ಬಪ್ಪನಾಡು ದೇವಿಯ ಸ್ವರ್ಣ ಪಲ್ಲಕ್ಕಿಗೆ ವೃಕ್ಷ ಛೇದನ ಮುಹೂರ್ತ

ಮೂಲ್ಕಿ ಒಂಭತ್ತು ಮಾಗಣೆ 32 ಗ್ರಾಮಗಳ ಭಕ್ತರ ಸಂಕಲ್ಪದಂತೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಿಗೆ 15 ಕೆಜಿ ಚಿನ್ನ ಮತ್ತು 15 ಕೆಜಿ ಬೆಳ್ಳಿ ಬಳಸಿ ಸಮರ್ಪಿಸಲಿರುವ ಸ್ವರ್ಣ ಪಲ್ಲಕ್ಕಿಗೆ ಉಪಯೋಗಿಸಲು ನಿರ್ಧರಿಸಿದಂತೆ ಮಂಗಳವಾರ ಗೇರುಕಟ್ಟೆಯಲ್ಲಿ ವೃಕ್ಷ ಛೇದನ ಮುಹೂರ್ತ ನಡೆಯಿತು.

ಭಕ್ತರಾದ ಬಿ.ವಿಶ್ವನಾಥ್ ಮತ್ತು ಚೆನ್ನಪ್ಪ ಬಿಎಸ್-ಶೋಭಾ ಚೆನ್ನಪ್ಪ ದಂಪತಿ ತಮ್ಮ ತೋಟದಲ್ಲಿ ಬೆಳೆದ ಸಾಗುವಾನಿ ಮರವನ್ನು ಸ್ವ ಇಚ್ಛೆಯಿಂದ ಶ್ರೀ ದೇವಿಗೆ ನೀಡಲು ಸಂಕಲ್ಪಿಸಿದ್ದು,ಅದರಂತೆ ತುಳಸೀ ಪೂಜೆಯ ಶುಭ ದಿನದಂದು ವೃಕ್ಷ ಛೇದಕ ಪ್ರಕ್ರಿಯೆಯು ನಡೆಯಿತು. ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಗೇರುಕಟ್ಟೆಯ ಬಿ.ವಿಶ್ವನಾಥ್‍ರವರ ಮನೆಗೆ ತೆರಳಿ ಧಾರ್ಮಿಕ ವಿಧಿವಿಧಾನ ಬಳಿಕ ವೃಕ್ಷ ಛೇದಕಕ್ಕೆ ಮುಹೂರ್ತ ನಡೆಸಲಾಯಿತು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ ಧಾರ್ಮಿಕ ವಿಧಿಗಳನ್ನು ನಡೆಸಿದರು.ವೇದಮೂರ್ತಿ ವಾದಿರಾಜ ಉಪಾಧ್ಯಾಯ ಪ್ರಾರ್ಥನೆ ನೆರವೇರಿಸಿದರು.ಸಮಿತಿಯ ಗೌರವಾಧ್ಯಕ್ಷ ಹಾಗೂ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಮ್‍ಎಚ್ ಅರವಿಂದ ಪೂಂಜಾ ಕ್ಷೀರಾಭಿಷೇಕ ನಡೆಸಿ ವೃಕ್ಷ ಛೇದನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ದೇವಳದ ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್‍ಎಸ್ ಮನೋಹರ ಶೆಟ್ಟಿ,ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರುಗಳಾದ ಕರುಣಾಕರ ಶೆಟ್ಟಿ ಮತ್ತು ಎಚ್‍ವಿ ಕೋಟ್ಯಾನ್,ಪದಾಧಿಕಾರಿಗಳಾದ ಸುನಿಲ್ ಆಳ್ವ,ಸೂರ್ಯಕುಮಾರ್,ಸಂತೋಷ್‍ಕುಮಾರ್ ಹೆಗ್ಡೆ,ಉದಯ ಶೆಟ್ಟಿ ಶಿಮಂತೂರು,ಮುರಳೀಧರ ಭಂಡಾರಿ,ಅಶೋಕ್‍ಕುಮಾರ್ ಶೆಟ್ಟಿ,ಕೃಷ್ಣ ಆರ್.ಶೆಟ್ಟಿ,ಸಂಜೀವ ದೇವಾಡಿ,ನಾಗೇಶ್ ಬಪ್ಪನಾಡು,ಚಂದ್ರಶೇಖರ ಸುವರ್ಣ,ಶಿವ ಶೆಟ್ಟಿ,ಧನಂಜಯ ಮಟ್ಟು,ಎನ್‍ಡಿ ಬಂಗೇರ,ಮೋಹನದಾಸ್,ಸುಂದರ ಕುಬೆವೂರು,ರಂಜನ್ ಶೆಟ್ಟಿ,ಶಶೀಂದ್ರ ಸಾಲ್ಯಾನ್,ರಾಘು ಸುವರ್ಣ,ಕಮಲಾಕ್ಷ ಬಡಗುಹಿತ್ಲು,ಹರೀಶ್ವಂದ್ರ ದೇವಾಡಿಗ ,ದೊಡ್ಡಣ್ಣ ಮೊೈಲಿ,ವಿಶ್ವನಾಥ ಬಪ್ಪನಾಡು,ಸುರೇಶ್ ಬಂಗೇರ,ಕುಮಾರ್ ಕುಬೆವೂರು,ಕಿಶೋರ್ ಶೆಟ್ಟಿ,ಪುರುಷೋತ್ತಮ ಬಡಗುಹಿತ್ಲು,ದೇವಪ್ರಸಾದ್ ಪುನರೂರು,ಗಗನ್ ಸುವರ್ಣ,ಶೀನ ಸಾಲ್ಯಾನ್,ರವೀಂದ್ರ ಶೆಟ್ಟಿ,ವಿಜಯಕುಮಾರ್ ಕುಬೆವೂರು ,ನಾಗೇಶ್ ಕೋಟ್ಯಾನ್ ಉಪಸ್ಥಿತರಿದ್ದರು.