ಆನಂದಿಸಿದರು. ಭಾಗಶ: ದೃಷ್ಟಿಯನ್ನು ಹೊಂದಿದ್ದ ವಿದ್ಯಾರ್ಥಿಗಳು ಇತರಿಗೆ ಗೈಡ್ ಆಗಿದ್ದನ್ನು ಮತ್ತು ತಮಗೆ ಕಾಣುತ್ತಿದ್ದುದನ್ನು ವಿವರಣೆ ನೀಡುತ್ತಿದ್ದ ಪರಿಯು ಮನಕಲುಕುವಂತಿತ್ತು.