ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಟ್ಟದ ಸಮುದ್ರ ತಟ ಚಾರಣ ಶಿಬಿರ ಸಮಾರೋಪ

ಮೂಲ್ಕಿ: ಶೈಕ್ಷಣಿಕ ಅವಧಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಭೌಗೋಳಿಕ ಹಾಗೂ ಸಾಮಾಜಿಕ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರೆಯುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಂಡಲ್ಲಿ ಜೀವನದ ಯಶಸ್ಸು ಕಾಣಲು ಸಾಧ್ಯ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಮೂಲ್ಕಿಯ ಬಪ್ಪನಾಡು ಶ್ರಿ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣ ಸಭಾಗೃಹದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ದ.ಕ.ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಜರಗಿದ ರಾಜ್ಯ ಮಟ್ಟದ ರೇಂಜರ್ಸ್ ಸಮುದ್ರ ತಟ ಚಾರಣ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗೈಡ್ಸ್‍ನ ರಾಜ್ಯ ಆಯುಕ್ತೆ ಗೀತಾ ನಟರಾಜ್‍ರವರು ದಿಕ್ಸೂಚಿ ಭಾಷಣಗೈದರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರುರವರು ವಹಿಸಿದ್ದು,ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ,ಮೂಲ್ಕಿ ಬಪ್ಪನಾಡು ದೇವಳದ ಆಡಳಿತ ಹಾಗೂ ಅನುವಂಶಿಕ ಮೊಕ್ತೇಸರ ಎನ್.ಎಸ್.ಮನೋಹರ್ ಶೆಟ್ಟಿ,ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು,ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಮುಖ್ಯ ಆಯುಕ್ತ ಡಾ ಎನ್.ಜಿ.ಮೋಹನ್,ಸ್ಕೌಟ್ಸ್ ನ ಜಿಲ್ಲಾ ಆಯುಕ್ತ ಡಾ.ರಾಮಶೇಷ ಶೆಟ್ಟಿ,ಜಿಲ್ಲಾ ಕಾರ್ಯದರ್ಶಿ ಎಂ.ಜೆ.ಕಜೆ,ಕೋಶಾಧಿಕಾರಿ ವಾಸುದೇವ ಬೋಳೂರು,ಶಿಬಿರದ ನಾಯಕಿ ಶಶಿರೇಖಾ ಬೆಳಗಾಂ,ಎಸ್.ಎಸ್.ಕಾರಣಿಕ್,ಶ್ರೀಕಾಂತ್ ಚಿಪ್ಲೂಂಕರ್,ಜಂಟಿ ಕಾರ್ಯದರ್ಶಿ ಜಯಂತಿ ಸೋನ್ಸ್,ಜಿಲ್ಲಾ ಸಹಾಯಕ ಕಾರ್ಯದರ್ಶಿ ಶಾಂತರಾಮ ಪ್ರಭು,ಸಂಘಟಕ ಭರತ್ ರಾಜ್,ಸ್ಥಳೀಯ ಮೂಲ್ಕಿ ಸಂಸ್ಥೆಯ ಉಪಾಧ್ಯಕ್ಷರಾದ ಯೋಗೀಶ್ ಕೋಟ್ಯಾನ್,ಸರೋಜಿನಿ ಸುವರ್ಣ,ದೇವಪ್ರಸಾದ್ ಪುನರೂರು ಮತ್ತಿತರಿದ್ದರು.

ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತ ಹಾಗೂ ಪತ್ರಕರ್ತ ಸರ್ವೋತ್ತಮ ಅಂಚನ್ ಸ್ವಾಗತಿಸಿದರು.ಜಯಂತಿ ಸೋನ್ಸ್ ವಂದಿಸಿದರು.ಗೀತಾರವರು ಕಾರ್ಯಕ್ರಮ ನಿರ್ವಹಿಸಿದರು.