ಭಾರತದ ಸಂಸ್ಕಾರ-ಸಂಸ್ಕøತಿ ವಿಶ್ವಕ್ಕೇ ಮಾದರಿ- ಡಿ ಕೆ ಶೆಟ್ಟಿ

ಮೂಲ್ಕಿ: ವಸುದೈವ ಕುಟುಂಬಕಂ ಎಂಬ ನಾಣ್ಣುಡಿಗೆ ಪೂರಕವಾಗಿ ಇಂದು ಭಾರತವು ತನ್ನ ಭವ್ಯ ಸನಾತನ ಸಂಸ್ಕಾರ ಮತು ಸಂಸ್ಕøತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಮೂಲಕ ವಿಶ್ವಕ್ಕೇ ಮಾದರಿ ದೇಶವಾಗಿದೆ ಎಂದು ಮುಂಬೈ ಡಿಕೆ ಹಾಸ್ಪಿಟಾಲಿಟಿ ಪ್ರೈ ಲಿ.ನ ಆಡಳಿತ ನಿರ್ದೇಶಕ ಡಿ.ಕೆ.ಶೆಟ್ಟಿ ಹೇಳಿದರು.

ಮೂಲ್ಕಿ ಬಪ್ಪನಾಡು ದೇವಳದ ಶ್ರೀ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಮೂಲ್ಕಿಯ ಮಯೂರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ 3ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮತ್ತೋರ್ವ ಮುಖ್ಯ ಅತಿಥಿ ಮುಂಬೈ ಪ್ರಸಿದ್ಧ ಲೆಕ್ಕ ಪರಿಶೋಧಕರಾದ ಸಿಎ ಸದಾಶಿವ ಎಸ್.ಶೆಟ್ಟಿ ಮಾತನಾಡಿ, ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿ ಜೀವನದ ಬಳಿಕ ಕಲಿತ ಶಾಲೆಯ ಆಗುಹೋಗುಗಳ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದವರು ಹೇಳಿದರು.

ಸನ್ಮಾನ: ಇದೇ ಸಂದರ್ಭ ಮಯೂರಿ ಫೌಂಡೇಶನ್ ಪ್ರಾಯೋಜಿತ ಮಾನಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗುವಂತೆ ಶ್ರಮಿಸಿದ್ದಲ್ಲದೆ ಈ ಬಾರಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಶಾಲಾ ಮುಖ್ಯ ಶಿಕ್ಷಕಿ ಶೋಭಾ ಯು.ರವರನ್ನು ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ: ಇದೇ ಸಂದರ್ಭ ಮೂಲ್ಕಿ ಹೋಬಳಿಯ ವಿವಿಧ ಶಾಲೆಗಳ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸುಮಾರು 31 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ವಿದ್ಯಾರ್ಥಿ ವೇತನ ವಿತರಣೆ: ಮೂಲ್ಕಿ ಹೋಬಳಿ ವ್ಯಾಪ್ತಿಯ ಸುಮಾರು 175 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಯೂರು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಯ ಕೆ.ಶೆಟ್ಟಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗೈಯ್ಯುವ ಉದ್ದೇಶದೊಂದಿಗೆ ಮಯೂರಿ ಫೌಂಡೇಶನ್ ಸ್ಥಾಪನೆಯಾಗಿದ್ದು, ಈಗಾಗಲೇ ಜನಮನದಲ್ಲಿ ನೆಲೆಸಿದೆ. ಮುಂದೆಯೂ ಸಂಸ್ಥೆಯು ಇದೇ ಹಿನ್ನೆಲೆಯಲ್ಲಿ ಸಾಮಾಜಿಕ ಸೇವೆಗೆ ಬದ್ಧವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ಬಪ್ಪನಾಡು ದೇವಳದ ಬ್ರಹ್ಮಕಲಶ ಮತ್ತು ಅಭಿವೃದ್ಧಿ ಸಮಿತಿಯ ಕಾಯಾಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಡಾ.ಅಚ್ಯುತ ಎಮ್.ಕುಡ್ವ, ಫೌಂಡೇಶನ್ ಟ್ರಸ್ಟಿಗಳಾದ ದೇವಪ್ರಸಾದ್ ಪುನರೂರು, ಪ್ರಭೋದ್ ಕುಡ್ವ, ನವೀನ್ ಶೆಟ್ಟಿ, ಬಬಿತಾ ಶೆಟ್ಟಿ, ರಾಜೇಶ್ ಶೆಟ್ಟಿ ಮತ್ತು ಜೀವನ್ ಕೆ.ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಜಯ ಕೆ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು. ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.