ಬಪ್ಪನಾಡು ಸರಳ ಜಾತ್ರಾ ಮಹೋತ್ಸವ-ಭಕ್ತರಿಗೆ ನಿರ್ಬಂಧ

ಮೂಲ್ಕಿ: ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಎಪ್ರಿಲ್ 7ರಿಂದ 14ರವರೆಗೆ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವು ಕೊರೊನಾ ಮುಂಜಾಗೃತಾ ಹಿನ್ನೆಲೆಯಲ್ಲಿ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ಆಗಮ ಶಾಸ್ತ್ರೋಕ್ತವಾಗಿ ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸೂಚನೆಯ ಪ್ರಕಾರ ತಂತ್ರಿಗಳು, ಅರ್ಚಕರು, ಆಡಳಿತ ಮಂಡಳಿ ಮತ್ತು ಸೀಮಿತ ನೌಕರರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲಿದೆ.

ಇಲಾಖೆಯ ಆದೇಶಾನುಸಾರ ಎಲ್ಲಿಯೂ ಭಕ್ತರಿಗೆ ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಜಾತ್ರೆಯನ್ನು ಅತ್ಯಂತ ಸರಳವಾಗಿ ಸಂಪ್ರದಾಯಕ್ಕೆ ಅಡ್ಡಿಯಾಗದಂತೆ ಮಾಡುವ ಯೋಜನೆಯೊಂದಿಗೆ ಉತ್ಸವಾದಿ ಆಚರಣೆಗಳು ಸರಳ ರೀತಿಯಲ್ಲೇ ನಡೆಯಲಿದ್ದು, ಭಕ್ತರು ದೇಗುಲಕ್ಕೆ ಬಾರದೆ ಮನೆಯಲ್ಲೇ ಕುಳಿತು ಪ್ರಾರ್ಥನೆ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ. ವಿನಂತಿಸಿದ್ದಾರೆ.

ಎ.7 ರಿಂದ ದೇವಳದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ದೇವಳದ ಒಳಾಂಗಣದಲ್ಲೇ ಉತ್ಸವ ಆಚರಣೆಗಳು ನಡೆಯಲಿದೆ. ಬಳಿಕ ಎ.14ರವರೆಗೆ ನಡೆಯಲಿರುವ ಪೇಟೆ ಸವಾರಿ, ಕೊಪ್ಪಲ ಸವಾರಿ, ಬಾಕಿಮಾರು ದೀಪೋತ್ಸವ, ಕೆರೆ ದೀಪೋತ್ಸವ, ಶಯನೋತ್ಸವ, ಮಹಾ ರಥೋತ್ಸವ ಸಹಿತ ವಿವಿಧ ಉತ್ಸವಾದಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಅದೇ ರೀತಿ ಜಾತ್ರೆ ಸಂದರ್ಭ ಹೂವು ಮತ್ತು ಸಂತೆ ಅಂಗಡಿ ಮುಂಗಟ್ಟುಗಳಿಗೆ ಅವಕಾಶ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿ