ಬಪ್ಪನಾಡು ಜಳಕದ ಕೆರೆ ಸಮರ್ಪಣೆ

ಮೂಲ್ಕಿ: ಅದಮಾರು ಮಠಕ್ಕೆ ಸೇರಿದ ಚಂದ್ರಶ್ಯಾನುಭಾಗ ಕುದ್ರುವಿನಲ್ಲಿರುವ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಳಕದ ಕೆರೆ ಹಾಗೂ ಸಸಿಹಿತ್ಲು ಶ್ರೀ ಭಗವತಿ ದೇವಿ ಮತ್ತು ಪರಿವಾರ ಶಕ್ತಿಗಳು ನೃತ್ಯ ಸೇವೆಗೈಯುವ ಪರಿಸರದ ಜೀರ್ಣೋದ್ಧಾರಗೊಳಿಸಿ ದೇವರಿಗೆ ಸಮರ್ಪಿಸುವ ಕಾರ್ಯವನ್ನು ಅದಮಾರು ಮಠದ ಶ್ರೀ ವಿಶ್ವಪ್ರೀಯ ತೀರ್ಥ ಶ್ರೀ ಪಾದರು ಭಾನುವಾರ ಬೆಳಿಗ್ಗೆ ನಡೆಸಿದರು.

ಈ ಸಂದರ್ಭ ಶ್ರೀಗಳು ಸ್ಥಳದಲ್ಲಿರುವ ರಕ್ತೇಶ್ವರೀ ಕಟ್ಟೆಗೆ ಭೇಟಿ ನೀಡಿ ಪೂಜೆ ಸಮರ್ಪಿಸಿದರು.ಬಳಿಕ ಕೆರೆಯಲ್ಲಿ ದೀಪ ಬೆಳಗಿಸಿ ಮಂಗಳಾರತಿ ಸಮರ್ಪಿಸಿದರು.

ಈ ಸಂದರ್ಭ ಬಪ್ಪನಾಡು ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲ ಕೃಷ್ಣ ತಂತ್ರಿಗಳು, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ಪಿ., ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳಾದ ವಸಂತ ಶೆಣೈ, ನಾರಾಯಣ ಶೆಣೈ, ಬಾಬುರಾಯ ಶೆಣೈ, ಅತುಲ್ ಕುಡ್ವ, ಕ್ಷೇತ್ರದ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ನಾರಾಯಣ ಶೆಟ್ಟಿ, ಕಾರ್ಯಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ, ಜಿಎಸ್.ಬಿ. ಬಡ ವಿದ್ಯಾರ್ಥಿ ಫಂಡ್ ಅಧ್ಯಕ್ಷ ವಾಸುದೇವ ಆರ್ ಕುಡ್ವ, ವಿಜಯಾ ಕಾಲೇಜು ಆಡಳಿತ ಮಂಡಳಿ ಸದಸ್ಯ ಡಾ.ಎಂ.ಎ.ಆರ್.ಕುಡ್ವ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪದ್ಮಾ.ವಿ.ಕುಡ್ವ, ಶಾಂಭವಿ ಎ.ಕುಡ್ವ, ವಿ.ಶಿವರಾಮ ಕಾಮತ್, ಕೆ.ಸತೀಶ್ ಭಂಡಾರಿ, ಕೆ.ಸಿ.ಕಾಮತ್, ಮಾಧವ ಸನಿಲ್, ಚಂದ್ರಶೇಖರ ಸುವರ್ಣ, ವಿದ್ವಾನ್ ನಾಗೇಶ್ ಬಪ್ಪನಾಡು, ಲೀಲಾಕ್ಷ ಕರ್ಕೇರ, ಮೋಹನ್ ದಾಸ್, ಸುರೇಶ್ ಬಂಗೇರ ಮತ್ತಿತರರಿದ್ದರು.

ಅತುಲ್ ಕುಡ್ವ ಸ್ವಾಗತಿಸಿ ನಿರೂಪಿಸಿದರು.