ಬ್ಯಾರಿ ಭಾಷೆ ಉಳಿದರೆ ಮಾತ್ರ ಜನಾಂಗ ಉಳಿಯಲು ಸಾಧ್ಯ-ಉಮ್ಮರ್ ಫಾರೂಕ್

ಪಡುಬಿದ್ರಿ: ಅಭಿವೃದ್ಧಿ ಹೆಸರಲ್ಲಿ ಆಂಗ್ಲ ಭಾಷಾ ಕಲಿಕೆ ಅಗತ್ಯವಾದರೂ ಮಾತೃ ಭಾಷೆಯನ್ನು ಕಡೆಗಣಿಸಬಾರದು.ಬ್ಯಾರಿ ಭಾಷೆ ಉಳಿದರೆ ಮಾತ್ರ ಜನಾಂಗ ಉಳಿಯಲು ಸಾಧ್ಯ ಎಂಬುದನ್ನು ಮನಗಾಣಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಎಸ್.ಪಿ.ಉಮ್ಮರ್ ಫಾರೂಕ್ ಹೇಳಿದರು.

ಅವರು ಪಡುಬಿದ್ರಿಯ ಬೇಂಗ್ರೆ ರಸ್ತೆಯಲ್ಲಿರುವ ಅಕ್ಯೂರೆಟ್ ಅಪಾರೆಲ್ಸ್‍ನಲ್ಲಿ ಬುಧವಾರ ಬ್ಯಾರಿ ಭಾಷಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಪ್ರಾದೇಶಿಕ ಭಾಷೆಗಳ ಬಗ್ಗೆ ಜನರು ತಾತ್ಸಾರ ಮನೋಭಾವ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಪಾಶ್ಚಾತ್ಯ ಸಂಸ್ಕøತಿಯೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿ ಪೋಷಕರು ಮಾತೃ ಭಾಷೆಯ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ. ಇಂಗ್ಲೀಷ್ ಭಾಷೆ ಇಂದಿನ ಅನಿವಾರ್ಯತೆ ಆದರೂ ಮಾತೃ ಭಾಷೆಯನ್ನು ಮರೆಯಬೇಡಿ ಎಂದು ಅವರು ಕರೆ ನೀಡಿದರು.

ಪಡುಬಿದ್ರಿ ರೋಟರಿ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷ ರಮೀಝ್ ಹುಸೈನ್, ಬ್ಯಾರಿ ಕಲಾವಿದ ಶೌಕತ್ ಪಡುಬಿದ್ರಿ ಉಪಸ್ಥಿತರಿದ್ದರು. ಜೆಡಿಎಸ್ ಮುಖಂಡ ಇಸ್ಮಾಯಿಲ್ ಫಲಿಮಾರು ಸ್ವಾಗತಿಸಿದರು. ಅಬ್ದುಲ್ ರಝಾಕ್ ಕನ್ನಂಗಾರ್ ವಂದಿಸಿದರು. ಪತ್ರಕರ್ತ ಅಬ್ದುಲ್ ಹಮೀದ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು.