ಫೆ.6: ಹೆಜಮಾಡಿ ದೇವಳದಲ್ಲಿ ಮುಷ್ಠಿ ಕಾಣಿಕೆ ಸಮರ್ಪಣೆ

ಪಡುಬಿದ್ರಿ: ಹೆಜಮಾಡಿಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಗ್ರಾಮದ ದೋಷ ಪರಿಹಾರಾರ್ಥ ಫೆಬ್ರವರಿ 6 ಬುಧವಾರ ಬೆಳಿಗ್ಗೆ 7.30 ಗಂಟೆಗೆ ಮೃತ್ಯುಂಜಯ ಹೋಮ,ಪ್ರಾಯಶ್ಚಿತ ಕಾರ್ಯಗಳು ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಲಿದೆ.
ದೇವಳದಲ್ಲಿ ನಡೆಸಿದ ಅಷ್ಟ ಮಂಗಳ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಗ್ರಾಮದ ದೋಷ ಪರಿಹಾರಾರ್ಥ ಹಾಗೂ ಮುಂಬರುವ ಜೀರ್ಣೋದ್ಧಾರಕ್ಕೆ ಅನುಜ್ಞೆ ಪಡೆಯುವ ಉದ್ದೇಶದಿಂದ ಪ್ರತಿ ಮನೆಯಿಂದ ಎಳ್ಳೆಣ್ಣೆ ಹಾಗೂ ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಲಿದೆ.
ಬೆಳಿಗ್ಗೆ 7 ಗಂಟೆಗೆ ಕಲಶಾಭಿಷೇಕ,12 ತೆಂಗಿನಕಾಯಿಯ ಗಣಹೋಮ,ನವಗ್ರಹ ಶಾಂತಿ,ದುರ್ಗಾ ನಮಸ್ಕಾರ ಪೂಜೆ,8.30ಕ್ಕೆ ಮೃತ್ಯುಂಜಯ ಹೋಮ,11.30ಕ್ಕೆ ಪೂರ್ಣಾಹುತಿ,ಮುಷ್ಠಿಕಾಣಿಕೆ,1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.