ಬೃಹತ್ ಹೊರೆಕಾಣಿಕೆ ಮೆರವಣಿಗೆ

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿನಡೆಯುತ್ತಿರುವ ಢಕ್ಕೆಬಲಿ ಸೇವೆಯ ಅಂಗವಾಗಿ ಪಡುಬಿದ್ರಿ ವಿಶ್ವ ಹಿಂದೂ ಪರಿಷತ್,ಪಡುಬಿದ್ರಿ ವಲಯ ಬಜರಂಗದಳ,ಪಡುಬಿದ್ರಿ ಬಸ್ ಏಜೆಂಟ್ ಮತ್ತು ಸಮಯ ಪಾಲಕ ಘಟಕ,ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಪಡುಬಿದ್ರಿ ಘಟಕಗಳ ವತಿಯಿಂದ ಗುರುವಾರ ಬೃಹತ್ ಹೊರೆಕಾಣಿಕೆ ಮೆರವಣಿಗೆ ಪಡುಬಿದ್ರಿ ಬಸ್ ನಿಲ್ದಾಣದಿಂದ ಬ್ರಹ್ಮಸ್ಥಾನಕ್ಕೆ ಸಾಗಿ ಬಂತು.ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಬಜರಂಗದಳ ಕಾಪು ಪ್ರಖಂಡ ಸಂಚಾಲಕ ರಾಜೇಶ್ ಕೋಟ್ಯಾನ್,ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ವಿಹಿಂಪ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ,ಬಜರಂಗದಳ ಸಂಚಾಲಕ ಅಜಿತ್ ಶೆಟ್ಟಿ,ಸಹಸಂಚಾಲಕ ಪ್ರಸಾದ್ ಅಂಚನ್,ಟೆಂಪೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಪಾದೆಬೆಟ್ಟು,ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಪಡುಬಿದ್ರಿ ಘಟಕ ಅಧ್ಯಕ್ಷ ರವಿ ಶೆಟ್ಟಿ,ಕಾರ್ಯದರ್ಶಿ ಕೌಸರ್,ಬಸ್ ಏಜೆಂಟ್ ಸಂಘದ ಅಧ್ಯಕ್ಷ ಅರವಿಂದ್ ಪಡುಬಿದ್ರಿ,ಉದ್ಯಮಿ ರಮೇಶ್ ಶೆಟ್ಟಿ,ಅರ್ಚಕ ರಾಘವೇಂದ್ರ ಭಟ್,ವಿಶು ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.