ಬಸ್ತಿಪಡ್ಪು ಶ್ರೀ ಧೂಮಾವತಿ ದೈವಸ್ಥಾನಕ್ಕೆ ನೂತನ ವರಾಹ ಬಂಡಿ

ಪಡುಬಿದ್ರಿ ಸಮೀಪದ ಹೆಜಮಾಡಿಯ ಬಸ್ತಿಪಡ್ಪು ಶ್ರೀ ಧೂಮಾವತಿ ದೈವಸ್ಥಾನಕ್ಕೆ ನೂತನ ವರಾಹ ಬಂಡಿಯನ್ನು ಧೂಮಾವತಿ ಯುವ ಸೇವಾ ಸಮಿತಿ ವತಿಯಿಂದ ನಿರ್ಮಿಸಲು ಸಂಕಲ್ಪಿಸಿದ್ದು, ಈ ಬಗ್ಗೆ ಅರ್ಚಕ ಹಾಗೂ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿಯವರಿಗೆ ನಿಧಿ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಧೂಮಾವತಿ ಯುವ ಸೇವಾ ಸಮಿತಿಯ ಗೌರವಾಧ್ಯಕ್ಷ ಪ್ರಬೋದ್‍ಚಂದ್ರ ದೊಡ್ಡಮನೆ, ಅಧ್ಯಕ್ಷ ಅಶ್ವಿನ್ ಆರ್.ಅಮೀನ್, ಸಂಚಾಲಕ ರವೀಂದ್ರ ಹೆಜ್ಮಾಡಿ, ತಾರಾನಾಥ ಎಚ್.ಬಿ., ರಾಘು ಕೋಟ್ಯಾನ್ ಕೋಚತೋಟ, ಜಯಕರ ಬಂಗೇರ ಗುಂಡಿಮನೆ, ಶ್ರೀಕಾಂತ ಆರ್.ಅಮೀನ್, ಕೀರ್ತಿರಾಜ್ ದೇವಾಡಿಗ, ಶ್ರೀನಿವಾಸ ಕೋಟ್ಯಾನ್ ಉಪಸ್ಥಿತರಿದ್ದರು.