ಫೆ.11: ಕೊಳಚೂರು ಶ್ರೀ ಬ್ರಹ್ಮಬೈದರ್ಕಳ ಗರೊಡಿ ನೇಮೋತ್ಸವ

ಪಡುಬಿದ್ರಿ: ಇಲ್ಲಿನ ಕೊಳಚೂರು ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ನೇಮೋತ್ಸವ ಫೆ.11ರಂದು ನಡೆಯಲಿದೆ.

ಫೆ.10ರ ಸೋಮವಾರ ರಾತ್ರಿ ನೈವೇದ್ಯ ಮತ್ತು ಅಗೇಲು ಸೇವೆ ನಡೆಯಲಿದ್ದು, ನೇಮೋತ್ಸವದಂದು ಬೆಳಗ್ಗೆ ಶ್ರೀ ಸದ್ಗುರು ನಿತ್ಯಾನಂದ ಭಜಕ ವೃಂದ ಮುಂಬೈ ಇವರಿಂದ ಭಜನಾಮೃತ, ಮಧ್ಯಾಹ್ನ 12-30ರಿಂದ ಸಾರ್ವಜನಿಕ ಅನ್ನ ಪ್ರಸಾದ ವಿತರಣೆ, ರಾತ್ರಿ 7 ಗಂಟೆಯಿಂದ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಲಿದ್ದು, ಫೆ.12ರ ಸಂಜೆ ನಾಲ್ಕರ ಸುಮಾರಿಗೆ ಮಾಯೆಂದಾಲೆ ನೇಮೋತ್ಸವ ನಡೆಯಲಿದೆ.