ಭಾರತ ಜಗತ್ವಂದಿತವಾಗಬೇಕಾದರೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು-ಶೋಭಾ ಕರಂದ್ಲಾಜೆ

ಪಡುಬಿದ್ರಿ – ಭಾರತ ಜಗತ್ವಂದಿತವಾಗಬೇಕಾದರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.ಅ ನಿಟ್ಟಿನಲ್ಲಿ ಯಾರನ್ನೇ ಅಭ್ಯರ್ಥಿಯಾಗಿಸಿದರೂ ಪಕ್ಷ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಪಡುಬಿದ್ರಿ ಪ್ರಸನ್ನ ಪಾರ್ವತಿ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪಡುಬಿದ್ರಿ ಬಿಜೆಪಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿ,ಸೈನಿಕರ ಸುರಕ್ಷತೆ,ಸ್ವಾವಲಂಭಿತ್ವ,ವಿದೇಶದಲ್ಲಿಯೂ ಭಾರತಕ್ಕೆ ಗೌರವಯುತ ಸ್ಥಾನ ತಂದುಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮತ್ತೊಬ್ಬರು ಪ್ರಧಾನಿಯಾಗಬೇಕೆಂಬ ಕಲ್ಪನೆ ಮಾಡಲೂ ಅಸಾಧ್ಯ ಎಂzವÀರು ಹೇಳಿದರು.

ಉಜ್ವಲ ಯೋಜನೆ,ಆಯುಷ್ಮಾನ್ ಭಾರತ್,ಜನೌಷಧಿ ಕೇಂದ್ರಗಳ ಸ್ಥಾಪನೆ,ಜಿಟಿಡಿಸಿ,ಕೌಶಲಾಭಿವೃದ್ಧಿ ಕೇಂದ್ರಗಳ ಸ್ಥಾಪನೆ ಸಹಿತ ಜನಸಾಮಾನ್ಯರಿಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕಳೆದ ಐದು ವರ್ಷಗಳಲ್ಲಿ ಮಾಡಲಾಗಿದೆ.ರಾಷ್ಟ್ರೀಯ ರಸ್ತೆ ನಿಧಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ರೂ. 5 8 ಕೋಟಿ ಕಾಮಗಾರಿಗಳನ್ನು ಮಾಡಲಾಗಿದೆ.ಇನ್ನಷ್ಟು ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.ಪಾಸ್ ಪೋರ್ಟ್ ಕಚೇರಿ,ಆಭರಣ ತಯಾರಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ನವಯುಗ ವಿರುದ್ಧ ಗರಂ: ಬರ್ಬಾದ್ ನವಯುಗ ಕಂಪೆನಿಗೆ ಯಾರೋ ಗುತ್ತಿಗೆ ನೀಡಿ ಇಂದಿಗೂ ಅಪೂರ್ಣವಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನಾವು ಕೆಟ್ಟ ಪರಿಣಾಮ ಎದುರಿಸುವಂತಾಗಿದೆ.ಆದರೂ ರಾಷ್ಟ್ರೀಯ ಹೆದ್ದಾರಿಯನ್ನು ಪೂರ್ಣಗೊಳಿಸಲು ಅವಿರತ ಶ್ರಮಪಡಲಾಗುತ್ತಿದೆ ಎಂದು ಕರಂದ್ಲಾಜ್ಧೆಭಿಪ್ರಾಯಿಸಿದರು.
ಕಾಪು ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು 28 ಸಾವಿರದ ಅಂತರ ಬಿಜೆಪಿ ಅಭ್ಯರ್ಥಿಗೆ ಲಭ್ಯವಾಗಿತ್ತು.ಈ ಅಂತರವನ್ನು ಇನ್ನಷು ಹೆಚ್ಚುಗೊಳಿಸಿ ದೇಶದಲ್ಲಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವಲ್ಲಿ ಕಾರ್ಯಕರ್ತರೆಲ್ಲ ತಮಗೆ ನೀಡಿದ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಶಾಸಕ ಲಾಲಾಜಿ ಆರ್.ಮೆಂಡನ್ ಸಲಹೆ ನೀಡಿದರು.

ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು.ಜಿಪಂ ಸದಸ್ಯರಾದ ಶಶಿಕಾಂತ ಪಡುಬಿದ್ರಿ,ಗೀತಾಂಜಲಿ ಸುವರ್ಣ,ತಾಪಂ ಸದಸ್ಯ ಕೇಶವ ಮೊಯ್ಲಿ,ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್,ಸುಪ್ರಸಾದ್ ಶೆಟ್ಟಿ ಬೈಕಾಡಿ,ರಮಾಕಾಂತ ದೇವಾಡಿಗ,ಪಡುಬಿದ್ರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಉಪಸ್ಥಿತರಿದ್ದರು.