ಭಕ್ತಿ,ಶೃದ್ಧೆ ಮತ್ತು ಪ್ರಾಮಾಣಿಕ ಸೇವೆಗೆ ತಕ್ಕ ಪ್ರತಿಫಲ-ಓಂದಾಸ್ ಕಣ್ಣಂಗಾರ್

ಪಡುಬಿದ್ರಿ: ನಾವು ಭಕ್ತಿ,ಶೃದ್ಧೆ ಮತ್ತು ಪ್ರಾಮಾಣಿಕವಾಗಿ ಮಾಡುವ ಸೇವೆಗೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಮುಂಬೈ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಹೆಜಮಾಡಿ ಶ್ರೀ ವೀರ ಮಾರುತಿ ದೇವಳದ ಮುಂಬೈ ಸಮಿತಿಯ ಅಧ್ಯಕ್ಷ ಓಂದಾಸ್ ಕಣ್ಣಂಗಾರ್ ಹೇಳಿದರು.

ಹೆಜಮಾಡಿ ಶ್ರೀ ವೀರ ಮಾರುತಿ ದೇವಳದ ನಾಲ್ಕನೇ ವರ್ಷದ ವರ್ಧಂತ್ಯುತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಸಿ ಓಂದಾಸ್ ಮಾತನಾಡಿದರು.

ಇಲ್ಲಿ ಮುಗ್ದ ಭಕ್ತರ ಪ್ರತೀಕವಾಗಿ ದೇವಳ ಬೆಳೆದು ಬಂದಿದೆ.ಈ ಹಿಂದೆ ನದೀ ಕೊರೆತ ಸಂದರ್ಭ ಸಮುದ್ರ ಪಾಲಾಗಲಿದ್ದ ಪ್ರದೇಶವನ್ನು ಶ್ರೀ ವೀರ ಮಾರುತಿಯೇ ಉಳಿಸಿದ ಎಂಬ ಬಲವಾದ ನಂಬಿಕೆ ನಮ್ಮದು ಎಂದವರು ಅಭಿಪ್ರಾಯಿಸಿದರು.

ಸನ್ಮಾನ: ಈ ಸಂದರ್ಭ ಹೆಜಮಾಡಿಯ ಹಿರಿಯ ಮೀನುಗಾರ ಮುಖಂಡ ವಾಸು ಕೆ.ಕೋಟ್ಯಾನ್, ಫಿಲಾಸಫಿ ಆಫ್ ಡಾಕ್ಟರೇಟ್ ಪಡದ ಡಾ.ಸುಪ್ರಭಾ ಹರೀಶ್ ಮತ್ತು ಡಾ.ಸದಾನಂದ ವಾಮನ ಸುವರ್ಣ, ದೇಹದಾಢ್ರ್ಯ ಚಾಂಪಿಯನ್ ಹರ್ಷಲ್ ಕುಮಾರ್, ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಚೈತ್ರಾ ಎ.ಸಾಲ್ಯಾನ್ ಮತ್ತು ರಾಜ್ಯ ಯುವ ಪ್ರಶಸ್ತಿ ವಿಜೇತ ಶರಣ್ ಕುಮಾರ್ ಮಟ್ಟುರವರನ್ನು ಶ್ರೀ ದೇವಳದ ವತಿಯಿಂದ ಸನ್ಮಾನಿಸಲಾಯಿತು.

ಶ್ರೀ ದೇವಳದ ಅರ್ಚಕರಾದ ಪುಷ್ಪರಾಜ್, ವಿಘ್ನೇಶ್, ನಿರಂಜನ್ ಮತ್ತು ನವೀನ್ ಕುಮಾರ್, ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ದೀಕ್ಷಾ ಡಿ.ಸನಿಲ್ ಮತ್ತು ದೀಪ್ತಿಯವರನ್ನು ಗೌರವಿಸಲಾಯಿತು.

ಮುಂಬೈ ರಾಮರಾಜ್ಯ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ರಾಜ್‍ಕುಮಾರ್ ಎಸ್.ಕಾರ್ನಾಡ್, ಮುಂಬೈ ಉದ್ಯಮಿ ಅನಿಲ್ ಸಾಲ್ಯಾನ್, ಎರ್ಮಾಳು ಹೋಟೆಲ್ ಉದ್ಯಮಿ ಅಶೋಕ್ ಸಾಲ್ಯಾನ್, ಶ್ರೀ ವೀರ ಮಾರುತಿ ದೇವಳದ ಅಧ್ಯಕ್ಷ ವಿಜಯ ಎಸ್.ಕುಂದರ್, ಆಂಜನೇಯ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ರತನ್ ಸಾಲ್ಯಾನ್, ವ್ಯಾಯಾಮ ಶಾಲಾ ಶಿಕ್ಷಕ ರಮೇಶ್ ಪುತ್ರನ್ ಮುಖ್ಯ ಅತಿಥಿಗಳಾಗಿದ್ದರು.

ಶರಣ್ ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು. ಕೀರ್ತನ್ ಸಾಲ್ಯಾನ್ ಸ್ವಾಗತಿಸಿ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ 4ನೇ ವರ್ಧಂತ್ಯುತ್ಸವದ ಅಂಗವಾಗಿ ವಿಶೇಷ ಪೂಜೆ ನೆರವೇರಿತು.ಸಭಾ ಕಾರ್ಯಕ್ರಮದ ಬಳಿಕ ಆಂಜನೇಯ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಕಿನ್ನಿಗೋಲಿ ವಿಜಯಾ ಕಲಾವಿದರಿಂದ ತುಳು ನಾಟಕ ಕಂಡೊಡೊರಿ ದಂಡ್‍ಡೊರಿ ನಡೆಯಿತು.