ಬದಲಾವಣೆಗೆ ಒಗ್ಗಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ-ಮನೋಹರ ಶೆಟ್ಟಿ

ಪಡುಬಿದ್ರಿ: ಬದಲಾವಣೆ ಜಗದ ನಿಯಮ. ನಿರಂತರ ಬದಲಾವಣೆಗಳೊಂದಿಗೆ ನಾವು ನಮ್ಮೊಳಗೇ ಉತ್ತಮ ಬದಲಾವಣೆಗಳನ್ನು ತಂದುಕೊಂಡಾಗ ಹಾಗೂ ಉತ್ತಮ ವಿದ್ಯಾರ್ಜನೆಯೊಂದಿಗೆ ಉತ್ತಮ ಸಮಾಜದ ನಿರ್ಮಾಣವೂ ಸಾಧ್ಯ ಎಂದು ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಹೇಳಿದರು.
ಅವರು ಪಡುಬಿದ್ರಿಯ ಸಾಗರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲಾ 21ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಇನ್ನೋರ್ವ ಮುಖ್ಯ ಅತಿಥಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ಪಡುಬಿದ್ರಿಯಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಸರಕಾರದ 8 ಕೋಟಿ ರೂ. ಗಳ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆ ಸಹಿತ 2 ಕೋಟಿ ರೂ. ಗಳೊಂದಿಗೆ ರಸ್ತೆ ಅಗಲೀಕರಣ, ಹೆಜಮಾಡಿ, ಪಡುಬಿದ್ರಿ ಸೇತುವೆ ನಿರ್ಮಾಣಗಳಂತಹ ಹಲವು ಯೋಜನೆಗಳನ್ನು ಅನುಷ್ಟಾನಿಸಲಾಗುತ್ತಿದೆ. ಪರಿವರ್ತನೆಯ ಸಮಾಜದಲ್ಲಿ ನಾವು ನಮ್ಮನ್ನು ಒಗ್ಗಿಸಿಕೊಳ್ಳಬೇಕಿದೆ. ಮೊಗವೀರ ವಿದ್ಯಾಸಂಸ್ಥೆಯಾಗಿರುವ ಸಾಗರ ವಿದ್ಯಾಮಂದಿರದ ಸಾಧನೆಗಳಿಗಾಗಿ ಶಾಲಾಡಳಿತ ಮಂಡಳಿಯನ್ನು ಅಭಿನಂದಿಸುವೆನು ಎಂದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಸಭಾಧ್ಯಕ್ಷತೆಯನ್ನು ವಹಿಸಿಮಾತನಾಡಿ, ಶಾಲಾ ವಿದ್ಯಾರ್ಥಿಗಳ ಕ್ರೀಡಾರಂಗದ ಹಾಗೂ ಶೈಕ್ಷಣಿಕ ಸಾಧನೆಗಳನ್ನು ಶ್ಲಾಘಿಸಿದರು.

ಸನ್ಮಾನ: ಮಂಗಳೂರು ವಿವಿಯಲ್ಲಿ ಕಳೆದ ಬಾರಿಯ ಎಂ. ಎಸ್ಸಿಯಲ್ಲಿ ಪ್ರಥಮ ರ್ಯಾಂಕ್ ವಿಜೇತೆ, ಶಾಲಾ ಹಳೆ ವಿದ್ಯಾರ್ಥಿನಿ ಅಕ್ಷತಾ, ಹಾಗೂ ಮೊಗವೀರ ಯುವ ಸಾಧಕಿ ಪಿಎಚ್‍ಡಿ ಪದವೀಧರೆ ಡಾ.ಶಶಿಕಲಾ ಅವರನ್ನು ಗೌರವಿಸಲಾಯಿತು.

ಗೌರವ: ಕಬಡ್ಡಿಯಲ್ಲಿ ರಾಷ್ಟ್ರಮಟ್ಟದ ಸಾಧನೆಗಳೊಂದಿಗೆ ವಿದ್ಯಾಸಂಸ್ಥೆಯ ಕೀರ್ತಿಯನ್ನು ಉನ್ನತ ಮಟ್ಟಕ್ಕೇರಿಸಿದ ವಿದ್ಯಾರ್ಥಿನಿಯರನ್ನು ಶಾಲಾ ಕಬಡ್ಡಿ ಕೋಚ್ ಅಧ್ಯಾಪರ ಸಹಿತವಾಗಿ ಈ ವೇದಿಕೆಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಾಡಿಪಟ್ಣ ನಡಿಪಟ್ಣ ವಿದ್ಯಾಪ್ರಚಾರಕ ಸಂಘದ ಕಾರ್ಯದರ್ಶಿ ಹರೀಶ್ ಪುತ್ರನ್, ಶಾಲಾ ಮುಖ್ಯ ಶಿಕ್ಷಕಿ ಪದ್ಮಶ್ರೀ ರಾವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಕೋಟ್ಯಾನ್, ಶಾಲಾ ವಿದ್ಯಾರ್ಥಿ ನಾಯಕ ವಂಶ್ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರವಣ್ ಎಸ್. ಸುವರ್ಣ ಮತ್ತಿತರರು ವೇದಿಕೆಯಲ್ಲಿದ್ದರು.
ಶಾಲಾ ಸಂಚಾಲಕ ಸುಕುಮಾರ್ ಶ್ರೀಯಾನ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಪದ್ಮಶ್ರೀ ರಾವ್ ಶಾಲಾ ವರದಿ ವಾಚಿಸಿದರು. ಶಿಕ್ಷಕಿ ವಿನುತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಇನ್ನೋರ್ವ ಶಿಕ್ಷಕಿ ಲಿಡಿಯಾ ವಂದಿಸಿದರು.