ಭಾನುವಾರ ನಡೆದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ

ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಉದ್ಘಾಟಿಸಿದರು.ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ಪಿಎಚ್‍ಸಿ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್,ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಆಚಾರ್ಯ,ಕಾರ್ಯದರ್ಶಿ ಸುಧಾಕರ್ ಕೆ.,ರೋಟರಿ ಪ್ರಮುಖರಾದ ಕೃಷ್ಣ ಬಂಗೇರ,ಮಾಧವ ಸುವರ್ಣ,ರಮೀಝ್ ಹುಸೈನ್,ಹೇಮಚಂದ್ರ,ರಿಯಾಝ್ ಮುದರಂಗಡಿ,ಬಿ.ಎಸ್.ಆಚಾರ್ಯ ಉಪಸ್ಥಿತರಿದ್ದರು.