ಬಹು ನಿರೀಕ್ಷಿತ ಬೇಂಗ್ರೆ ರಸ್ತೆ ಅಭಿವದ್ಧಿಗೆ ಗುದ್ದಲಿ ಪೂಜೆ

ಪಡುಬಿದ್ರಿ: ಬಹುವರ್ಷಗಳಿಂದ ಪಡುಬಿದ್ರಿ ಬೇಂಗ್ರೆ ನಿವಾಸಿಗಳು ಎದುರು ನೋಡುತ್ತಿದ್ದ ಬೇಂಗ್ರೆಯಿಂದ ಬೋರ್ಡ್ ಶಾಲಾ ಮೈದಾನದ ಸಮೀಪದ ಇಕ್ಬಾಲ್ ಅಂಗಡಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಾಪು ಶಾಸಕ ಲಾಲಾಜಿ ಮೆಂಡನ್ ನ. 10ರಂದು ಗುದ್ದಲಿಪೂಜೆಯನ್ನು ನೆರವೇರಿಸಿದರು.

ಸದ್ಯ ಶಾಸಕರ 5 ಲಕ್ಷ ರೂ., ಜಿ. ಪಂ.ಸದಸ್ಯ ಶಶಿಕಾಂತ್ ಪಡುಬಿದ್ರಿ ಅವರ 5 ಲಕ್ಷ ರೂ., ತಾ. ಪಂ. ಅಧ್ಯಕ್ಷೆ ನೀತಾ ಗುರುರಾಜ್ ಅವರ 1.29 ಲಕ್ಷ ರೂ., ಗ್ರಾ. ಪಂ. ಉಪಾಧ್ಯಕ್ಷ ವೈ. ಸುಕುಮಾರ್, ಗ್ರಾ. ಪಂ. ಸದಸ್ಯರಾದ ಜಯ ಬೇಂಗ್ರೆ ಹಾಗೂ ಸಾಧನಾ ಅವರ ಒಟ್ಟು 4 ಲಕ್ಷ ರೂ. ಅನುದಾನಗಳನ್ನು ಬಳಸಿಕೊಂಡು 300 ಮೀಟರ್‍ಗಳ ಕಾಂಕ್ರೀಟೀಕರಣವನ್ನು ಮೊದಲಿಗೆ ಪೂರೈಸಿಕೊಳ್ಳಲಾಗುತ್ತದೆ. ಅಲ್ಲಿಂದ ಇಕ್ಬಾಲ್ ಅಂಗಡಿವರೆಗೆ ಮುಂದುವರಿಸಿಕೊಳ್ಳಲು ಅನುದಾನವನ್ನು ಜೋಡಿಸಿಕೊಳ್ಳಲಾಗುತ್ತದೆ ಎಂದು ಶಾಸಕ ಲಾಲಾಜಿ ಮೆಂಡನ್ ಈ ಸಂದರ್ಭದಲ್ಲಿ ಹೇಳಿದರು.

ಉಚ್ಚಿಲ ಗೋವಿಂದ ಭಟ್ ಗುದ್ದಲಿ ಪೂಜೆಯ ಧಾರ್ಮಿಕ ವಿದಿ ವಿಧಾನಗಳನ್ನು ಪೂರೈಸಿದರು. ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ವಿ.ಅಮೀನ್, ಉಪಾಧ್ಯಕ್ಷ ವೈ. ಸುಕುಮಾರ್, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಉಡುಪಿ ತಾ. ಪಂ. ಅಧ್ಯಕ್ಷ ನೀತಾ ಗುರುರಾಜ್, ಗ್ರಾ. ಪಂ. ಸದಸ್ಯರಾದ ಶ್ರೀನಿವಾಸ ಶರ್ಮ, ಲಕ್ಷ್ಮಣ್ ಸುವರ್ಣ, ಗುತ್ತಿನಾರ್ ವಿಶುಕುಮಾರ್ ಶೆಟ್ಟಿಬಾಲ್, ರವಿ ಶೆಟ್ಟಿ, ಮಿಥುನ್ ಆರ್.ಹೆಗ್ಡೆ, ರಮಾಕಾಂತ್ ದೇವಾಡಿಗ, ಮಹಮ್ಮದ್ ಕೌಸರ್, ಶೇಖರ್, ಜೀವನ್, ರಮೀಝ್ ಹುಸೈನ್ ಗುತ್ತಿಗೆದಾರ ಶರೀಫ್ ಹೆಜಮಾಡಿ ಮತ್ತಿತರಿದ್ದರು.