ಪುಲ್ವಾಮಾ ಹುತಾತ್ಮ ಯೋಧನ ಕುಟುಂಬಕ್ಕೆ ಚಿತ್ರಾಪು ಗ್ರಾಮಸ್ಥರ ನೆರವು

ಮೂಲ್ಕಿ: ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಪೈಶಾಚಿಕ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್.ಹೊನ್ನಯ್ಯ-ಚಿಕ್ಕ ತಾಯಮ್ಮ ದಂಪತಿಯ ಪುತ್ರ ಹಾಗೂ ಕಲಾವತಿಯವರ ಪತಿ ವೀರಯೋಧ ಎಚ್.ಗುರುರವರ ಮನೆಗೆ ಮೂಲ್ಕಿಯ ಚಿತ್ರಾಪು ಗ್ರಾಮದ ಗ್ರಾಮಸ್ಥರು ಭೇಟಿ ನೀಡಿ ಸಾಂತ್ವನ ಹೇಳಿದ್ದಲ್ಲದೆ ತಾಯಿ ಹಾಗೂ ಪತ್ನಿಗೆ ಆರ್ಥಿಕ ನೆರವಾಗಿ ರೂ.50 ಸಾವಿರದ ಚೆಕ್‍ನ್ನು ವಿತರಿಸಿದರು.

ಚಿತ್ರಾಪುವಿನ ನಿವೃತ್ತ ಯೋಧ ಮಧುಕರ ಜಿ.ಸಾಲ್ಯಾನ್,ಸಮಾಜ ಸೇವಕ ಎಚ್.ವಾಸು ಪೂಜಾರಿ,ಚಿತ್ರಾಪು ಮೊಗವೀರ ಸಭೆಯ ಅಧ್ಯಕ್ಷ ಸಹದೇವ ಕರ್ಕೇರ,ಕಾರ್ಯದರ್ಶಿ ಧನಪಾಲ್ ಪುತ್ರನ್,ಸಮಾಜ ಸೇವಕ ಸಂದೀಪ್ ಸುವರ್ಣ,ಉದ್ಯಮಿ ವರುಣ್ ಪೂಜಾರಿ,ಯುವಕ ಮಂಡಲದ ಅಧ್ಯಕ್ಷ ನಿತೀಶ್ ಬಂಗೇರ,ಸುರೇಶ್ ಭಂಡಾರಿ,ದಯೇಶ್ ಪುತ್ರನ್,ಹರ್ಷಿತ್ ಉಪಸ್ಥಿತರಿದ್ದರು.