ಬೆಳಪು : ಚೈತನ್ಯ ವಿಮಾ ಯೋಜನೆ ಸಹಾಯಧನ ವಿತರಣೆ

ಪಡುಬಿದ್ರಿ: ಬೆಳಪು ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಎಲ್ಲೂರು, ಬಡಾ ಉಚ್ಚಿಲ ಮತ್ತು ಬೆಳಪು ಗ್ರಾಮದ ನವೋದಯ ಸ್ವಸಹಾಯ ಸಂಘದ ಅನಾರೋಗ್ಯ ಪೀಡಿತರಿಗೆ, ಅಪಘಾತದಿಂದ ತೊಂದರೆಗೊಳಗಾದವರಿಗೆ ಮೃತಪಟ್ಟ ಸದಸ್ಯರಿಗೆ ವಿಶೇಷ ಸಹಾಯಧನವನ್ನು ಬೆಳಪು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪುರವರು ವಿತರಿಸಿದರು.

ಸುನೈನಾ ರೂ.4000, ವಿಜಯಲಕ್ಷ್ಮೀ ರೂ.5000, ಬೇಬಿ ಕರ್ಕಡ ರೂ.5000, ಮರಿಯಮ್ಮ ರೂ.3000, ಸೌಮ್ಯ ರೂ.4000, ನಿರಂಜನ ಶೆಟ್ಟಿ ರೂ. 5000, ರೇಖಾ ರೂ.6000, ಅಕ್ಷತಾ ರೂ.5000, ಫೌಝಿಯ ರೂ.4000 ಒಟ್ಟು 9 ಮಂದಿಗೆ ವಿತರಿಸಲಾಯಿತು. ನವೋದಯ ಸ್ವ ಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆ ಜೊತೆಗೆ ಕುಟುಂಬದ ಭದ್ರತೆಗೆ ನವೋದಯ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಡಾ. ದೇವಿಪ್ರಸಾದ್ ಶೆಟ್ಟಿಯವರು ನೀಡಿದರು.

ಬೆಳಪು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ, ವಿಶೇಷಾಧಿಕಾರಿ ರತ್ನಾಕರ ಸೋನ್ಸ್, ನವೋದಯ ಸ್ವಸಹಾಯ ಸಂಘದ ಮೇಲ್ವಿಚಾರಕರಾದ ಹರಿನಾಥ, ಪ್ರೇರಕಿಯರಾದ ಕಾಂತಿ ಎಸ್. ಆಚಾರ್ಯ ಮತ್ತು ಮಮತಾ ಶೆಟ್ಟಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.