ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದ ಅಭ್ಯುದಯದ ಹರಿಕಾರ-ಲಾಲಾಜಿ ಆರ್.ಮೆಂಡನ್

ಮೂಲಕ ಸಮಾಜದಲ್ಲಿ ಹಿಂದುಳಿದವರ ಏಳಿಗೆಗಾಗಿ ಶ್ರಮಿಸಿದವರು ಅವರಾಗಿದ್ದರು. ಸ್ವಯಂ ದೇಗುಲದ ನಿರ್ಮಾಣ ಮಾಡಿ ದೇಗುಲಗಳಿಗೆ ಪ್ರವೇಶ ಇಲ್ಲದವರ ಸಹಿತ ಎಲ್ಲರಿಗೂ ಮುಕ್ತ ಪ್ರವೇಶದ ಅವಕಾಶ ಮಾಡಿಕೊಟ್ಟವರು ಅವರಾಗಿದ್ದರು. ಜೀವನದ ಸಂಸ್ಕಾರ, ಸಂಸ್ಕøತಿಗಳ ಹರಿಕಾರರಾಗಿ ಸಮಾಜದಲ್ಲಿ ಅವತಾರ ಪುರುಷರೆನಿಸಿ ಜಾತಿ ಮತ ಬೇಧವಿಲ್ಲದೇ ಎಲ್ಲರ ಅಭ್ಯುದಯಕ್ಕೆ ಕಾರಣವೆನಿಸಿದವರೂ ಅವರಾಗಿದ್ದರು ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದರು.

ಅವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಆಚರಿಸಲ್ಪಟ್ಟ ಶ್ರೀ ನಾರಾಯಣ ಗುರುಗಳ 164ನೇ ಜನ್ಮ ದಿನೋತ್ಸವದ ಸಂದರ್ಭದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸನ್ಮಾನ: ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಪಡುಬಿದ್ರಿಯ ಬಿಲ್ಲವ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು ಎಲ್ಲೆಡೆಗಳ ಶ್ರೀ ನಾರಾಯಣ ಗುರುಮಂದಿರಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಡಿ ತಾನು ದತ್ತಿ ಸಚಿವನಾಗಿದ್ದಾಲೇ ಸೇರಿಸಿಕೊಳ್ಳಲಾಗಿದೆ ಎಂದರು.
ಸಾಧಕ ಸಾಧು ಪೂಜಾರಿ ಹಾಗೂ

ಶ್ರಾವ್ಯಾ ಗುರುರಾಜ್ ಅವರನ್ನು ಬಿಲ್ಲವರ ಸಮಾಜ ಸೇವಾ ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಕಾಪು ಬಿಲ್ಲವರ ಸಹಾಯಕ ಸಂಘದ ಮಾಜಿ ಅಧ್ಯಕ್ಷ ಮಾಧವ ಆರ್. ಪಾಲನ್ ಮಾತನಾಡಿ ಕೇರಳದಲ್ಲಿ ಇಂದು ಹಿಂದೂಗಳ ಮತ್ತು ಹಿಂದುತ್ವದ ಅಸ್ತಿತ್ವಕ್ಕೆ ಬಹುತೇಕ ಕಾರಣಕರ್ತರು ಬ್ರಹ್ಮಶ್ರೀ ನಾರಾಯಣ ಗುರುಗಳಾಗಿದ್ದಾರೆ. ಅವರು ಮಹಾನ್ ಸಾಧಕರಾಗಿದ್ದು ಬಿಲ್ಲವರು ಶ್ರೀ ಗುರುಗಳನ್ನು ಮರೆಯುವಂತಿಲ್ಲ. ಬಿಲ್ಲವರ ಇನ್ನೂ ಮುಂದೆ ಬರಬೇಕಿದ್ದು ರಾಜಕೀಯವಾಗಿಯೂ ನಾವು ಬಲಯುತರಾಗಬೇಕಿದೆ ಎಂದರು. ಜಿತ್ರಾಕ್ಷಿ ಕುಟ್ಟಿ ಕೋಟ್ಯಾನ್ ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯಲ್ಲಿ ಸುಮಾರು 50000 ರೂ. ಗಳನ್ನು ಪ್ರೌಢ, ಪಿಯುಸಿ ಹಾಗೂ ಇತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನಾಗಿ ವಿತರಿಸಲಾಯಿತು.  ಸಭಾಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ವಹಿಸಿದ್ದು ಮಾತನಾಡಿದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ವಾಸು ಪಿ. ಸಾಲ್ಯಾನ್, ಉಪಾಧ್ಯಕ್ಷ ವೈ. ವಿಶ್ವನಾಥ್, ಕಾರ್ಯದರ್ಶಿ ಲಕ್ಷ್ಮಣ ಅಮೀನ್, ಕೋಶಾಧಿಕಾರಿ ಅಶೋಕ್ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ಗೋಪಾಲ ಸುವರ್ಣ, ಸೇವಾದಳದ ಸುಜಿತ್ ಕುಮಾರ್, ಶ್ರೀ ನಾರಾಯಣ ಗುರುಮೂರ್ತಿ ಮೆರವಣಿಗೆಯ ಹೊಣೆ ಹೊತ್ತಿದ್ದ ಕುಟ್ಟಿ ಕೋಟ್ಯಾನ್ ಮತ್ತಿತರರು ವೇದಿಕೆಯಲ್ಲಿದ್ದರು. ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ನಿಶ್ಮಿತಾ ಪಿ. ಎಚ್. ಕಾರ್ಯಕ್ರಮ ನಿರ್ವಹಿಸಿದರು.