ಭಾರತೀಯ ತ್ಯಾಜ್ಯ ವಿಲೇವಾರಿಯಲ್ಲಿ ವಿದೇಶೀಯರ ಮುತುವರ್ಜಿ

ಸಮುದ್ರ ಜಲಚರಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಅತ್ಯಂತ ಅಪಾಯಕಾರಿ
ಭಾರತೀಯ ತ್ಯಾಜ್ಯ ವಿಲೇವಾರಿಯಲ್ಲಿ ವಿದೇಶೀಯರ ಮುತುವರ್ಜಿ

— ಎಚ್ಕೆ ಹೆಜ್ಮಾಡಿ,ಮೂಲ್ಕಿ

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಅತ್ಯಂತ ಕಠಿಣವಾಗ ಪರಿಣಮಿಸುತ್ತಿದ್ದು, ವಿದೇಶೀ ಪ್ರವಾಸಿಗರು ಈ ಬಗ್ಗೆ ಭಾರತೀಯರನ್ನು ಎಚ್ಚರಿಸಿವ ಕಾರ್ಯವನ್ನು ಪದೇ ಪದೇ ಮಾಡುತ್ತಿದ್ದಾರೆ.

ಮೂಲ್ಕಿ ಸರ್ಫಿಂಗ್ ಸ್ವಾಮಿ ಫೌಂಡೇಶನ್‍ಗೆ ಆಗಮಿಸುವ ವಿದೇಶಿಗರು ಸ್ವಚ್ಛ ಬಾರತ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಭಾರತೀಯರನ್ನು ಎಚ್ಚರಿಸುತ್ತಿದ್ದಾರೆ.

ಭಾನುವಾರ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮೂಲ್ಕಿ ಅಳಿವೆ ಬಾಗಿಲಿನಲ್ಲಿ ಬೃಹತ್ ಪ್ರಮಾಣದಲ್ಲಿ ಶೇಖರಣೆಗೊಂಡ ವಿಷಕಾರಿ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮದಲ್ಲಿ ವಿದೇಶೀಯರೊಬ್ಬರು ಸ್ವಯಂ ಪ್ರೇರಣೆಯಿಂದ ತಾವೇ ಮುಂದೆ ನಿಂತು ಪ್ಲಾಸ್ಟಿಕ್, ರಬ್ಬರ್ ಮತ್ತು ಗ್ಲಾಸ್ ಬಾಟಲಿಗಳನ್ನು ಅತೀ ಹೆಚ್ಚು ಹೆಕ್ಕುವ ಮೂಲಕ ಸ್ಥಳೀಯರ ಗಮನ ಸೆಳೆದರು.

ಮೂಲತಃ ಆಸ್ಟ್ರೀಯಾ ದೇಶದ ಪ್ರಜೆ, ಪ್ರಸ್ತುತ ಮಣಿಪಾಲದಲ್ಲಿ ಇಂಟರ್ನ್‍ಶಿಪ್ ಪೂರೈಸುತ್ತಿರುವ ಸ್ಟೀವ್ ಎಂಬವರು ಇತರರು ಆಗಮಿಸುವ ಮುನ್ನವೇ ಗೋಣಿ ಚೀಲ ಹಿಡಿದು ಅತೀ ಹೆಚ್ಚು ತ್ಯಾಜ್ಯಗಳನ್ನು ಸಂಗ್ರಹಿಸಿದರು.

ದೇಶ ವಿದೇಶಗಳಲ್ಲಿ ಸರ್ಫಿಂಗ್ ಶಾಖೆಗಳನ್ನು ಹೊಂದಿರುವ ಮಂತ್ರ ಸರ್ಫ್ ಕ್ಲಬ್‍ಗೆ ನಿತ್ಯ ಹಲವಾರು ವಿದೇಶಿಗರು ಆಗಮಿಸುತ್ತಾರೆ. ಬೇರೆಡೆ ಹೋಲಿಸಿದರೆ ಅತ್ಯಂತ ಶುಭ್ರ ಸಮುದ್ರ ಕಾಣಸಿಗುವುದು ಇದೇ ಪ್ರದೇಶದಲ್ಲಿ. ಹಾಗಾಗಿ ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್‍ಗೆ ಬೇರೆಡೆಗಿಂತ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಕ್ರಿಕೆಟ್ ಮತ್ತು ಸಿನೆಮಾ ತಾರೆಯರಿಗೂ ಇದು ಅಚ್ಚುಮೆಚ್ಚಿನ ತಾಣ. ಆದರೆ ಇಲ್ಲಿ ಮಳೆಗಾಲದ ಬಳಿಕ ಕಂಡು ಕೇಳರಿಯದಷ್ಟು ವಿಷಕಾರಿ ತ್ಯಾಜ್ಯಗಳು ಹೊಳೆಗಳಿಂದ ಸಾಗಿ ಬರುತ್ತದೆ. ಮಂತ್ರ ಸರ್ಫ್ ಕ್ಲಬ್ ವರ್ಷಪೂರ್ತಿ ಈ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಿರಂತರ ಮಾಡುತ್ತಿದೆ. ಇಂತಹ ಸಂದರ್ಭಗಳಲ್ಲಿ ವಿದೇಶೀ ಪ್ರವಾಸಿಗರು ತಾವೇ ಮುಂದೆ ನಿಂತು ತ್ಯಾಜ್ಯ ವಿಲೇವಾರಿಗೆ ಸಹಕರಿಸುತ್ತಾರೆ.

30-40 ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಅತೀ ಹೆಚ್ಚು ಪ್ರಮಾಣದಲ್ಲಿ ಕಂಡು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿ ಸರಕಾರಗಳು ಬಂದಷ್ಟೇ ವೇಗದಲ್ಲಿ ಪ್ಲಾಸ್ಟಿಕ್ ವಿಲೇವಾರಿಗೆ ಮನ ಮಾಡಿ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತ್ತು. ಅಲ್ಲಿನ ವಿರಳ ಜನಸಂಖ್ಯೆಯಿಂದಾಗಿ ಸರಕಾರದ ಕ್ರಮ ಪರಿಣಾಮಕಾರಿಯಾಗಿ ಬಳಸಲಾಗಿತ್ತು.
ಕಳೆದ 20-30 ವರ್ಷಗಳಿಂದ ಭಾರತಕ್ಕೆ ಕಾಲಿಟ್ಟ ಪ್ಲಾಸ್ಟಿಕ್ ಇಂದು ಜನಜೀವನದ ಪ್ರಮುಖ ಸಾಧನವಾಗಿ ಬಳಸಲ್ಪಟ್ಟಿದೆ. ಪ್ರಸ್ತುತ ಅದನ್ನು ಬಿಟ್ಟುಬಿಡಲು ಭಾರತೀಯರು ಸಿದ್ಧರಿಲ್ಲ. ಜನನಿಬಿಡ ಭಾರತದಲ್ಲಿ ಜನರನ್ನು ಮನವೊಲಿಸಿ ಪ್ಲಾಸ್ಟಿಕ್ ಬಳಕೆಯನ್ನು ನಿಧಾನವಾಗಿ ಕಡಿಮೆ ಮಾಡುವುದೇ ಸೂಕ್ತ ಪರಿಹಾರ ಎಂದು ಸ್ಟೀವ್ ಹೇಳುತ್ತಾರೆ.

ಸಮುದ್ರ ಜೀವಿಗಳಲ್ಲಿ ಡಾಲ್ಫಿನ್, ಶಾರ್ಕ್, ಆಮೆ, ವೇಲ್‍ಗಳಂತಹ ಜಲಚರ ಜೀವಿಗಳು ಸಮುದ್ರದಲ್ಲಿ ಕಂಡುಬರುವ ಪ್ಲಾಸ್ಟಿಕ್‍ಗಳನ್ನು ನೇರ ಹೊಟ್ಟೆಯೊಳಕ್ಕೆ ಸೇರಿಸುವುದರಿಂದ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವುದು ಖಚಿತ. ಹಾಗಾಗಿ ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಕ್ಷಣ ತೆಗೆಯಬೇಕು. ಸಮುದ್ರ ಬದಿಗಳಲ್ಲಿ ಪ್ಲಾಸ್ಟಿಕ್ ಹೆಚ್ಚು ಇದ್ದಷ್ಟು ಜಲಚರಗಳಿಗೆ ಗಂಭೀರ ಹಾನಿಯುಂಟಾಗಲಿದೆ ಎಂದವರು ಹೇಳುತ್ತಾರೆ.

ಅನಿಸಿಕೆ
-ಇತ್ತೀಚಿನ ದಿನಗಳಲ್ಲಿ ಮತ್ಸ್ಯ ಸಂಪತ್ತಿಗೆ ಪ್ಲಾಸ್ಟಿಕ್‍ನಿಂದ ಅತೀ ಹೆಚ್ಚು ಹಾನಿ ಸಂಭವಿಸಿದೆ. ಪ್ರಯೋಗಾಲದಲ್ಲಿ ಪರಿಶೀಲಿಸುವ ಸಂದರ್ಭ ಹೆಚ್ಚಿನ ಮೀನುಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಂಶ ಕಂಡುಬರುತ್ತಿದ್ದು ಇದು ಗಂಭೀರ ಸಮಸ್ಯೆಯಾಗಿದೆ. ಮೀನುಗಳ ಮೊಟ್ಟೆಗಳಲ್ಲೂ ಮೈಕ್ರೋ ಪ್ಲಾಸ್ಟಿಕ್ ಅಂಶ ಕಂಡುಬರುತ್ತಿದೆ. ಪ್ಲಾಸ್ಟಿಕ್‍ಗಳು ಸಮುದ್ರ ಸೇರಿದ ಬಳಿಕ ಮೈಕ್ರೋ ಪ್ಲಾಸ್ಟಿಕ್‍ಗಳಾಗಿ ಬದಲಾದ ಬಳಿಕ ಮೀನುಗಳು ಅವುಗಳನ್ನು ಭಕ್ಷಿಸುತ್ತಿದೆ. ಹೆಚ್ಚಾಗಿ ಭೂಪ್ರದೇಶಗಳಿಂದಲೇ ಸಮುದ್ರಕ್ಕೆ ಪ್ಲಾಸ್ಟಿಕ್ ಬರುತ್ತಿದೆ. ಇದರಿಂದ ಮೀನುಗಳ ಬೆಳವಣಿಗೆಗೆ ಮತ್ತು ಮತ್ಸ್ಯ ಸಮೃದ್ಧಿಗೆ ಅಪಾಯಕಾರಿಯಾಗಿದೆ. ಹೊಳೆಗಳ ಮೀನುಗಳಲ್ಲೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಂಶ ಕಂಡುಬಂದಿದೆ. ಸಾಗರೋಪಾದಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಯ ಅಗತ್ಯವಿದೆ.
-ಡಾ.ಪ್ರತಿಭಾ ರೋಹಿತ್, ಮುಖ್ಯ ವಿಜ್ಞಾನಿ, ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರ, ಮಂಗಳೂರು.

  • ಮಂತ್ರ ಸರ್ಫ್ ಕ್ಲಬ್‍ಗೆ ಆಗಮಿಸುವ ವಿದೇಶಿ ಪ್ರವಾಸಿಗರು ತಾವೇ ಮುಂದೆ ನಿಂತು ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ಮಂತ್ರ ಸರ್ಫ್ ಕ್ಲಬ್ ತಿಂಗಳಿಗೊಮ್ಮೆ ಬೀಚ್ ಕ್ಲೀನ್ ಅಭಿಯಾನ ನಡೆಸುತ್ತಿದ್ದು, ಆ ಸಂದರ್ಭ ಹೆಚ್ಚು ವಿದೇಶಿಯರು ಅಭಿಯಾನದಲ್ಲಿ ಮುಂಚೂಣಿಯಲ್ಲಿ ನಿಂತು ಸಹಕರಿಸುತ್ತಾರೆ. ಹಂಪಿಯಲ್ಲಿ ವಿದೇಶಿಯರೇ ತ್ಯಾಜ್ಯ ವಿ¯