ಫೆ.16ರಿಂದ 26: ಹೆಜಮಾಡಿ ದೇವಳ ವರ್ಷಾವಧಿ ಮಹೋತ್ಸವ

ಪಡುಬಿದ್ರಿ: ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಮಹೋತ್ಸವವು ಫೆಬ್ರವರಿ 16ರಿಂದ ಆರಂಭಗೊಂಡು 26ರವರೆಗೆ ನಡೆಯಲಿದೆ.
ಫೆ.16 ರಂದು ರಾತ್ರಿ ವಾಸ್ತು ಹೋಮ, ರಾಕ್ಷೋಘ್ನ ಹೋಮಗಳೊಂದಿಗೆ ಉತ್ಸವದ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದೆ.

ಫೆ. 21 ಶುಕ್ರವಾರ ಮಹಾಶಿವರಾತ್ರಿಯಂದು ಬೆಳಿಗ್ಗೆ 11.05ಕ್ಕೆ ಧ್ವಜಾರೋಹಣ, ಫೆ.23 ಭಾನುವಾರ ಬೆಳಿಗ್ಗೆ ರುದ್ರಯಾಗ, ಫೆ.24 ಬೆಳಿಗ್ಗೆ ದುರ್ಗಾಹೋಮ, ರಾತ್ರಿ ಉತ್ಸವ ಬಲಿ, ಬಾಕಿಮಾರು ದೀಪ, ಫೆ.25 ರಾತ್ರಿ ಉತ್ಸವ ಬಲಿ, ಪಡು ಸವಾರಿ, ಫೆ.26 ಬುಧವಾರ ಮಧ್ಯಾಹ್ನ ಮಹಾರಥಾರೋಹಣ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10.30ಕ್ಕೆ ಮಹಾ ರಥೋತ್ಸವ, ಫೆ.27 ಬೆಳಿಗ್ಗೆ ಕವಾಟೋದ್ಘಾಟನೆ, ಫೆ.28 ಬೆಳಿಗ್ಗೆ ಧ್ವಜಾವರೋಹಣ, ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನಡೆಯಲಿದೆ.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಫೆ.21 ಸಂಜೆ 6.30ರಿಂದ ವಿವಿಧ ಭಜನಾ ಮಂಡಳಿಗಳಿಂದ ಆಹೋರಾತ್ರಿ ಭಜನೆ, ಫೆ.23 ರಾತ್ರಿ 8.30ರಿಂದ ಶಿವ ಫ್ರೆಂಡ್ಸ್ ಕಲಾವಿದರಿಂದ ತುಳು ಸಾಮಾಜಿಕ ನಾಟಕ, ಫೆ.26 ರಾತ್ರಿ 7 ಗಂಟೆಯಿಂದ ಶಿವಶಕ್ತಿ ಕ್ರಿಕೆಟರ್ಸ್ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿ