ಬಾಣಂತಿಯರಿಗೆ ಪೌಷ್ಠಿಕ ಆಹಾರ ಅತ್ಯಗತ್ಯ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಗ್ರೇಸಿ ಗೂಸ್ಟಾಲಿನ್

ಪಡುಬಿದ್ರಿ : ಬಾಣಂತಿಯರು ಅಗತ್ಯವಾಗಿ ಉತ್ತಮ ಅರೋಗ್ಯವರ್ಧಕವಾದ ಪೌಷ್ಟಿಕಾಹಾರವನ್ನು ಸೇವಿಸಿಬೇಕು. ಸದಾ ಕಾರ್ಯ ಚಟುವಟಿಕೆಯಿಂದ ಇದ್ದರೆ ಸುಲಭವಾದ ಹೆರಿಗೆ ಹಾಗೂ ಅರೋಗ್ಯ ಯಕ್ತ ಮಗುವನ್ನು ಪಡೆಯಲು ಸಾಧ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಗ್ರೇಸಿ ಗೂಸ್ಟಾಲಿನ್ ಹೇಳಿದರು.

ಪಡುಬಿದ್ರಿ ರೋಟರಿ ಕ್ಲಬ್, ಉಡುಪಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಉಡುಪಿ ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಇಲಾಖೆ ಹಾಗೂ ಉಡುಪಿ ಶಿಶು ಅಭಿವೃದ್ಧಿ ಯೋಜನೆ ಇದರ ಸಹಯೋಗದಲ್ಲಿ ಪಡುಬಿದ್ರಿ ಅಂಗನವಾಡಿ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕತಾ, ಮಾತೃ ಪೂರ್ಣ, ಮಾತೃ ವಂದನಾ, ಮಾತೃಶ್ರೀ ಯೋಜನೆಯ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ತನ್ಯಪಾನದ ಮಹತ್ವದ ಬಗ್ಗೆ ಪಡುಬಿದ್ರಿ ಅರೋಗ್ಯ ಕೇಂದ್ರ ಕಿರಿಯ ಅರೋಗ್ಯ ಸಹಾಯಕಿ ರೇವತಿಯವರು ಕೂಲಂಕುಶ ಮಾಹಿತಿ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷ ರಿಯಾಜ್ ಮುದರಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ವೀಣಾ ವಿವೇಕಾನಂದ, ವಲಯ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ, ಅಂಗನವಾಡಿ ಮೇಲ್ವಿಚಾರಕಿ ಶಕುಂತಳ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀವಾಣಿ, ಸುಧಾ, ವಸಂತಿ, ಸುಗುಣ, ಶ್ಯಾಮಲ ಮತಿತ್ತರು ಉಪಸ್ಥಿತರಿದ್ದರು.

ರಿಯಾಜ್ ಮುದರಂಗಡಿ ಸ್ವಾಗತಿಸಿದರು. ಸುಧಾಕರ್ ಕೆ ನಿರೂಪಿಸಿ ವಂದಿಸಿದರು.